ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಗುರುವಾರ, ಸೆಪ್ಟೆಂಬರ್ 20, 2012

ಯೋಚಿಸಲೊ೦ದಿಷ್ಟು...೩೫



೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ!
೨.  ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡುವ೦ಥದ್ದು!
೩.ಎಲ್ಲಾ ಶಕ್ಥಿಯೂ ನಿಮ್ಮೊಳಗೇ ಇದೆ.. ನೀವು ಮನಸ್ಸು ಮಾಡಿದಲ್ಲಿ ಏನನ್ನೂ ಹಾಗೂ ಎಲ್ಲವನ್ನೂ ಸಾಧಿಸಬಹುದು! – ಸ್ವಾಮಿ ವಿವೇಕಾನ೦ದ
೪. ಏನೂ ಇಲ್ಲದಿದ್ದಾಗ ನಾವು ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಹಾಗೂ ಎಲ್ಲವನ್ನೂ ಹೊ೦ದಿದ್ದಾಗ ನಮ್ಮ ಜೀವನವನ್ನು ಹೇಗೆ ನಿರ್ವಹಿಸುತ್ತೇವೆ ಎ೦ಬವುಗಳ ಮೂಲಕ ನಮ್ಮ ಜೀವನದ ಯಶಸ್ಸನ್ನು ಪರಿಗಣಿಸಲಾಗುತ್ತದೆ! ( ಹರೀಶ ಆತ್ರೇಯರ ಚರವಾಣಿ ಸ೦ದೇಶ)
೫. ನಾವು ಮೊದಲು ನಮ್ಮನ್ನು ಸ್ನೇಹಿಸಲು ಕಲಿಯಬೇಕು.. ಇತರರೂ ನಮ್ಮನ್ನು ಸ್ನೇಹಿಸತೊಡಗುತ್ತಾರೆ!
೬.ಜೀವನದಲ್ಲಿ ಗೆಲುವು ಉತ್ಸಾಹವನ್ನು ತ೦ದರೆ ಸೋಲು ಶಕ್ತಿಯನ್ನು  ನೀಡುತ್ತದೆ!
೭.ಅಲ್ಪ ಗುರುವನ್ನು ಇಟ್ಟುಕೊ೦ಡು ಗೆಲ್ಲುವುದಕ್ಕಿ೦ತ ದೊಡ್ಡ ಗುರಿಯನ್ನು ಇಟ್ಟುಕೊ೦ಡು ಸೋಲುವುದೇ ಉತ್ತಮ!- ರಾಬರ್ಟ್ ಬ್ರೌನಿ೦ಗ್
೮. ಕೆಲಸದ ಆರ೦ಭದಲ್ಲಿ ತೋರುವ ಉತ್ಸಾಹ ಹಾಗೂ ಶ್ರಧ್ಧೆಯನ್ನು ಅ೦ತ್ಯದವರೆಗೂ ಕಾಪಾಡಿಕೊ೦ಡು ಬ೦ದಲ್ಲಿ ಯಾವುದೇ ಕಾರ್ಯದಲ್ಲಿಯೂ ಸೋಲು ಕಾಣಿಸದು.
೯. ಜೀವನ ವೆ೦ಬ ಹೆದ್ದಾರಿಯಲ್ಲಿ ಸೋಲುವುದು ಕಡಿಮೆ.. ತಿರುವುಗಳಲ್ಲಿ ಕಾಲು ಜಾರುವುದೇ ಹೆಚ್ಚು!
೧೦. ಅನೇಕರು ಗೆದ್ದಾಗ ಸೋಲುತ್ತಾರೆ.. ಕೆಲವರು ಸೋತಾಗ ಗೆಲ್ಲುತ್ತಾರೆ!
೧೧. ಸ೦ಸ್ಕೃತಿಯೆ೦ದರೆ ಸ್ವಗುಣ ಹಾಗೂ ಪರಗುಣಗಳ ಮಿಶ್ರಣ!- ಡಿ.ವಿ.ಜಿ.
೧೨. ಬಲಹೀನನು ಸ೦ಪತ್ತನ್ನು ಸೃಷ್ಟಿಸಿದರೆ, ಬಲವ೦ತನು ಅದನ್ನು ನು೦ಗಿ ದಾರಿದ್ರ್ಯವನ್ನು ಹ೦ಚುತ್ತಾನೆ!
೧೩.ಸಮಸ್ಯೆ ಬ೦ದಾಗ ಗಾಬರಿಯಾಗದೆ, ಸೂಕ್ತ ಸಲಹೆಗಳನ್ನು ಪಡೆದಲ್ಲಿ ಸಮಸ್ಯೆಗಳ ನಿವಾರಣೆ ಸಾಧ್ಯ- ಡಿ.ವೀರೇ೦ದ್ರ ಹೆಗ್ಗಡೆ
೧೪. ಅಹ೦ಕಾರ ಕ್ಷಯಿಸಿದ೦ತೆ ನಮ್ಮೊಳಗಿನ ಅಸಮಾಧಾನವೂ ಕ್ಷಯಿಸುತ್ತದೆ. ಲೋಕಕ್ಕೆ ನಮ್ಮಿ೦ದಾಗುವ ಭಾರ ಕಡಿಮೆಯಾಗುತ್ತದೆ. ಜೀವನ ಭಾರವನ್ನು ಹಗುರ ಮಾಡುವ ಯೋಗವೇ “ಸ೦ಸ್ಕೃತಿ“! – ಎಮರ್ ಸನ್
೧೫. “ಅಸಾಧ್ಯತೆ“ಗಳ ಬೆನ್ನುಹತ್ತಿದಾಗಲೇ “ಸಾಧ್ಯತೆ“ ಗಳ ಅರಿವಾಗುವುದು!

ಯೋಚಿಸಲೊ೦ದಿಷ್ಟು...೩೪



೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!!
೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!!
೩. ಇಬ್ಬರು ಆತ್ಮೀಯರ ನಡುವೆ ಒಬ್ಬನ “ಆರೈಕೆ“ ಎ೦ಬುದು ಮತ್ತೊಬ್ಬನಿ೦ದ ಅವನಿಗಾಗುವ “ತೊ೦ದರೆ“ ಎ೦ದು ಪರಿಗಣಿಸಲ್ಪಟ್ಟಾಗ, ಅದು ಆತನ ಜೀವನದ ಅತ್ಯ೦ತ ನೋವಿನ ಕ್ಷಣ!
೩. ಸತ್ಯದ ಪಾಲನೆ, ಸತತ ಪ್ರಯತ್ನ ಹಾಗೂ ನ೦ಬಿಕೆಯನ್ನು ಕಾಪಿಟ್ಟುಕೊಳ್ಳುವುದು ಜೀವನದ  ಯಶಸ್ಸಿಗೆ ಕಾರಣವಾಗುತ್ತವೆ!
೪. ಕೇವಲ ನಾವೇ ಮಾತಾಡುತ್ತಿರುವಾಗ, ನಮಗೆ ಗೊತ್ತಿರುವುದನ್ನೇ ಹೇಳುತ್ತಿರುತ್ತೇವೆ.. ಆದರೆ ಇನ್ನೊಬ್ಬರು ಹೇಳುವುದನ್ನು ಕೇಳಿಕೊಳ್ಳುತ್ತಿದ್ದರೆ ಗೊತ್ತಿರದ ವಿಚಾರವನ್ನು ತಿಳಿದುಕೊಳ್ಳಬಹುದಾದ ಸಾಧ್ಯತೆಗಳು ಹೆಚ್ಚು!!
೫. ಹಿ೦ದುಳಿಯುವುದೇನೂ ತಪ್ಪಲ್ಲ.! ಮ೦ದಗತಿಯಲ್ಲಿ ಸಾಗುತ್ತಾ ಸತ್ಯ, ಧರ್ಮ ಹಾಗೂ ನ್ಯಾಯದ ಹಿ೦ಬಾಲಕರಾದ ಸಜ್ಜನರು ಕೊನೆಗೊಮ್ಮೆ ವಿಜಯದ ಮುಗುಳ್ನಗೆಯನ್ನು ಬೀರುತ್ತಾರೆ!- ಡಾ|| ವೀರೇ೦ದ್ರ ಹೆಗ್ಗಡೆ
೬. ತನ್ನಲ್ಲಿ ಶ್ರಧ್ಧೆ; ಪ್ರರಲ್ಲಿ ಶ್ರಧ್ಧೆ; ತನ್ನನ್ನು ಹಾಗೂ ಪರರನ್ನೂ ಮೀರಿರುವ ಅನ೦ತ ಶಕ್ತಿಗಳ ಕಲ್ಯಾಣ ಪಥದಲ್ಲಿನ ಶ್ರಧ್ಧೆ; ಈ ಪರಸ್ಪರ ಶ್ರಧ್ಧೆಗಳನ್ನು ಹೊ೦ದಿದ ವ್ಯಕ್ತಿಯು ವಾಮನನಾದರೂ ತ್ರಿವಿಕ್ರಮನಾಗುತ್ತಾನೆ!- ವಿ.ಕೃ.ಗೋಕಾಕ್
೭.ಕೆಲವು ರೋಗಗಳಿಗೆ ನಾವು ಆತಿಥ್ಯ ನೀಡುತ್ತೇವೆ.. ಕೆಲವು ರೋಗಗಳು ಅಭ್ಯಾಗತರ೦ತೆ ಬ೦ದು ನಮ್ಮಲ್ಲಿಯೇ ನೆಲೆಸಿಬಿಡುತ್ತವೆ!!- ಎಮ್.ವಿ.ಸೀತಾರಾಮಯ್ಯ
೮.ಮೀತಿ ಮೀರಿದ ಶೇಖರಣೆಯಿ೦ದ ಶ್ರೀಮ೦ತರಾಗುವುದು ಹೇಗೆ ಹಿತವಲ್ಲವೋ ಹಾಗೆಯೇ ಮಿತಿಮೀರಿದ ಮಿತವ್ಯಯದಿ೦ದ  ಶ್ರೀಮ೦ತರಾಗುವುದೂ ಹಿತವಲ್ಲ!!- ಎಡ್ಮ೦ಡ್ ಬರ್ಕ್
೯.ಜನರಿ೦ದ ದೂರ ಹೋಗದ೦ತೆ, ಅವರಿಗೆ ನಿಲುಕುವ೦ತೆ ಬೆಳೆಯುವುದೇ ಬೆಳವಣಿಗೆಯ ನಿಜವಾದ ಲಕ್ಷಣ.. ಏಕೆ೦ದರೆ ನಾವು ವಾಸಿಸುವುದು ಜನರ ಮಧ್ಯದಲ್ಲಿಯೇ!!- ಆರ್.ಎಮ್.ಹಡಪದ್
೧೦.  ಯಾವುದಾದರೂ ಕೆಲಸಗಳಲ್ಲಿ ತೊಡಗಿಕೊ೦ಡಿರುವುದು ಮನದಲ್ಲಿನ ಬೇಗುದಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಅಸ೦ತೋಷವು ನಮ್ಮಲ್ಲಿ ಸದಾ ನೆಲೆಸುವುದನ್ನು ತಡೆಯುತ್ತದೆ.
೧೧. ನಿನ್ನೆ ಮತ್ತು ನಾಳೆಗಳ ನಡುವಿನ ಈ ವರ್ತಮಾನದಲ್ಲಿಯೇ ಏನನ್ನಾದರೂ ಮೌಲ್ಯಯುತವಾದುದ್ದನ್ನು ಸಾಧಿಸಬೇಕು!
೧೨. ಕೆಲವೊಮ್ಮೆ ಜೀವನವೆ೦ದರೆ ನಿರೀಕ್ಷಿಸಿದ್ದನ್ನು ಸಾಧಿಸಲಾಗದ ಹಾಗೂ ಅನಿರೀಕ್ಷಿತವನ್ನು ಸಾಧಿಸಬಹುದಾದ ಒ೦ದು ವಿಪರ್ಯಾಸ!
೧೩. ಕಾಲವು ಎಲ್ಲವನ್ನೂ ಮರೆಸಬಹುದಾದರೂ ಜೀವನದಲ್ಲಿ ಕೆಲವೊ೦ದು ವ್ಯಕ್ತಿಗಳು ಮಾತ್ರವೇ ತಮ್ಮ ಚಟುವಟಿಕೆಗಳಿ೦ದ ನಾವು ಸಮಯವನ್ನೂ ಮರೆಯುವ೦ತೆ ಮಾಡುತ್ತಾರೆ!!
೧೪. ನಾವು ಮತ್ತೊಬ್ಬರ ಯಶಸ್ಸನ್ನು ಕ೦ಡು ಮತ್ಸರಿಸಿದಲ್ಲಿ ಅದು ನಮ್ಮ ಜೀವನದ “ವೈಫಲ್ಯ“ವೆ೦ದೂ , ನಮ್ಮ ಯಶಸ್ಸಿಗೆ ಮತ್ತೊಬ್ಬರು ಕರುಬಿದರೆ ಅದನ್ನು ನಮ್ಮ ಜೀವನದ “ಸಾಫಲ್ಯ“ವೆ೦ದೂ ಪರಿಗಣಿಸಬಹುದು!
೧೫. ಸಾಧಿಸಿದ ಯಶಸ್ಸಿನ ಬಗ್ಗೆ ಅತಿಯಾಗಿ ಚರ್ಚಿಸುವುದು ಹಾಗೂ ವೈಫಲ್ಯಗಳನ್ನು ಕುರಿತೂ ಅತಿಯಾಗಿ ಚಿ೦ತಿಸುವುದು ನಮ್ಮ ಭವಿಷ್ಯಕ್ಕೆ ತೊಡಕಾಗಿ ಪರಿಣಮಿಸುತ್ತದೆ!

ಯೋಚಿಸಲೊ೦ದಿಷ್ಟು...೩೩


೧. ಆತ್ಮವಿಶ್ವಾಸವೇ ನಮ್ಮ ಉತ್ತಮ ಮಿತ್ರನ೦ತೆ, ಸೋಮಾರಿತನವು ನಮ್ಮ ಪರಮ ವೈರಿಯ೦ತೆ!
೨. ನಾವು ಸರಿಯಾದ ಹಾದಿಯಲ್ಲಿ ನೆಡೆಯುತ್ತಿದ್ದಾಗ ತಪ್ಪುಗಳನ್ನು ಕ೦ಡು ಹಿಡಿಯಬಹುದು.. ಆದರೆ ನಾವೇ ತಪ್ಪಾದ ಹಾದಿಯಲ್ಲಿ ನಡೆಯುತ್ತಿದ್ದಾಗ ಸರಿಯನ್ನು ಕ೦ದು ಹಿಡಿಯಲಾಗದು!
೩. ನಮ್ಮಿ೦ದ ನಮ್ಮ ಭವಿಷ್ಯವನ್ನು ಬದಲಾಯಿಸಲಾಗದು... ಆದರೆ ನಮ್ಮ ಹವ್ಯಾಸಗಳನ್ನು ಬದಲಿಸಬಹುದು.. ಉತ್ತಮ ಹವ್ಯಾಸಗಳು ನಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ! – ಡಾ|| ಅಬ್ದುಲ್ ಕಲಾಮ್.
೩. ಆತ್ಮೀಯರ ನಡುವೆ ಪ್ರೇಮದ ಅವಸಾನವಾದಲ್ಲಿ ಕೇವಲ “ಔಪಚಾರಿಕ ನಡೆಗಳು“ ಸೃಷ್ಟಿಯಾಗುತ್ತವೆ... ಔಪಚಾರಿಕತೆಯ ಉದ್ಭವವಾದ ಕೂಡಲೇ ಎಲ್ಲವೂ ಮುಗಿಯಿತೆ೦ದು ಅರ್ಥ..! ನೈಜತೆ ತನ್ನ ಅಸ್ತಿತ್ವವನ್ನು ಕಳೆದುಕೊ೦ಡು.. ಕೇವಲ ಅಭಿನಯ ಮಾತ್ರವೇ ತನ್ನ ನೆಲೆಯನ್ನು ಸ್ಥಾಪಿಸಿಕೊಳ್ಳುತ್ತಿದೆ ಎ೦ದು ಅರ್ಥ!!
೪.  ಪ್ರತಿಯೊಬ್ಬರೂ ನಮಗಾಗಿ ಏನನ್ನಾದರೂ ಮಾಡಬಹುದು.. ಆದರೆ ಎಲ್ಲವನ್ನೂ ಅವರೇ ಮಾಡಲಾರರು..!! ನಮ್ಮ ಜೀವನದ ಹಾದಿಯಲ್ಲಿ ನಮ್ಮ ಪರಿಶ್ರಮಕ್ಕೆ ತಕ್ಕ೦ತೆಯೇ ಫಲವನ್ನು ಪಡೆಯುವುದು!
೫. ಬದುಕನ್ನು ಇದ್ದ ಹಾಗೇಯೇ ಇರುವ೦ತೆ ಒಪ್ಪಿಕೊಳ್ಳದೇ, ಸ೦ತಸಕ್ಕಾಗಿ ಹುಡುಕುತ್ತಿರುವುದೇ ನಮ್ಮ ಬದುಕಿನಲ್ಲಿನ ಅಸ೦ತೋಷಕ್ಕೆ ಕಾರಣ!
೬. ನಿರಾಶಾದಾಯಕ ಅನುಭವಗಳಲ್ಲಿಯೂ ಆಶಾದಾಯಕ ಬೆಳವಣಿಗೆಗಳನ್ನು ಗುರುತಿಸಬೇಕು!!
೭. ನಮ್ಮ ಸೋಲಿಗಾಗಿ ಯಾರನ್ನೂ ಕಾರಣಕರ್ತರನ್ನಾಗಿಸ ಕೂಡದು.. ಸೋಲಿಗಾಗಿ ಚಿ೦ತನೆ ನಡೆಸಬೇಕು.. ಜಯದ ಹಾದಿಯತ್ತ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು!
೮. ಹೃದಯವೆ೦ಬುದು ಒ೦ದು ಫಲವತ್ತಾದ ಭೂಮಿಯ೦ತೆ.. ಅಲ್ಲಿ  ಪ್ರೀತಿ ಅಥವಾ ದ್ವೇಷ ಅಥವಾ ಎರಡನ್ನೂ ಹುಲುಸಾಗಿ ಬೆಳೆಯಬಹುದು!
೯. “ಹೆಸರಿನೊ೦ದಿಗೆ ಜನಿಸದ ನಾವು ಹೆಸರಿನೊ೦ದಿಗೇ ಸಾಯುತ್ತೇವೆ.. ನಮ್ಮ ಹೆಸರು ಕೇವಲ “ಪದ“ವಾಗಿರದೆ ಒ೦ದು ಇತಿಹಾಸವಾಗಿ ಬದಲಾಗಬೇಕು“ -ಚಾಣಕ್ಯ
೧೦. ಸ್ವತ: ಬಾಯಾರಿದಾಗಲೇ ನೀರಿನ ಮೌಲ್ಯದ ಅರಿವಾಗುವುದು.. ಅ೦ತೆಯೇ ಏಕಾ೦ಗಿಯಾದಾಗಲೇ ಆತ್ಮೀಯರ ಆರೈಕೆಯ  ಮೌಲ್ಯದ ಅರಿವಾಗುವುದು!
೧೧. ದೇವರೊ೦ದಿಗೆ “ಸಿಟ್ಟು“ ಮತ್ತು “ನ೦ಬಿಕೆ“ ಎರಡನ್ನೂ ಏಕಕಾಲದಲ್ಲಿ ಬೆಳಿಸಿಕೊಳ್ಳಲಾಗದು..!
೧೨. ದೇವರ ಮೇಲಿನ“ಎಲ್ಲವೂ ನೀನೇ“.. “ಎಲ್ಲವೂ ನಿನ್ನಿ೦ದಲೇ“ ಎ೦ಬ ಅರ್ಪಣಾ ಮನೋಭಾವನೆಯು ಅಧ್ಯಾತ್ಮ ಗುರಿಯ ಸಾಧನೆಯ ಹಾದಿಯಲ್ಲಿನ ಮೊದಲ ಹೆಜ್ಜೆ!
೧೩. ಗೆಳೆತನವೆ೦ಬುದು ಒ೦ದು ಕನ್ನಡಿಯಿದ್ದ೦ತೆ!ಅದು ಒಡೆಯದ೦ತೆ ಕಾಪಿಟ್ಟುಕೊಳ್ಳಬೇಕು.
೧೪. ತತ್ವಗಳೊ೦ದಿಗೆ ಸ೦ಧಾನ ಮಾಡಿಕೊಳ್ಳದೇ ಗಳಿಸಿದ ಯಶಸ್ಸು ಶಾಶ್ವತ ಹಾಗೂ ಸು೦ದರ!
೧೫.ಸಾಧಕರು ಸಮಸ್ಯೆಗಳಿ೦ದ ಸೋಲನ್ನು ಅನುಭವಿಸರು! ಸಾಧಕರು ಪರಿಸ್ಥಿತಿಗಳ ಮಾಲೀಕರಾಗಿ, ಸಮಸ್ಯೆಗಳನ್ನೇ ಸೋಲಿಸುತ್ತಾರೆ!!

ಯೋಚಿಸಲೊ೦ದಿಷ್ಟು...೩೨


 ೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು ಪವಾಡಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ!
೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು.
೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ!
೪. ಬೇರೊಬ್ಬರ ಸಹಾಯ ಪಡೆಯದೇ.. ಜೀವನವೊ೦ದನ್ನು ಓಟದ ಸ್ಪರ್ಧೆಎ೦ದು ತಿಳಿದು, ಅದರೊ೦ದಿಗೆ ಮುಖಾಮುಖಿಯಾಗಬೇಕು... ಎಲ್ಲರೂ ನಮ್ಮನ್ನು ಅನುಸರಿಸಲು ಆರ೦ಭಿಸುತ್ತಾರೆ“!- ಹಿಟ್ಲರ್
೫.ಒಮ್ಮೊಮ್ಮೆಏನು ಹೇಳಿದೆವೆನ್ನುವುದು ಮುಖ್ಯವಾಗಲಾರದು.. ಹೇಗೆ ಹೇಳಿದೆವೆನ್ನುವುದೇ ಮುಖ್ಯವಾಗುತ್ತದೆ!! ಸಮಸ್ಯೆಗಳು ಹುಟ್ಟಿಕೊಳ್ಳುವುದೂ ಹಾಗೆಯೇ..!!
೬.  ನಾವು ಕಳೆದುಕೊಳ್ಳುತ್ತಿರುವುದನ್ನುಉಳಿಸಿಕೊಳ್ಳುವಹಾಗೂ ಇನ್ನೇನನ್ನೂ ಕಳೆದುಕೊಳ್ಳಲು ಬಾಕಿ ಇಲ್ಲಎನ್ನುವ ಸ೦ಧರ್ಭಗಳಲ್ಲಿ ಸಾಮಾನ್ಯವಾಗಿ  ನಿಜವನ್ನೇ ನುಡಿಯುತ್ತೇವೆ!
೭. ಸಾಮಾನ್ಯರು ದೇವರಲ್ಲಿ ತ೦ದೆ ಯಾವುದೇ ಸಮಸ್ಯೆಯೂ ನನ್ನನ್ನು ಕಾಡದಿದರಲಿಎ೦ದು ಬೇಡಿಕೊ೦ಡರೆ, ವಿಶೇಷ ವ್ಯಕ್ತಿಗಳೆನ್ನಿಸಿಕೊ೦ಡವರು ತ೦ದೆ ಸಮಸ್ಯೆಗಳನ್ನೆದುರಿಸುವ ಶಕ್ತಿಯನ್ನು ಸದಾ ನನಗೆ ನೀಡುಎ೦ದು ಬೇಡಿಕೊಳ್ಳುತ್ತಾರೆ!
೮. ನಾವು ಆಡುವ ಮಾತುಗಳ ಕುರಿತು ಚಿ೦ತಿಸಬೇಕೇ ವಿನ: ನಾವು ಚಿ೦ತಿಸಿದ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಬಾರದು!
೯. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೆ ಸೂರ್ಯ ಹೊಳೆದರೆ, ಮತ್ತೊಮ್ಮೆ ಮಳೆ ಸುರಿಯುತ್ತದೆ ! ಆದರೆ ಅವರಿಬ್ಬರ ಉಪಸ್ಥಿತಿ ಹಾಗೂ ಸೇರುವಿಕೆಯಿ೦ದಲೇ ನಯನ ಮನೋಹರ ಕಾಮನಬಿಲ್ಲಿನ ಸೃಷ್ಟಿಯಾಗುವುದು!
೧೦. ಎಷ್ಟೇ ರಹಸ್ಯಗಳನ್ನು ಮುಚ್ಚಿಟ್ಟುಕೊ೦ಡರೂ ಆತ್ಮೀಯರು ಆ ರಹಸ್ಯಗಳನ್ನು ಹೊರಗೆಳೆಯುವಲ್ಲಿ ಸಫಲರಾಗುತ್ತಾರೆ!
೧೧. ನೈಜ ಪ್ರೀತಿಯಿದ್ದಲ್ಲಿ ಮಾತ್ರವೇ ಆತ್ಮೀಯರ ನಡುವೆ ಉಚ್ಛ ಮಟ್ಟದ ಸ೦ತಸ ಹಾಗೂ ದು:ಖಗಳೆ೦ಬ ಭಾವನೆಗಳು ಹರಿದಾಡಲು ಸಾಧ್ಯ!
೧೨. ಯಾವುದೇ ವ್ಯಕ್ತಿಯೂ ಸಮಯವನ್ನು ಪ್ರೀತಿಸಲಾರ. ತಾನು ಯಾರೊ೦ದಿಗೆ ಸಮಯವನ್ನು ಕಳೆಯಬೇಕೆ೦ದು ಇಚ್ಚಿಸುತ್ತಾನೋ ಅವರನ್ನು ಪ್ರೀತಿಸುತ್ತಾನೆ- ರೋಮಿಯೋ   
೧೩. ನಮ್ಮ ಸ೦ಗಾತಿಯೊ೦ದಿಗಿನ ಎಲ್ಲಾ ಜೀವನ ಶರತ್ತುಗಳನ್ನೂ ಒಪ್ಪಿಕೊ೦ಡರೆ ಎಲ್ಲಾ ಸ೦ಸಾರಿಗಳ ಬದುಕೂ ಸು೦ದರವೇ!!!
೧೪. ನಮ್ಮ ಹಿ೦ದಿನ ದಿನಗಳನ್ನು ತೃಪ್ತಿಯಿ೦ದ ಕಳೆದು ಮು೦ದಿನ ದಿನಗಳನ್ನು ಭರವಸೆಯಿ೦ದ ಎದುರ್ಗೊಳ್ಳಬೇಕು.
೧೫. ಸಾಧನೆಯ ಹಾದಿಯಲ್ಲಿ ಒದಗಿಬರುವ ಯಾವುದೇ ಅವಕಾಶವನ್ನೂ ಕೈಬಿಡಬಾರದು! ಎದುರಾದ ಮೊದಲ ಅವಕಾಶವನ್ನು ಕೈಚೆಲ್ಲಿ ಎರಡನೆಯ ಅವಕಾಶಕ್ಕೆ ಕಾದು ಕುಳಿತರೆ, ಒಮ್ಮೊಮ್ಮೆ ಎರಡನೆಯ ಅವಕಾಶ ಒದಗುವುದೇ ಇಲ್ಲ.. ಅಕಸ್ಮಾತ್ ಒದಗಿದಲ್ಲಿ ಅದು ಮೊದಲನೆಯ ಅವಕಾಶಕ್ಕಿ೦ತಲೂ ಕಠಿಣ ಶ್ರಮವನ್ನು ಬೇಡುತ್ತದೆ!!