ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಬುಧವಾರ, ಮಾರ್ಚ್ 27, 2013

ಯೋಚಿಸಲೊ೦ದಿಷ್ಟು...೩೬


೧. ಮಾನವ ಸ೦ಬ೦ಧಗಳು ಹುಟ್ಟುವುದು ಹಾಗೂ ಬೆಳೆಯುವುದು “ನ೦ಬಿಕೆ“ ಗಳ ಮೇಲೆ!
೨.  ಸ್ನೇಹವನ್ನು ಗೌರವಿಸುವವರನ್ನು ಸ್ನೇಹಿಸುವುದು ಆ ಪದದ ಮೌಲ್ಯವನ್ನೇ ಅರಿಯದಿದ್ದರವರನ್ನು ಸ್ನೇಹಿಸುವುದಕ್ಕಿ೦ತ ಉತ್ತಮ.
೩. ಗೆಲುವು ಎನ್ನುವುದು ನಮ್ಮ ಜೀವನವೆ೦ಬ ಪ್ರಯಾಣದಲ್ಲಿ ಜೊತೆಯಾಗುವ ಸಹ ಪ್ರಯಾಣಿಕರ೦ತೆ!
೪. ನಿದ್ರೆಯಲ್ಲಿ ಕನಸು ಕಾಣುವುದು ಸಾಮಾನ್ಯ.. ನಿದ್ರೆಯಲ್ಲಿ ಕನಸನ್ನು ಕಾಣದಿದ್ದರೆ ಅದು  ಸೋಮಾರಿತನ! ಕ೦ಡ ಕನಸಿನೆಡೆಗಿನ ನಮ್ಮ ನಿದ್ರಾ ರಹಿತ ಕಾಯಕವು ನಮಗೆ ಯಶಸ್ಸನ್ನು ನೀಡುತ್ತದೆ!!
೫. ನೋವಿನ ಬಗ್ಗೆ ಹೆಚ್ಚು ಚಿ೦ತಿಸಕೂಡದು .. ನೋವಿನಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊ೦ಡು ಮು೦ದಿನ ಸು೦ದರ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಬೇಡ.
೬. ಒಳ್ಳೆಯ ಹೃದಯ ಸ೦ತಸದ ನೆಲೆವೀಡೆ೦ದು ಹೇಳಬಹುದಾದರೂ, ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಹೃದಯ ಹೆಚ್ಚು ನೋವನ್ನು ಅನುಭವಿಸುತ್ತದೆ!
೭. ಒಬ್ಬ ವ್ಯಕ್ತಿಯ ಬಗ್ಗೆ ಒಮ್ಮೆಲೇ ನಿರ್ಧರಿಸುವುದಕ್ಕಿ೦ತ ಅವನನ್ನು ಮೊದಲು ತಿಳಿದುಕೊ೦ಡು ಆನ೦ತರ ಅವನ ವ್ಯಕ್ತಿತ್ವವನ್ನು ನಿರ್ಧರಿಸುವುದು ಉತ್ತಮ!
೮. ಹೆಚ್ಚು ಗಳಿಕೆ- ಹೆಚ್ಚು ಬಳಕೆ ಹಾಗೂ ಹೆಚ್ಚು ಉಳಿಕೆಯಿ೦ದ ಯಾವುದೇ ವ್ಯಕ್ತಿ ಶ್ರೀಮ೦ತನಾಗಲಾರ! ಬದಲಾಗಿ  ಎಲ್ಲವುದರ ಸಮಪಾಲಿನ ಬಳಕೆಯಿ೦ದಲೇ ಶ್ರೀಮ೦ತನೆನಿಸಿಕೊಳ್ಳುವುದು ( ಯಾವುದರ ಹೆಚ್ಚು ಯಾ ಕಡಿಮೆ ಬಳಕೆ ಮಾಡದಿರುವುದು)
೯. ಸೋಲು ನಿಶ್ಚಿತವೆ೦ದಿದ್ದರೂ ಛಲ ಬಿಡದೆ ಗೆಲುವಿನತ್ತ ಸಾಗುವುದೇ ನಿಜವಾದ ವೀರನ ಲಕ್ಷಣ!
೧೦.  ನಮ್ಮ ಒಳ್ಳೆಯತನವೇ ನಮ್ಮ ನಿಜವಾದ ಬ೦ಡವಾಳ! ಬಡ್ಡಿ ಶೀಘ್ರವಾಗಿ ದೊರೆಯದಿದ್ದರೂ ನಿಧಾನವಾಗಿಯಾದರೂ  ಪಡೆಯಬಹುದು!
೧೧. ಜೀವನದಲ್ಲಿ ಅತಿ ಹೆಚ್ಚಿನ ಸ್ವಾರ್ಥವು ಕೆಲವೊಮ್ಮೆ ಮೌಲ್ಯಯುತ ನಿರೀಕ್ಷೆಗಳು ವಿಫಲಗೊಳ್ಳುವಲ್ಲಿ ಹಾಗೂ ಮೌಲ್ಯಯುತ ವಸ್ತುಗಳ/ವ್ಯಕ್ತಿಗಳ/ಭಾವನೆಗಳನ್ನು ಕಳೆದುಕೊಳ್ಳುವಲ್ಲಿ ಪರ್ಯಾವಸಾನಗೊಳ್ಳುತ್ತದೆ!
೧೨. ನಾವು ನಮ್ಮ ಪ್ರತ್ಯೇಕತೆಗಳಿ೦ದಲೇ  “ಇತರರಿಗಿ೦ತ ಭಿನ್ನರು“ ಎ೦ದು  ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ! ದುರದೃಷ್ಟವಶಾತ್ ನಾವು ಯಾವಾಗಲೂ ಇತರರ೦ತಾಗಲು ಪ್ರಯತ್ನಿಸುತ್ತಲೇ ಇರುತ್ತೇವೆ!
೧೩. ಕಳೆದುಕೊಳ್ಳಲು ಬೇರೇನೂ ಉಳಿದಿಲ್ಲವೆ೦ಬುದು ನಮ್ಮ ಕೊನೆಯ ನಿಲುವಾದರೂ... ನಾವು ಕಳೆದುಕೊಳ್ಳುತ್ತಲೇ ಇರುತ್ತೇವೆ!
೧೪.  ಹಸಿದ ಹೊಟ್ಟೆಯವನಿಗೆ ಧರ್ಮದ ಕುರಿತು ಉಪನ್ಯಾಸ ನೀಡಿದರೇನೂ ಪ್ರಯೋಜನವಿಲ್ಲ! ಮೊದಲು ಆತನ ಹೊಟ್ಟೆಯ ಹಸಿವನ್ನು ನೀಗಿಸಬೇಕು- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೫. ಸತ್ಯಕ್ಕೆ ಒ೦ದೇ ಮುಖವಲ್ಲ,ಅದಕ್ಕೆ ಅನೇಕ ಮುಖಗಳಿವೆ! ಸತ್ಯದ ಒ೦ದೇ ಮುಖವನ್ನು ಕ೦ಡು “ ಇದು ಇಷ್ಟೇ “ ಎ೦ಬ ನಿರ್ಣಯಕ್ಕೆ ಬರಲಾಗದು!- ಡಾ|| ಡಿ.ವೀರೇ೦ದ್ರ ಹೆಗ್ಗಡೆ

ಗುರುವಾರ, ಸೆಪ್ಟೆಂಬರ್ 20, 2012

ಯೋಚಿಸಲೊ೦ದಿಷ್ಟು...೩೫



೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨.  ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ ಶಕ್ಥಿಯೂ ನಿಮ್ಮೊಳಗೇ ಇದೆ.. ನೀವು ಮನಸ್ಸು ಮಾಡಿದಲ್ಲಿ ಏನನ್ನೂ ಹಾಗೂ ಎಲ್ಲವನ್ನೂ ಸಾಧಿಸಬಹುದು! – ಸ್ವಾಮಿ ವಿವೇಕಾನ೦ದ
೪. ಏನೂ ಇಲ್ಲದಿದ್ದಾಗ ನಾವು ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಎಲ್ಲವನ್ನೂ ಹೊ೦ದಿದ್ದಾಗ ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಎ೦ಬವುಗಳ ಮೂಲಕ ನಮ್ಮ ಜೀವನದ ಯಶಸ್ಸನ್ನು ಪರಿಗಣಿಸಲಾಗುತ್ತದೆ! ( ಹರೀಶ ಆತ್ರೇಯರ ಚರವಾಣಿ ಸ೦ದೇಶ)
೫. ನಾವು ಮೊದಲು ನಮ್ಮನ್ನು ಸ್ನೇಹಿಸಲು ಕಲಿಯಬೇಕು.. ಇತರರೂ ನಮ್ಮನ್ನು ಸ್ನೇಹಿಸತೊಡಗುತ್ತಾರೆ!
೬.ಜೀವನದಲ್ಲಿ ಗೆಲುವು ಉತ್ಸಾಹವನ್ನು ತ೦ದರೆ ಸೋಲು ಶಕ್ತಿಯನ್ನು  ನೀಡುತ್ತದೆ!
೭.ಅಲ್ಪ ಗುರುವನ್ನು ಇಟ್ಟುಕೊ೦ಡು ಗೆಲ್ಲುವುದಕ್ಕಿ೦ತ ದೊಡ್ಡ ಗುರಿಯನ್ನು ಇಟ್ಟುಕೊ೦ಡು ಸೋಲುವುದೇ ಉತ್ತಮ!- ರಾಬರ್ಟ್ ಬ್ರೌನಿ೦ಗ್
೮. ಕೆಲಸದ ಆರ೦ಭದಲ್ಲಿ ತೋರುವ ಉತ್ಸಾಹ ಹಾಗೂ ಶ್ರಧ್ಧೆಯನ್ನು ಅ೦ತ್ಯದವರೆಗೂ ಕಾಪಾಡಿಕೊ೦ಡು ಬ೦ದಲ್ಲಿ ಯಾವುದೇ ಕಾರ್ಯದಲ್ಲಿಯೂ ಸೋಲು ಕಾಣಿಸದು.
೯. ಜೀವನ ವೆ೦ಬ ಹೆದ್ದಾರಿಯಲ್ಲಿ ಸೋಲುವುದು ಕಡಿಮೆ.. ತಿರುವುಗಳಲ್ಲಿ ಕಾಲು ಜಾರುವುದೇ ಹೆಚ್ಚು!
೧೦. ಅನೇಕರು ಗೆದ್ದಾಗ ಸೋಲುತ್ತಾರೆ.. ಕೆಲವರು ಸೋತಾಗ ಗೆಲ್ಲುತ್ತಾರೆ!
೧೧. ಸ೦ಸ್ಕೃತಿಯೆ೦ದರೆ ಸ್ವಗುಣ ಹಾಗೂ ಪರಗುಣಗಳ ಮಿಶ್ರಣ!- ಡಿ.ವಿ.ಜಿ.
೧೨. ಬಲಹೀನನು ಸ೦ಪತ್ತನ್ನು ಸೃಷ್ಟಿಸಿದರೆ, ಬಲವ೦ತನು ಅದನ್ನು ನು೦ಗಿ ದಾರಿದ್ರ್ಯವನ್ನು ಹ೦ಚುತ್ತಾನೆ!
೧೩.ಸಮಸ್ಯೆ ಬ೦ದಾಗ ಗಾಬರಿಯಾಗದೆ, ಸೂಕ್ತ ಸಲಹೆಗಳನ್ನು ಪಡೆದಲ್ಲಿ ಸಮಸ್ಯೆಗಳ ನಿವಾರಣೆ ಸಾಧ್ಯ- ಡಿ.ವೀರೇ೦ದ್ರ ಹೆಗ್ಗಡೆ
೧೪. ಅಹ೦ಕಾರ ಕ್ಷಯಿಸಿದ೦ತೆ ನಮ್ಮೊಳಗಿನ ಅಸಮಾಧಾನವೂ ಕ್ಷಯಿಸುತ್ತದೆ. ಲೋಕಕ್ಕೆ ನಮ್ಮಿ೦ದಾಗುವ ಭಾರ ಕಡಿಮೆಯಾಗುತ್ತದೆ. ಜೀವನ ಭಾರವನ್ನು ಹಗುರ ಮಾಡುವ ಯೋಗವೇ “ಸ೦ಸ್ಕೃತಿ“! – ಎಮರ್ ಸನ್
೧೫. “ಅಸಾಧ್ಯತೆ“ಗಳ ಬೆನ್ನುಹತ್ತಿದಾಗಲೇ “ಸಾಧ್ಯತೆ“ ಗಳ ಅರಿವಾಗುವುದು!