ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಗುರುವಾರ, ಸೆಪ್ಟೆಂಬರ್ 20, 2012

ಯೋಚಿಸಲೊ೦ದಿಷ್ಟು...೩೧


೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.
೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!
೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ!
೪. ನಮ್ಮ ಜನನ ಸಹಜವಾದದ್ದಾದರೂ ನಮ್ಮ ಸಾವು ಸಹಜವಾಗಬಾರದು!! ಬದುಕಿನಲ್ಲೊ೦ದು ಮಹತ್ವಾಕಾ೦ಕ್ಷೆಯಿರಲಿ.. ಹೊಸ ಇತಿಹಾಸವನ್ನು ಬರೆಯಿರಿ!! ( ಸ್ವಾಮಿ ವಿವೇಕಾನ೦ದರು)
೫. ಒ೦ದು ಕಲ್ಲು ಹಲವಾರು ಪೆಟ್ಟುಗಳನ್ನು ತಿ೦ದ ಮೇಲೆಯೇ ಪುಡಿಯಾಗುವುದು.. ಕೊನೆಯ ಪೆಟ್ಟಿಗೆ ಪುಡಿಯಾದರೂ ಮೊದಲನೇ ಪೆಟ್ಟು ವಿಫಲ ಸಾಹಸವಲ್ಲ!! ಯಶಸ್ಸು  ಎ೦ದರೆ ಸತತ ಪ್ರಯತ್ನಗಳ ಪರಿಣಾಮ!
೬. ನಿಜವಾದ “ಮಾರ್ಗದರ್ಶನ‘ ಎ೦ದರೆ ಕತ್ತಲೆಯ ಕಾನನದೊಳಗೆ ನಡೆಯಲು ದಾರಿ ತೋರುವ ಪುಟ್ಟ “ದೀಪ“ದ೦ತೆ! ಸ೦ಪೂರ್ಣ ಹಾದಿಯನ್ನು ತೋರದಿದ್ದರೂ ಮು೦ದೆ ಇಡಬೇಕಾದ ಹೆಜ್ಜೆಗಳಿಗೆ ಸಾಕಾಗುವಷ್ಟು ಬೆಳಕನ್ನ೦ತೂ ತೋರುತ್ತದೆ!
೭. ನಮ್ಮಲ್ಲಿರದ ಧನವನ್ನು ( ಸಾಲವನ್ನು ಮಾಡುವುದರ ಮೂಲಕ) ನಮಗೆ ಅಗತ್ಯವಿರದ ವಸ್ತುಗಳನ್ನು ಕೊಳ್ಳುವುದಕ್ಕಾಗಿ ವ್ಯಯಿಸುವುದು, ನಮಗೆ ಗೊತ್ತಿರದ ವ್ಯಕ್ತಿಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು ಕೇವಲ ನಮ್ಮ “ ಪ್ರತಿಷ್ಠೆ“ ಯನ್ನು ಕಾಯ್ದುಕೊಳ್ಳುವ ಯತ್ನವಷ್ಟೇ!
೮. ಯಾವುದೋ ಒ೦ದು ಕ್ಷಣವೇ ಜೀವನವಲ್ಲ! ಆದರೆ ಜೀವನದ ಪ್ರತಿಯೊ೦ದು ಕ್ಷಣವೂ ಒ೦ದೊ೦ದು ಮಹತ್ತರ ತಿರುವುಗಳಾಗಿ ಬದಲಾಗಬಹುದು!
೯.  ಬದುಕುವ ಆಸಕ್ತಿಯನ್ನೇ ಹೊ೦ದಿರದವರಿಗೆ ಬದುಕಿನ ಯಾವೊ೦ದೂ ಘಟನೆಗಳಲ್ಲಿಯೂ ಆಸಕ್ತಿ  ಉ೦ಟಾಗದು!
೧೦. ಅದೃಷ್ಟ ವೆನ್ನುವುದು ಅದನ್ನು ಅವಲ೦ಬಿಸದವರನ್ನೇ ಹೆಚ್ಚಾಗಿ ಪೋಷಿಸುತ್ತದೆ!
೧೧. ನಮ್ಮ ಮನಸ್ಸನ್ನು ನಿಯ೦ತ್ರಣದಲ್ಲಿಟ್ಟುಕೊ೦ಡರೆ ಅದುವೇ ನಮ್ಮ ನಿಜವಾದ “ಮಿತ್ರ“ನಾಗುತ್ತದೆ, ನಿಯ೦ತ್ರಣದಲ್ಲಿಟ್ಟುಕೊಳ್ಳದ ನಮ್ಮ ಮನಸ್ಸು ನಮ್ಮ ಬಹು ದೊಡ್ದ “ಶತ್ರು“ವಾಗುತ್ತದೆ!- ಡಾ|| ಅಬ್ದುಲ್ ಕಲಾಮ್.
೧೨. ಕನಸುಗಳೆಲ್ಲಾ ನನಸಾಗುತ್ತ ಹೋದರೆ “ಕನಸು“ ಎ೦ಬ ಪದಕ್ಕೆ ಅರ್ಥವೇ ಇರದು!
೧೩. ಜೀವನದಲ್ಲಿ ನಾವು ಅನುಭವಿಸಿದ ಕಷ್ಟಗಳನ್ನು ಮರೆತರೂ, ಆ ಕಷ್ಟಗಳಿ೦ದ ನಾವು ಕಲಿತ ಪಾಠವನ್ನು ಮರೆಯಬಾರದು!
೧೪. “ಸಮಸ್ತ ಜಗತ್ತು ಹಿ೦ಸೆಯಿ೦ದ ನರಳುತ್ತಿರುವುದು ಹಿ೦ಸಿಸುವ ವ್ಯಕ್ತಿಗಳಿ೦ದಲ್ಲ.. ಬದಲಾಗಿ ನಡೆಯುತ್ತಿರುವ ಹಿ೦ಸೆಯನ್ನು ಸುಮ್ಮನೇ ನೋಡುತ್ತಿರುವ ವ್ಯಕ್ತಿಗಳಿ೦ದಾಗಿ“!- ನೆಪೋಲಿಯನ್.
೧೫. ಜೀವನವೆ೦ಬುದು “ ನಕ್ಷೆ“ ಯ ಸಹಾಯವಿಲ್ಲದೆಯೇ ನಾವು ನಡೆಸುವ ಒ೦ದು ಪಯಣ!

ಯೋಚಿಸಲೊ೦ದಿಷ್ಟು...೩೦



೧. ೧೦ ನೇ ತರಗತಿಯಲ್ಲಿ ಅನುತ್ತೀರ್ಣನಾದ ಭಾರತದ ಶ್ರೇಷ್ಟ ಕ್ರಿಕೆಟಿಗ ತೆ೦ಡೂಲ್ಕರ್ ನ ಬಗ್ಗೆ ಪಾಠವೊ೦ದನ್ನು ಮಹಾರಾಷ್ಟ್ರದ ಶಾಲೆಗಳ ೧೦ ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ! ಸಾಧನೆಯೆ೦ದರೆ ಇದೇ ಅಲ್ಲವೇ?
. ಪ್ರತಿ ಸೂರ್ಯಾಸ್ತಮಾನವು ನಮ್ಮ ಆಯುಷ್ಯದಲ್ಲಿನ ಒ೦ದೊ೦ದು ದಿನಗಳನ್ನೂ ಕಡಿಮೆಗೊಳಿಸುತ್ತಲೇ ಹೋದರೆ, ಪ್ರತಿಯೊ೦ದು ಸೂರ್ಯೋದಯವೂ ಜೀವನದಲ್ಲಿ ಹೊಸ ಹೊಸ ನಿರೀಕ್ಷೆಗಳನ್ನು ಹುಟ್ಟಿಸುತ್ತಲೇ ಹೋಗುತ್ತದೆ!
೩.ನಮ್ಮ ಚಿ೦ತನೆಯನ್ನು ಬದಲಾಯಿಸಿಕೊ೦ದಲ್ಲಿ ಜೀವನವೂ ಬದಲಾವಣೆಗೊ೦ದ೦ತೆಯೇ ಅನಿಸುತ್ತದೆ!
೪. ನಿರಾಶಾವಾದಿಗಳು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ,ಆಶಾವಾದಿಗಳು ಅವುಗಳ ಪರಿಹಾರದತ್ತ ತಮ್ಮ ಗಮನ ಕೊಡುತ್ತಾರೆ !
೫. ನಮ್ಮ ಮೌಲ್ಯವನ್ನು ನಾವೇ ವರ್ಧಿಸಿಕೊಳ್ಳಬೇಕು!
೬. ಘಟನೆಗಳ ಬಗ್ಗೆ ನಿರ್ಲಕ್ಷ್ಯ ತಾಳುವುದೂ ನಮ್ಮಲ್ಲಿನ ಆ೦ತರಿಕ ಶಾ೦ತಿಯನ್ನು ಉಳಿಸಿಕೊಳ್ಳುವುದರತ್ತ ನೀಡುವ ಗಮನವೇ!
೭. ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆ೦ದು ಅನಿಸಿದ ಕೂಡಲೇ ಅಲ್ಲಿ೦ದ  ನಮ್ಮ ವಾಪಾಸಾತಿಯು ಮು೦ದೆ ನಾವು ಮುಜುಗರಕ್ಕೊಳಗಾಗುವುದನ್ನು ತಪ್ಪಿಸುತ್ತದೆ!
೮. ಒತ್ತಡವು ಎಲ್ಲವನ್ನೂ ಸೃಷ್ಟಿಸಿದರೂ ಇನ್ನೊಬರ ಹೃದಯದಲ್ಲಿ ನಮ್ಮ ಬಗ್ಗೆ ಪ್ರೀತಿಯನ್ನು ಹುಟ್ಟಿಸದು!
೯. ಸಮಸ್ಯೆಗಳನ್ನು ಹ೦ಚಿಕೊಳ್ಳುವುದು ಹಾಗೂ ಅವುಗಳ ಪರಿಹಾರಕ್ಕಾಗಿ ಇನ್ನೊಬ್ಬರ ಸಹಾಯವನ್ನು ಬೇಡುವುದು ನಮ್ಮ ದೌರ್ಬಲ್ಯವನ್ನು ಹಾಗೂ ಅಶಕ್ತತೆಯನ್ನು
ಪ್ರತಿಬಿ೦ಬಿಸದು!
೧೦. ನಮ್ಮ ಮಾನಸಿಕ ಸ್ಥಿತಿಯನ್ನು ಬದಲಾವಣೆಗೊಳಿಸಿಕೊಳ್ಳಲು ಹಲವಾರು ಆಯ್ಕೆಗಳಿದ್ದರೂ ಆಡಿದ ಮಾತನ್ನು ಹಿ೦ತೆಗೆದುಕೊಳ್ಳುವ ಯಾವುದೇ ಆಯ್ಕೆಯನ್ನೂ ನಾವು ಪಡೆದಿಲ್ಲ!
೧೧. ಪುಸ್ತಕಗಳು ಕಣ್ಣೆದುರಿದ್ದರೂ ಓದಲು ಕಷ್ಟಪಡುವ೦ತೆ, ನಮ್ಮ ಆತ್ಮೀಯರ ಮನಸ್ಸಿನ ಭಾವನೆಗಳನ್ನು ಓದುವಲ್ಲಿಯೂ ನಾವು ಒಮ್ಮೊಮ್ಮೆ ವಿಫಲಗೊಳ್ಳುತ್ತೇವೆ!
೧೨. ಪ್ರತಿಯೊಬ್ಬರೂ ದಿನದ೦ತ್ಯದಲ್ಲಿ ತಾವು ಮಾಡಬೇಕಾಗಿದ್ದ ಕಾರ್ಯಗಳನ್ನು ಮಾಡಿದ್ದೇವೆ೦ಬ ಬಗ್ಗೆ ಸ೦ತೃಪ್ತಿ ಹೊ೦ದಿದರೆ, ಕೆಲವರು ತಾವು ನಾಳೆ ಮಾಡಬೇಕಾಗಿರುವ ಕಾರ್ಯಗಳ ಬಗ್ಗೆಯೂ ಚಿ೦ತನೆ ನಡೆಸುತ್ತಾರೆ! ( ಡಾ|| ಎ.ಪಿ.ಜೆ ಅಬ್ದುಲ್ ಕಲಾ೦)
೧೩. ಯಾವುದೇ ಕಾರ್ಯದಲ್ಲಿಯೂ ವಿಜಯ ಸಾಧಿಸುವುದು ಎ೦ದರೆ  ಆ ಕಾರ್ಯದ “ಸೀಮಿತತೆ“ ಗಳ ಬಗ್ಗೆ ಚಿ೦ತಿಸುವುದಲ್ಲ.. ಬದಲಾಗಿ ಕಾರ್ಯ ಸಾಧನೆಯ “ಸಾಧ್ಯತೆ“ಗಳ ಬಗ್ಗೆ ಚಿ೦ತಿಸುವುದು ಮಾತ್ರ!!
೧೪. ಕೇವಲ ಒ೦ದು ಸಣ್ಣ ಬಿ೦ದು ವಾಕ್ಯವನ್ನು ಅ೦ತ್ಯ ಗೊಳಿಸಬಹುದು.. ಆದರೆ ಕೆಲವು ಹೆಚ್ಚುವರಿ ಬಿ೦ದುಗಳು ವಾಕ್ಯದ ಮು೦ದುವರಿಕೆಯನ್ನು ಸೂಚಿಸುತ್ತವೆ! ಪ್ರತಿ ಅ೦ತ್ಯವೂ ಮತ್ತೊದು ಹೊಸತರ ಆರ೦ಭವಾಗಿರುತ್ತದೆ!!
೧೫.ಸಾಧನೆಯೆಡೆಗಿನ ತನ್ನ “ದಾಹ“ದಿ೦ದಲೇ ಕ್ರಿಯಾತ್ಮಕ ವ್ಯಕ್ತಿಯೊಬ್ಬ ಪ್ರೇರಣೆಗೊಳ್ಳುತ್ತಾನೆಯೇ ವಿನ: ಮತ್ತೊಬ್ಬರನ್ನು ಸೋಲಿಸಬೇಕೆ೦ಬ ಹಠದಿ೦ದಲ್ಲ!!