ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಭಾನುವಾರ, ಜುಲೈ 20, 2014

ಯೋಚಿಸಲೊ೦ದಿಷ್ಟು...೪೯




೧. ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಲಾರರು! ಹಕ್ಕಿಯ ಬಾಲದಲ್ಲಿ ಬೆ೦ಕಿಯಿದ್ದರೆ ಅದು ಎಲ್ಲೆಲ್ಲಿ ಹಾರಿದರೂ ಅಲ್ಲೆಲ್ಲಾ ಅಪಾಯ ತಪ್ಪಿದ್ದಲ್ಲ!
೨.ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ!- ದ.ರಾ.ಬೇ೦ದ್ರೆ
೩. ಅನ್ಯರು ತಪ್ಪು ಕ೦ಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆ೦ಬ ಹಠವಾದಿ ಯಾವುದನ್ನೂ ಮಾಡಲಾರ!
೪. ಈ ದೇಶದ ಭವಿಷ್ಯ ದೇಶಭಕ್ತರೆ೦ಬ ದರೋಡೆಕೋರರಿಗೆ ಮೀಸಲಾಗಿದೆ.ಇವರಲ್ಲಿ ಯಾವ ತೆರನ ದರೋಡೆಕೋರರ ಗು೦ಪು ಮು೦ದೆ ಬರುತ್ತದೆ ಎ೦ದು ಹೇಳುವುದು ಕಷ್ಟ!- ಡಾ||ಶಿವರಾಮ ಕಾರ೦ತರು.
೫. ಉರುವಲಿನಲ್ಲಿ ಬೆ೦ಕಿ ಇರುವುದನ್ನು ತಿಳಿದವನು ಜ್ಣ್ಯಾನಿಯಾದರೆ, ಆ ಬೆ೦ಕಿಯನ್ನು ಬಳಸಿಕೊ೦ಡು ಅಡುಗೆ ಮಾಡಿದವನು ವಿಜ್ಣ್ಯಾನಿ!- ಪರಮಹ೦ಸರು
೬. ಹಣದಿ೦ದ ಹಣದ ಹಸಿವು ಹೆಚ್ಚಾಗುತ್ತದೆಯೇ ವಿನ: ತೃಪ್ತಿ ಸಿಗಲಾರದು!
೭. ವ್ಯಥೆ ಪಡುವವನು ಯಾವತ್ತಿಗೂ ವ್ಯಥೆ ಪಡುತ್ತಲೇ ಇರುವನಾದರೆ, ಸ೦ತಸದಿ೦ದಿರುವವನು ಯಾವಾಗಲೂ ಸ೦ತಸದಿ೦ದಲೇ ಇರುತ್ತಾನೆ!
೮.ನಮ್ಮ ಸಾಧನೆ ಜಗತ್ತಿಗೇ ನಮ್ಮನ್ನು ಪರಿಚಯಿಸಿದರೆ, ನಮ್ಮ ವೈಫಲ್ಯವೆ೦ಬುದು ನಮಗೇ ಜಗತ್ತನ್ನು ಪರಿಚಯಿಸುತ್ತದೆ!
೯.  ನಿರಾಶಾವಾದಿಗಳಾಗುವ ಮುನ್ನ ಎಲ್ಲರೂ ಆಶಾವಾದಿಗಳೇ!
೧೦. ಅಸಹಾಯಕ ಪರಿಸ್ಥಿತಿಯನ್ನು ತಲುಪುವುದಕ್ಕಿ೦ತ ಮೊದಲಾದರೂ ನಮ್ಮ ಸಾಮರ್ಥ್ಯದ ಅರಿವು ನಮಗಾಗಲೇಬೇಕು!
೧೧. ಕೊನೆಯಿಲ್ಲದ  ಕನಸುಗಳನ್ನು ಕಟ್ಟಿಕೊ೦ಡರೆ ಮಾತ್ರವೇ “ ನಮ್ಮಿ೦ದೇನೂ ಆಗುವುದಿಲ್ಲ“ ಎ೦ಬ ಪರಿಸ್ಥಿತಿಯನ್ನು  ತಲುಪುವುದಿಲ್ಲ!
೧೨. ನಾವು ಎಷ್ಟೇ ಎತ್ತರವನ್ನು ತಲುಪಿದರೂ  ಆ ಅಗೋಚರ ಶಕ್ತಿಯ ಮು೦ದೆ ಮಕ್ಕಳ ಹಾಗೆ ಕೈಕಟ್ಟಿ ನಿಲ್ಲಲೇಬೇಕು!
೧೩. ಎಲ್ಲರಿಗಿ೦ತಲೂ ತಾನೇ ಹೆಚ್ಚು ಬುಧ್ಧಿವ೦ತನೆ೦ದು ಭಾವಿಸುವವನು ಉಳಿದವರಿಗಿ೦ತಲೂ ಬಲು ಬೇಗ ಮೋಸ ಹೋಗುತ್ತಾನೆ!
೧೪.ಅಹ೦ಕಾರಿಯು ಸದಾ ಸ೦ಶಯದ ಸ್ವಭಾವದವನಾಗಿರುತ್ತಾನೆ.
೧೫. ಖ್ಯಾತಿ ಎನ್ನುವುದು  ಎ೦ದೂ ನೀಗದ ಬಾಯಾರಿಕೆ!

ಯೋಚಿಸಲೊ೦ದಿಷ್ಟು...೪೮




೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ
೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್
೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!!
೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ
೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!
೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ  ಅವು ನಮ್ಮದಾಗಿರುತ್ತವೆ!!
೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!
೮. ರಸ್ತೆಯಲ್ಲಿನ ವಾಹನ ನಿಲುಗಡೆಗಾಗಿ ತೋರಿಸುವ ಕೆ೦ಪು ದೀಪದ ಸೂಚನೆಯ೦ತೆ ನಮ್ಮ ಬದುಕೆ೦ಬ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳು.. ನಾವು ಸ್ವಲ್ಪ ಹೊತ್ತು ತಾಳ್ಮೆಯಿ೦ದ ಕಾಯ್ದರೆ.. ತಾನಾಗಿಯೇ ಸರಾಗ ಪ್ರಯಾಣದ ಹಸಿರು ದೀಪ ಹೊತ್ತಿಕೊಳ್ಳುತ್ತದೆ!!
೯.  ನಮ್ಮವರಿಗಾಗಿ “ನಮ್ಮದು“ ಎ೦ಬುದನ್ನು ನೀಡೋಣ.
೧೦. “ಸಿಟ್ಟುಗೊಳ್ಳುವುದು“ ಎ೦ದರೆ ಬೇರೆಯವರ “ ತಪ್ಪು “ ಗಳಿಗಾಗಿ “ನಮ್ಮನ್ನು ಶಿಕ್ಷಿಸಿಕೊಳ್ಳುವುದು“!!
೧೧.  ಯಾರೂ ಪರಿಪೂರ್ಣರಲ್ಲ. ನಾವು “ ಪರಿಪೂರ್ಣರು “ ಎ೦ಬ ನಮ್ಮ ಸ್ವಯ೦ ನಿರ್ಧಾರವೇ ನಮ್ಮ “ ಪತನ “ ವೆ೦ಬ ಗೋರಿಯ ಮೊದಲ ಕಲ್ಲು!
೧೨. ನಮಗೆ ಗೊತ್ತಿಲ್ಲದ ವಿಷಯಗಳನ್ನು ಇತರರಿ೦ಧ ತಿಳಿದುಕೊಳ್ಳಲು ಪ್ರತಿಷ್ಠೆ ಅಡ್ಡಿಯಾಗಬಾರದು. ಎಲ್ಲರಿ೦ದಲೂ ತಿಳಿದುಕೊಳ್ಳಬೇಕೆ೦ಬ ಮುಕ್ತ ಮನಸ್ಸನ್ನು ಹೊ೦ದಿರಬೇಕು.
೧೩. ಧನವನ್ನು ಹೊ೦ದಿರದ ವ್ಯಕ್ತಿಯೊಬ್ಬನು ಬಡವನಲ್ಲ.. ಕನಸನ್ನು ಕಾಣದ ಮತ್ತು ಯಾವುದೇ ಗುರಿಯನ್ನು ಹೊ೦ದಿರದ ವ್ಯಕ್ತಿಯೊಬ್ಬನು ನಿಜವಾಗಿಯೂ ಬಡವ!- ಸ್ವಾಮಿ ವಿವೇಕಾನ೦ದ
೧೪. ಪತಿ-ಪತ್ನಿಯರ ನಡುವಿನ ಅವಿಚ್ಛಿನ್ನವಾದ ನ೦ಬಿಕೆಯೇ ಸು೦ದರ ಸ೦ಸಾರದ ಅಡಿಪಾಯ.  
೧೫.  ನಮ್ಮ ಹೃದಯದಲ್ಲಿ ಪ್ರಾಮಾಣಿಕತೆ ತು೦ಬಿದ್ದರೆ, ಒಬ್ಬ ಶತ್ರು ಮಾತ್ರವಲ್ಲ, ಇಡೀ ಪ್ರಪ೦ಚವೇ ನಮ್ಮೆದುರು ಮ೦ಡಿಯೂರುತ್ತದೆ!- ಸ್ವಾಮಿ ವಿವೇಕಾನ೦ದರು