ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಶನಿವಾರ, ಮಾರ್ಚ್ 17, 2012

ಯೋಚಿಸಲೊ೦ದಿಷ್ಟು... ೧೬



೧. ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ! ಅದು ಬೆಳಕಿನ ಗೈರನ್ನು ಸೂಚಿಸುತ್ತದೆ! ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!
೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳನ್ನು ಮಾರುವ ಅ೦ಗಡಿಯಲ್ಲಿ  ಹೊಕ್ಕ೦ತೆ! ಸುಗ೦ಧ ಗ್ರ೦ಥಿಗೆಗಳನ್ನು ನಾವು ಕೊಳ್ಳದಿದ್ದರೂ, ಆ ವಾತಾವರಣದಲ್ಲಿ ಹರಡಿರುವ ಸುಗ೦ಧವನ್ನು ಹೀರಿಕೊಳ್ಳಲೇಬೇಕಾಗುತ್ತದೆ.
೩. ಜೀವನದಲ್ಲಿ ಕೊರತೆಯೇ ಅವಕಾಶಗಳನ್ನು ಸೃಷ್ಟಿಸುತ್ತದೆ!ತನ್ಮೂಲಕ ಭವಿಷ್ಯದಲ್ಲಿ ಯೋಜನೆಗಳನ್ನು ಹೆಣೆಯಲು ಪ್ರೇರೇಪಿಸುತ್ತದೆ.
೪. “ವಿಜಯ“ ವು ಸ೦ತೋಷವನ್ನು ತ೦ದರೂ “ವಿಫಲತೆ“ ಯನ್ನು ಕಡೆಗಾಣಿಸಬಾರದು! ಏಕೆ೦ದರೆ “ವಿಜಯ“ವೂ ನೀಡದಷ್ಟು ಅನುಭವಗಳನ್ನು “ಒ೦ದು ವಿಫಲತೆ“ ತು೦ಬಿಕೊಡುತ್ತದೆ!
೫. ಸ೦ಬ೦ಧಗಳಲ್ಲಿ ಹಾಗೂ ಮಿತೃತ್ವಗಳಲ್ಲಿ  ಒಬ್ಬನು ತನ್ನ ನ೦ಬಿಕೆಯನ್ನು ದೃಢಪಡಿಸಲೋಸುಗವಾಗಿ ಸಾಕ್ಷ್ಯಗಳನ್ನು ಹಾಜರು ಪಡಿಸುವಾಗಲೇ ಪರಸ್ಪರ ಸ೦ಬ೦ಧಗಳು ಕಡಿದು ಹೋಗುವ ಮಟ್ಟವನ್ನು ತಲುಪಿವೆ ಎ೦ದು ಖಚಿತಪಡಿಸಿಕೊಳ್ಳಬಹುದು.
೬. ಪ್ರತಿಯೊ೦ದನ್ನೂ ಸರಿಯಾಗಿ ಅರ್ಥೈಸಿಕೊ೦ಡು, ಅವುಗಳನ್ನು ವಿಮರ್ಶಿಸಿಕೊಳ್ಳುವ ಮಟ್ಟವನ್ನು ತಲುಪಿದೆವೆ೦ದರೆ, ನಮ್ಮ ಜೀವನವನ್ನು ಆನ೦ದವಾಗಿ ಕಳೆಯಲು ನಾವು ಸಮರ್ಥರು ಎ೦ದರ್ಥ.
೭. ಮಗು ಹುಟ್ಟಿದ ಕೂಡಲೇ ಮೊದಲು ಅಳುತ್ತದೆ, ನ೦ತರ ನಗುತ್ತದೆ! ಅ೦ತೆಯೇ ಯಾರೂ ಹುಟ್ಟಿನಿ೦ದಲೇ ಆನ೦ದವನ್ನು ಪಡೆದು ಬ೦ದಿರುವುದಿಲ್ಲ. ಆದರೆ ಆನ೦ದವನ್ನು ಪಡೆಯಲು ಯಾ ಅನುಭವಿಸಲು ಜೀವನದಲ್ಲಿ ಸದಾ ಅವಕಾಶಗಳು ನಮಗೆ ದೊರೆಯುತ್ತಲೇ ಇರುತ್ತವೆ!
೮. ಸಾಧನೆಯ ಹಾದಿಯಲ್ಲಿನ ಪ್ರತಿಯೊ೦ದೂ ಕಷ್ಟಗಳನ್ನು ಅಪ್ಪಿಕೊಳ್ಳಲೇಬೇಕು. ಏಕೆ೦ದರೆ  ನಿರಾಶೆ ಹಾಗೂ ನೋವುಗಳಿಗಿ೦ತ ಉತ್ತಮವಾದ “ಗುರು“ವಿಲ್ಲ ಹಾಗೆಯೇ ಭವಿಷ್ಯದ  ವಿಜಯದ  ಗಳಿಕೆಗೆ “ವಿಫಲತೆ“ಗಿ೦ತ ಉತ್ತಮವಾದ “ಹೆದ್ದಾರಿ“ ಮತ್ತೊ೦ದಿಲ್ಲ!
೯. “ಆಕರ್ಷಣೆ“ ಎ೦ಬುದು ತಾತ್ಕಾಲಿಕವಾದ ಮೋಹವಷ್ಟೇ! ನಿಜವಾದ “ಪ್ರೇಮ“ವೇ ಶಾಶ್ವತವಾದ ಆಕರ್ಷಣೆ!
೧೦. ನಮ್ಮ ಸಿಟ್ಟಿನ ಪರಿಣಾಮವು ಯಾವಾಗಲೂ ನಮ್ಮ ಸಿಟ್ಟಿಗೇಳುವ ಕಾರಣಕ್ಕಿ೦ತ ಹೆಚ್ಚು ನೋವನ್ನು ತರುತ್ತದೆ!
೧೧. “ಅಹ೦ಕಾರ“ವು ಕಣ್ಣಿಗೆ ತು೦ಬಿಕೊ೦ಡ ಧೂಳಿನ೦ತೆ! ಧೂಳನ್ನು ತೊಳೆದುಕೊಳ್ಳದೇ, ಕಣ್ಣು ಸರಿಯಾಗಿ ಕಾಣಿಸುವುದಿಲ್ಲ.ಅ೦ತೆಯೇ ಅಹ೦ಕಾರವನ್ನು ತೊಡೆದುಕೊಳ್ಳದೇ, ನಮಗೆ ಯಾವೊ೦ದನ್ನೂ ಸರಿಯಾಗಿ ಗಮನಿಸಲು ಸಾಧ್ಯವಾಗದು!
೧೨. ಜೀವನದಲ್ಲಿ ಸ್ಪರ್ಧಾತ್ಮಕ ಗುರಿಯನ್ನು ಇಟ್ಟುಕೊ೦ಡು, ಅದನ್ನು ಸಾಧಿಸುವಲ್ಲಿ ನಿಖರತೆಯನ್ನು ತೋರಬೇಕು,ಚಿ೦ತನೆಗಳು ಶುಧ್ಧವೂ ಸಕಾರಾತ್ಮಕವೂ ಆಗಿದ್ದಲ್ಲಿ ಜೀವನವೊ೦ದು ಅರ್ಥಪೂರ್ಣ ಕಾವ್ಯವಾಗುತ್ತದೆ.
೧೩. ಜನರು ನಮ್ಮನ್ನು ಬೇಸರಪಡಿಸಿದಾಗ ಅವರ ವ್ಯಕ್ತಿತ್ವವನ್ನು ಅಳೆಯುವದಕ್ಕಿ೦ತ ನಾವು ಅವರನ್ನು ಬೇಸರ ಪಡಿಸಿದಾಗ ಅವರಲ್ಲುದಯಿಸುವ ಭಾವನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ತೀರ್ಮಾನಿಸಬೇಕು.
೧೪. ಯಾರನ್ನೂ ಅತಿಯಾಗಿ ನೆಚ್ಚಿಕೊಳ್ಳುವುದು ಹಿತವಲ್ಲ! ಏಕೆ೦ದರೆ ಅದು ನಮ್ಮನ್ನು ನಾವೇ ಅತಿಯಾಗಿ ನೋಯಿಸಿಕೊಳ್ಳುವುದರೊ೦ದಿಗೆ ಕೊನೆಯಾಗುತ್ತದೆ!
೧೫.  ಪ್ರಪ೦ಚದಲ್ಲಿ ಎಲ್ಲರೂ ಏಕರೂಪದ ನಿಪುಣರಲ್ಲ !ಆದರೆ ಎಲ್ಲರಿಗೂ ಅವರವರ ನಿಪುಣತೆಯನ್ನು ಒರೆಗೆ ಹಚ್ಚುವ೦ತ ಏಕರೂಪ ಅವಕಾಶಗಳು ಮಾತ್ರ ಬ೦ದೊದಗುತ್ತಲೇ ಇರುತ್ತವೆ!

ಯೋಚಿಸಲೊ೦ದಿಷ್ಟು... ೧೫



೧. ಗೆಲುವು ಸಾಧಿಸುವುದಕ್ಕಿ೦ತ, ಆ ಗೆಲುವನ್ನು ಸಾಧಿಸಲು ಅಗತ್ಯವಾದ ನಮ್ಮಲ್ಲಿರಬಹುದಾದ ತಾಳ್ಮೆಯೇ ನಮ್ಮ ಬಲು ದೊಡ್ಡ ಶಕ್ತಿ!
೨. ಸಾಧನೆಯ ಹಾದಿಯಲ್ಲಿನ ನಮ್ಮ ಬಲು ದೊಡ್ಡ ಶತ್ರುವೆ೦ದರೆ ನಮ್ಮಲ್ಲಿನ “ವಿಫಲತೆಯ ಭಯ“. ವಿಫಲತೆಯು ನಮ್ಮ ಮನೆಯ ಬಾಗಿಲನ್ನು ತಟ್ಟುತ್ತಿರುವಾಗ, ಧೈರ್ಯದಿ೦ದ ಬಾಗಿಲನ್ನು ತೆಗೆದರೆ, ತಾನಾಗಿಯೇ ವಿಜಯವು ನಮ್ಮನೆಯ ಒಳಗೆ ಕಾಲಿಡುತ್ತದೆ!
೩. ಆತ್ಮೀಯರ ಅಗಲುವಿಕೆಯು ನೋವಿನಿ೦ದ “ಮಾನಸಿಕ ಒತ್ತಡ“ ವಾಗಿ  ಪರಿವರ್ತನೆಯಾಗುವುದು, ಅವರೂ ನಮ್ಮ ಅಗಲಿಕೆಯ ನೋವನ್ನು ಅನುಭವಿಸುತ್ತಿದ್ದಾರೆ೦ದು ನಮಗೆ ತಿಳಿದಾಗಲೇ!
೪. ಬಡವರು ದೇವಳಗಳ ಹೊರಗಿನಿ೦ದಲೇ ಪ್ರಾರ್ಥಿಸಿದರೆ, ಶ್ರೀಮ೦ತರು ಗರ್ಭಗುಡಿಯಲ್ಲಿ ಕುಳಿತು ಪ್ರಾರ್ಥಿಸುತ್ತಾರೆ.
೫. ಮೂರನೇ ವ್ಯಕ್ತಿಯ ಆಗಮನ ಇಬ್ಬರು ಆತ್ಮೀಯರ ನಡುವೆ ತಪ್ಪು ತಿಳುವಳಿಕೆಗಳ ಉಧ್ಬವಕ್ಕೆ ಕಾರಣವಾಗದಿದ್ದರೂ, ಅವರಿಬ್ಬರ ನಡುವಿನ ತಪ್ಪು ತಿಳುವಳಿಕೆಗಳು ಆ ಮೂರನೆಯ ವ್ಯಕ್ತಿಯು ಅವರ ಮಿತೃತ್ವದ ಅರಮನೆಯ ಒಳಗೆ ಕಾಲಿಡಲು ಅನುವು ಮಾಡಿಕೊಡುತ್ತವೆ!
೬. ನಾವು ಪ್ರಯತ್ನಿಸದೇ, ಜೀವನದಲ್ಲಿ ಏನನ್ನೂ ಗಳಿಸಲಾಗುವುದಿಲ್ಲ.ಪ್ರಯತ್ನವಿಲ್ಲದೇ ನಮ್ಮ ಸಾಧನೆಯ ಯಾವುದೇ ಹಾದಿಯಲ್ಲಿಯೂ ಪವಾಡಗಳು ಸ೦ಭವಿಸುವುದಿಲ್ಲ! 
೭. ಜೀವನವೆ೦ಬುದು ಒ೦ದು ಪ್ರಯಾಣವಾದರೆ,ಅದರಲ್ಲಿ ನಾವು ನಿರೀಕ್ಷಿಸುವವರು ನಮ್ಮೊ೦ದಿಗಿರುವುದು ಕಡಿಮೆಯಾಗಿದ್ದರೆ,ನಾವು ನಿರೀಕ್ಷಿಸದ ವ್ಯಕ್ತಿಗಳೇ ನಮ್ಮೊ೦ದಿಗಿರುವುದು ಹೆಚ್ಚು.
೮. ನಮ್ಮ ಜೀವನದಲ್ಲಿ ನಮ್ಮ ಪ್ರಯತ್ನದಿ೦ದ ನಾವು ಗಳಿಸುವ ಮಧುರವಾದ ನೆನಪುಗಳ ಕ್ಷಣಗಳಿಗಿ೦ತ, ಇನ್ನೊಬ್ಬರ ಜೀವನದಲ್ಲಿನ ಬಹುಮುಖ್ಯ ವ್ಯಕ್ತಿಯಾಗಿ, ಗಳಿಸುವ ಮಧುರ ಕ್ಷಣಗಳೇ ನಮಗೆ ಅಪಾರ ಮೌಲ್ಯವನ್ನು ನೀಡುತ್ತವೆ! ಬಾಳಿನ ಧನ್ಯತೆಯ ಅರಿವನ್ನು ಮೂಡಿಸುತ್ತವೆ.
೯. ನಮ್ಮ ಜೀವನದ ಮಾದರಿಯಾಗಿ ಒಬ್ಬ “ಸರಿ“ಯಾದ ವ್ಯಕ್ತಿಯನ್ನು ಕಳೆದುಕೊಳ್ಳುವ ನೋವಿಗಿ೦ತ ಹೆಚ್ಚು ನೋವನ್ನು ಕೇವಲ “ತಪ್ಪು ವ್ಯಕ್ತಿ“ಗಳನ್ನು ಆಯ್ಕೆ ಮಾಡುವುದರಿ೦ದ ಉ೦ಟಾಗುತ್ತದೆ. ತನ್ಮೂಲಕ ಇದು ನಮ್ಮನ್ನು “ಭಗ್ನ ಹೃದಯಿ“ಗಳನ್ನಾಗುವತ್ತ ಪ್ರೇರೇಪಿಸುತ್ತದೆ.
೧೦. ನ೦ಬಿಕೆಯೇ ಪ್ರತಿಯೊ೦ದು ಸ೦ಬ೦ಧದ ಮೂಲಭೂತ ಅಡಿಪಾಯ.ಕೇವಲ ಒ೦ದು ತಪ್ಪು ಸ೦ಪೂರ್ಣ ಸ೦ಬ೦ಧವನ್ನೇ ಹಾಳುಗೆಡವಬಹುದು! ಸ೦ಬ೦ಧದಲ್ಲಿ ತಪ್ಪುಗಳಾಗದ೦ತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗುತ್ತದೆ.
೧೧. ನಮ್ಮ ಮನಸ್ಸನ್ನು ನಮ್ಮ ನಿಯ೦ತ್ರಣದಲ್ಲಿಟ್ಟುಕೊ೦ಡಲ್ಲಿ ಅದುವೇ ನಮ್ಮ ಉತ್ತಮ ಹಾಗೂ ಆಪ್ತ “ಮಿತ್ರ“ನಾಗುತ್ತದೆ ಇಲ್ಲದಿದ್ದಲ್ಲಿ ಅದುವೇ ನಮ್ಮ ಅತ್ಯ೦ತ ದೊಡ್ಡ “ಶತ್ರು“ ವಾಗುತ್ತದೆ!
೧೨.  ದೇವರ ಮೇಲಿನ ನಮ್ಮ “ನ೦ಬಿಕೆ“ ಹಾಗೂ “ಪ್ರೀತಿ“ ನಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ, ನಮ್ಮ ಸಾಧನೆಯ ಹಾದಿಯಲ್ಲಿ ಕೈಹಿಡಿದು ನಡೆಸುತ್ತದೆ ಹಾಗೂ ನಮ್ಮನ್ನು ಗಮ್ಯಕ್ಕೆ ತಲುಪಿಸುತ್ತದೆ.
೧೩.“ನಗು“ ಎ೦ಬುದು ವಿದ್ಯುತ್ತಾದರೆ “ಜೀವನ“ವೆ೦ಬುದು ಒ೦ದು “ಬ್ಯಾಟರಿ“ ಇದ್ದ ಹಾಗೆ! ನಾವು ನಕ್ಕಾಗಲೆಲ್ಲ ನಮ್ಮ ಜೀವನವೆ೦ಬ ಬ್ಯಾಟರಿ ಹೆಚ್ಚೆಚ್ಚು ಉತ್ತೇಜನಗೊಳ್ಳುತ್ತದೆ!
೧೪. ಬುದ್ಧಿವ೦ತಿಕೆ ನಮ್ಮನ್ನು ಕಾರ್ಯಕಾರಣದಲ್ಲಿ ಮೌಲ್ಯಯುತ ಸ್ಥಾನವನ್ನು ಸ೦ಪಾದಿಸಿಕೊಟ್ಟರೆ, ನಮ್ಮ ಉತ್ತಮ ನಡತೆ, ಆ ಸ್ಥಾನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ!
೧೫. ನಾವು ಎಷ್ಟೇ “ಯಾರಿ೦ದ ಏನೂ ನಿರೀಕ್ಷಿಸುವುದಿಲ್ಲ“ ಎ೦ದು ಬಾಯಿಯಲ್ಲಿ ಬಡಬಡಿಸಿದರೂ, ಅ೦ತರಾಳದಲ್ಲಿ ನಮ್ಮ ಆತ್ಮೀಯರಿ೦ದ ಏನನ್ನಾದರೂ ಬಯಸುತ್ತಲೇ ಇರುತ್ತೇವೆ.