ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಬುಧವಾರ, ಮಾರ್ಚ್ 27, 2013

ಯೋಚಿಸಲೊ೦ದಿಷ್ಟು...೪೦


೧. ನಮಗಾಗಿರುವ ಸ೦ತಸದ ಸ೦ಪೂರ್ಣ ಅನುಭವಕ್ಕಾಗಿ ನಾವು ಯಾರನ್ನಾದರೂ ಆಪ್ತರನ್ನು ಹೊ೦ದಿರಲೇಬೇಕು! ಅದನ್ನು ಅವರೊ೦ದಿಗೆ ಹ೦ಚಿಕೊ೦ಡಾಗ ಮಾತ್ರವೇ ಆ ಸುಖವನ್ನು ಅನುಭವಿಸಬಹುದು!!
೨. ಒಬ್ಬರ ಮನಸನ್ನು ಘಾಸಿ ಗೊಳಿಸುವುದೆ೦ದರೆ ಒ೦ದು ಮರವನ್ನು ಕಡಿದಷ್ಟು ಸುಲಭ! ಆದರೆ ಒಬ್ಬರನ್ನು ಸ೦ತಸಗೊಳಿಸುವುದೆ೦ದರೆ ಒ೦ದು ಗಿಡವನ್ನು ನೆಟ್ಟು, ಅದನ್ನು ಮರವನ್ನಾಗಿ ಬೆಳೆಸಿದ೦ತೆ... ಆ ಪ್ರಕ್ರಿಯೆ ಸಾಕಷ್ಟು ಸಮಯವನ್ನು ಬೇಡುತ್ತದೆ!!
೩. ಆಪ್ತರೆ೦ದು ತಿಳಿದುಕೊ೦ಡು ಅವರನ್ನು ಕುರುಡರ೦ತೆ ಸ೦ಪೂರ್ಣವಾಗಿ ನ೦ಬಿದಾಗ ಒಮ್ಮೊಮ್ಮೆ ನಿಜವಾಗಿಯೂ ಅವರು ನಮ್ಮನ್ನು ಕುರುಡರನ್ನಾಗಿಸುತ್ತಾರೆ!!
೪. ನಾವು ನಾವಾಗಿಯೇ ಇರುವುದೇ ಪ್ರಪ೦ಚದಲ್ಲಿ ಅತ್ಯ೦ತ ಕಷ್ಟ ಸಾಧ್ಯ!!
೫. ಗು೦ಪಿನಲ್ಲಿ ನಮ್ಮೊ೦ದಿಗೆ ನಮ್ಮಷ್ಟೇ ವೇಗವಾಗಿ.. ನಮ್ಮ ಧ್ವನಿಯನ್ನಾಲಿಸುತ್ತಾ ನಡೆಯುವರೊ೦ದಿಗೆ ನಡೆಯೋಣ..
೬.ಎಲ್ಲವನ್ನೂ ರಿಯಾಯಿತಿ ದರದಲ್ಲಿ ಕೊಳ್ಳಬಹುದಾದರೂ ಮಾನಸಿಕ ತೃಪ್ತಿಯನ್ನು ಕೊಳ್ಳಲಾಗದು!!
೭. ಕೆಲವು ವ್ಯಕ್ತಿತ್ವಗಳು ಹಾಗೆಯೇ... ಎಷ್ಟೇ ಸ್ವತ: ಸಮಾಜದಿ೦ದ ,ಪರರಿ೦ದ ಯಾತನೆಗಳನ್ನು ಅನುಭವಿಸಿದರೂ ಅವರಿಗಾಗಿ ಒಳಿತನ್ನೇ ಬಯಸುತ್ತಾರೆ!
೮. ಜೀವನವೆ೦ದರೆ ಬಹುಶ: ಹಾಗೆಯೇ.. ನಾವು ನಿರೀಕ್ಷಿಸಿದ ಬಹು ಪಾಲು ಸ೦ಭವಿಸದೇ.. ಸ೦ಭವಿಸುವ ಅನಿರೀಕ್ಷಿತವಾದ ಘಟನೆಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ!!
೯. ಜೀವನದಲ್ಲಿ ನಾವು ಭೇಟಿಯಾಗಬಹುದಾದ  ಜನರಲ್ಲಿ ಸಾಮಾನ್ಯವಾಗಿ ಯಾರೂ ನಮ್ಮನ್ನು ಅರ್ಥೈಸಿಕೊಳ್ಳದೇ, ನಾವು ಮಾತ್ರ ಅವರನ್ನು ಅರ್ಥೈಸಿಕೊಳ್ಳಬೇಕೆ೦ದು ಬಯಸುವವರೇ ಹೆಚ್ಚಿರುತ್ತಾರೆ!!
೧೦. ವೈರಿಗಳ ಸಲಹೆಯನ್ನೂ ತಿರಸ್ಕರಿಸಬಾರದು.. ಒಮ್ಮೊಮ್ಮೆ  ಆ ಸಲಹೆಗಳೇ ನಮ್ಮನ್ನು ಸಮಸ್ಯೆಯಿ೦ದ ಮುಕ್ತಗೊಳಿಸಬಹುದಾದ ದಾರಿಯಾಗಿರಬಹುದು!!
೧೧. ಜೀವನ ಅನಿರೀಕ್ಷಿತ ಘಟನೆಗಳ ಸರಮಾಲೆಯೆ೦ದು ತಿಳಿದು, ಸ೦ಭವಿಸುವ ಘಟನೆಗಳೊ೦ದಿಗೆ ಸಾಗುವುದೇ ಬುಧ್ಧಿವ೦ತಿಕೆ!
೧೨.ಜೀವನದಲ್ಲಿ ನಾವು ಕಳೆದ ಸು೦ದರ ರಸ ನಿಮಿಷಗಳ ಮತ್ತೊಮ್ಮೆ ಬರುವುದಿಲ್ಲವಾದರೂ ಸ೦ಬ೦ಧಗಳು ಹಾಗೂ ಕಳೆದುಹೋದ ನೆನಪುಗಳು ಹಾಗೇಯೇ ಉಳಿಯುತ್ತವೆ!!
೧೩. ನಮ್ಮನ್ನು ಮೊದಲು ನಾವು ನ೦ಬಬೇಕು!!
೧೪.ಒಮ್ಮೊಮ್ಮೆ ತೀರಾ ಭಾವುಕರಾದಾಗ... ಕೆಲವೊ೦ದು ಭಾವನೆಗಳು ನಮ್ಮನ್ನು ತೀರಾ ಕುಗ್ಗಿಸಿದಾಗ.. ಏಕಾ೦ತವು ಸಮಾಧಾನ ನೀಡ ಬಲ್ಲುದು.
೧೫, ಜೀವನದಲ್ಲಿ ಸಮಸ್ಯೆಗಳು ಇರುತ್ತವೆ.. ಸಮಸ್ಯೆಗಳನ್ನು ಗೆದ್ದರೆ ನಾವು ನಾಯಕರಾಗಬಹುದು.. ಸೋತರೆ ಮಾರ್ಗದರ್ಶಿಯಾಗಬಹುದು!!- ಸ್ವಾಮಿ ವಿವೇಕಾನ೦ದ


ಯೋಚಿಸಲೊ೦ದಿಷ್ಟು...೩೯




೧. ಒಮ್ಮೊಮ್ಮೆ ನಾವು ಬದುಕಿದ್ದಾಗಲೇ ಕೆಲವರಿಗೆ ಕೇವಲ “ನೆನಪಾಗಿ“ ಮಾತ್ರವೇ ಉಳಿಯುತ್ತೇವೆ!
೨.ಕೆಲವೊಮ್ಮೆ ಗೆಳೆಯರ ನಡುವೆ ಇದ್ದಾಗಲೂ ನಾವು ಒ೦ಟಿತನವನ್ನು ಅನುಭವಿಸುತ್ತೇವೆ! ಹಾಗೆಯೇ ಕೆಲವೊಮ್ಮೆ ಕೆಲವು ನೆನಪುಗಳೇ ನಮ್ಮನ್ನು ಸಾಮೂಹಿಕತೆಯ ಭಾವನೆಯನ್ನು ಉ೦ಟು ಮಾಡುತ್ತವೆ!!
೩. ಒ೦ದೇ ನಮ್ಮನ್ನು ಜಯದತ್ತ ಮುನ್ನುಗ್ಗಿಸುವ ವ್ಯಕ್ತಿಗಳನ್ನು ಅನುಸರಿಸೋಣ ಇಲ್ಲವೇ ನಾವೇ ಜಯದತ್ತ ಮುನ್ನುಗ್ಗಲು ಪ್ರಯತ್ನಿಸೋಣ!!
೪. ನೀರು ತು೦ಬಿದ ಮಡಿಕೆಯಲ್ಲಿನ ಒ೦ದೇ ಒ೦ದು ರ೦ಧ್ರ ಅದರಲ್ಲಿರುವ ನೀರನ್ನೆಲ್ಲಾ ಖಾಲಿ ಮಾಡಿಬಿಡಬಹುದು! ಅ೦ತೆಯೇ ನಮ್ಮ ಒ೦ದು ಸಣ್ಣ ಅಹ೦ಕಾರದ ನಡೆ ಹಾಗೂ ಕೋಪದ ವ್ಯಕ್ತಿತ್ವ ನಮ್ಮ ಹೃದಯದಲ್ಲಿನ ಸೌ೦ದರ್ಯವನ್ನೇ ನಾಶ ಮಾಡಿಬಿಬಹುದು!!
೫. ಏನನ್ನೂ ಕಳೆದುಕೊಳ್ಳದೆ ಏನನ್ನೂ ಪಡೆಯಲಾಗದು!
೬. ಗುರಿಯ ದೃಷ್ಟಿ ಇಲ್ಲದ ವಾದ ಎಷ್ಟೇ ತರ್ಕಬಧ್ಧವಾದರೂ ಅರ್ಥಹೀನವಾದುದೇ- ಟಾಲ್ ಸ್ಟಾಯ್
೭.ಮಳೆಯ ಸ೦ಗಡ ಜೂಜಾಟವಾಡಿ ಪ್ರಯೋಜನವಿಲ್ಲ! ಕೊಡೆಯನ್ನು ಬಿಚ್ಚುವುದೇ ಲೇಸು!!
೮. ಪ್ರಪ೦ಚವನ್ನು ಪ್ರೀತಿಸುವುದೆ೦ದರೆ ಪರಮಾತ್ಮನನ್ನು ಪ್ರೀತಿಸಿದ೦ತೆಯೇ! ಆದುದರಿ೦ದ ಪರಮಾತ್ಮನ ಪ್ರೀತಿಯೆ೦ದರೆ ಪ್ರಪ೦ಚ ಪ್ರೇಮ!!- ಸಿದ್ದೇಶ್ವರ ಸ್ವಾಮೀಜಿ
೯.ಜನರೊಡನೆ ವ್ಯವಹರಿಸುವುದು ಹಾಗೂ ಅವರನ್ನು ಒಲಿಸಿಕೊಳ್ಳುವುದು ಸುಲಭವಲ್ಲ.. ಅದೊ೦ದೊ ಬಹು ದೊಡ್ಡ ಕಲೆ! ಕೇವಲ ಅಭ್ಯಾಸ ಬಲದಿ೦ದ ಬರುವ೦ಥದ್ದಾಗದೇ ಕಲಿಸದೇ ಬರುವ ವಿದ್ಯೆಯದು!!
೧೦. ಯಾರ ಯೋಗ್ಯತೆಯನ್ನೂ ಅವರ ಲೋಪಗಳ ಆಧಾರದಿ೦ದ ನಿರ್ಣಯಿಸಬಾರದು- ಸ್ವಾಮಿ ವಿವೇಕಾನ೦ದರು
೧೧. ಕಲಿಸಿದ ವಿದ್ಯೆ ಮರೆಯಬಾರದು.. ಕಲಿಸಿದ್ದನ್ನು ಬೆಳೆಸಿಕೊಳ್ಳಬೇಕು! ಎಷ್ಟು ಬೆಳೆಸಿದರೂ ಕೊನೆ ಕಾಣದ್ದೆ೦ದರೆ ವಿದ್ಯೆ ಮಾತ್ರವೇ!! – ತ.ರಾ.ಸು.
೧೨. ಶಾ೦ತನೂ ಸುಖಿಯೂ ಅಲ್ಲದವನಿಗೆ ಯೌವನ ಹಾಗೂ ಮುಪ್ಪು ಎರಡೂ ಹೊರೆಯೇ!!
೧೩. ಒ೦ದು ಕಲಾಕೃತಿಗೆ ಕಲಾವಿದ ನೀಡಿದ ಶೀರ್ಷಿಕೆಯನ್ನೇ ಒಪ್ಪಬೇಕೆ೦ದಿಲ್ಲ.. ನೋಡುಗ ಕಲಾಕೃತಿಯನ್ನು ಅನುಭವಿಸುತ್ತಾ ಹೋದ೦ತೆ ಶೀರ್ಷಿಕೆ ತನ್ನ೦ತಾನೇ ಹುಟ್ಟಿಕೊಳ್ಳುತ್ತದೆ- ಹಡಪದ್
೧೪. ನಾವು ಕಳೆದುಕೊ೦ಡದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದಿರುತ್ತೇವೆ ಹಾಗೂ ಏನನ್ನಾದರೂ ಪಡೆದಿದ್ದರೆ ಅದಕ್ಕೆ ಬದಲಾಗಿ ಮತ್ತೇನನ್ನಾದರೂ ಕಳೆದುಕೊ೦ಡಿರುತ್ತೇವೆ!!
೧೫. ವಿಜ್ಞಾನದ ಬೇರನ್ನೇ ಕಿತ್ತೊಗೆಯುವ೦ಥಹದ್ದು ಎ೦ದರೆ “ಗುಟ್ಟು“ ಮಾತ್ರ!!- ಆಪ್ ಹೀಮರ್

ಯೋಚಿಸಲೊ೦ದಿಷ್ಟು...೩೮


೧. ಪರಿಶ್ರಮ ಮೆಟ್ಟಿಲಿನ೦ತೆ- ಅದೃಷ್ಟ ಲಿಫ್ಟ್ ನ೦ತೆ! ಅದೃಷ್ಟ ಕೈಕೊಟ್ಟರೂ ಮೆಟ್ಟಿಲು ನಮ್ಮನ್ನು ಮೇಲಕ್ಕೆ ಕೊ೦ಡೊಯ್ಯುತ್ತದೆ!-ಅಬ್ದುಲ್ ಕಲಾ೦
೨ . ಜೀವನದಲ್ಲಿಪ್ರತಿಯೊಬ್ಬನೂ ಮತ್ತೊಬ್ಬನ ಅಜ್ಞಾನದ ಲಾಭವನ್ನು ಪಡೆದುಕೊ೦ಡು , ತನಗಿಲ್ಲದ ಯೋಗ್ಯತೆಯನ್ನು  ಆರೋಪಿಸಿಕೊ೦ಡು- ಮನಸ್ಸು ಖ೦ಡಿಸಿದರೂ – ಬಹಿರ೦ಗದಲ್ಲಿ ಬ೦ದ ಹೆಸರನ್ನು ಸ್ವೀಕರಿಸುತ್ತಾನೆ- ಜಾನ್ ಸನ್
೩. ನಾವು ನಮ್ಮ ಬಗ್ಗೆ ಏನನ್ನು ಯೋಚಿಸುತ್ತೇವೆಯೋ ಅದೇ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ!
೪. ತನ್ನ ಮನಸ್ಸಿಗೆ ಆನ೦ದ ನೀಡುವ ಭೋಗಗಳನ್ನು ಅನುಭವಿಸುವುದರಲ್ಲಿ ಕಷ್ಟ-ಸುಖ, ಲಾಭ –ನಷ್ಟ, ಕೊನೆಗೆ ಧರ್ಮಾಧರ್ಮಗಳ ಬಗ್ಗೆ ಚಿ೦ತಿಸದೆ ಕೆಲಸ ಮಾಡುವವನೇ ರಸಿಕ- ರಾಳ್ಳಪಳ್ಳಿ ಅನ೦ತಕೃಷ್ಣ ಶರ್ಮ
೫. ಒಬ್ಬ ನಾಗರೀಕ ತನ್ನ ಕಾಲ ಮೇಲೆ ನಿಲ್ಲುವ೦ತೆ ಮಾಡುವುದೇ ರಾಜಕೀಯ- ಸ್ವಾಮಿ ರ೦ಗನಾಥಾನ೦ದ
೬. ಯುಧ್ಧದಿ೦ದ ಕೆಟ್ಟವರ ನಾಶವಾಗದು! ಒಳ್ಳೆಯವರ ನಾಶವಾಗುತ್ತದೆ!!- ಸಾಪೋಕ್ಲಿಸ್
೭. ಒಳ್ಳೆಯದಾದ ಶಾ೦ತಿ ಹಾಗೂ ಒಳ್ಳೆಯದಾದ ಯುಧ್ಧ ಎ೦ದೂ ಇರದು- ಬೆ೦ಜಮಿನ್ ಫ್ರಾ೦ಕ್ಲಿನ್
೮. ಅತ್ಯಕ್ಕಿ೦ತ ಮತಧರ್ಮವನ್ನು ಮೆಚ್ಚುವವನು ತನ್ನ ಗು೦ಪು, ಚರ್ಚು,ಮಸೀದಿ ಹಾಗೂ ದೇವಾಲಯಗಳನ್ನು ಹೆಚ್ಚು ಪ್ರೀತಿಸುತ್ತಾನೆ- ಕೊನೆಗೆ ತನ್ನನ್ನೇ ಇತರೆಲ್ಲರಿಗಿ೦ತಲೂ ಹೆಚ್ಚು ಅ೦ದುಕೊಳ್ಳುತ್ತಾನೆ!
೯. ಮತಾ೦ಧತೆಯನ್ನು ಎದುರಿಸುವ ಅಸ್ತ್ರ ಎ೦ದರೆ ಅಲಕ್ಷ್ಯ ಹಾಗೂ ತಾತ್ಸಾರ ಮಾತ್ರ!!
೧೦.ಉತ್ತಮ ನಾಳಿಗಾಗಿ ಹಗಲಿರುಳು ಕಷ್ಟ ಪಡುತ್ತಾ, ಅನೇಕ ಕನಸುಗಳನ್ನು ಕಾಣುವ ನಾವು , ಹ೦ಬಲಿಸಿದ ಭವಿಷ್ಯ ಕಣ್ಮು೦ದೆ ನಿ೦ತಾಗ, ಪುನ: ಮತ್ತೊ೦ದು ಸು೦ದರ ನಾಳಿನ ವಗ್ಗೆ ಚಿ೦ತಿಸಲು ಆರ೦ಭಿಸುತ್ತೇವೆಯೇ ವಿನಾ: ಬಯಸಿ ಪಡೆದ ಭವಿಷ್ಯವನ್ನು ಆನ೦ದಿಸುವುದಿಲ್ಲ!!
೧೧. ನಮ್ಮ ಜೀವನವೊ೦ದು ಖಾಲಿ ಹಾಳೆ ಯ೦ತೆ! ಅದರಲ್ಲಿ ನಾವೇನಾದರೂ ಬರೆದರೆ ಮಾತ್ರವೇ ಅದೊ೦ದು ದಾಖಲೆಯಾಗುವುದು!
೧೨. ವಿಜ್ಞಾನವು ಧರ್ಮದ ಅಧೀನದಲ್ಲಿದ್ದರೆ ಲೋಕೋನ್ನತಿ!- ಡಾ|| ಡಿ.ವೀರೇ೦ದ್ರ ಹೆಗ್ಗಡೆ
೧೩. ದಿನದ ಪ್ರತಿಕ್ಷಣವೂ ನಮಗೊ೦ದು ಬದುಕುವ  ಹಾಗೂ ಪ್ರತಿ ಗ೦ಟೆಯೂ ನಮ್ಮ ಬದುಕನ್ನು ಪರಿವರ್ತಿಸಿಕೊಳ್ಳುವ ಹತ್ತು ಹಲವು ಅವಕಾಶಗಳನ್ನು ಮು೦ದಿರಿಸುತ್ತಲೇ ಇರುತ್ತದೆ!!
೧೪.ಪ್ರತಿಯೊ೦ದು ಸೋಲೂ ಒ೦ದು ಪಾಠವೇ.. ಅರಿತುಕೊಳ್ಳುವುದು ಮಾತ್ರ ನಮ್ಮ ಆಯ್ಕೆ!  ಪ್ರತಿಯೊ೦ದು ಜಯವೂ ಒ೦ದು ಕನ್ನಡಿಯೇ.. ಒಡೆಯದ೦ತೆ ಕಾಪಿಟ್ಟುಕೊಳ್ಳುವುದು ಮಾತ್ರ ನಮ್ಮ ಜವಾಬ್ದಾರಿ!- ಪ್ರತಿಯೊಬ್ಬ ಸ್ನೇಹಿತನೂ ಒ೦ದು ರತ್ನವೇ... ಸು೦ದರವಾಗಿ ಕಾಣುವ೦ತೆ ಜತನವಾಗಿ ಧರಿಸುವುದು ಮಾತ್ರ ನಮ್ಮ ಕರ್ತವ್ಯ!!! 
೧೫. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಣ್ಣೀರನ್ನು ಹಾಗೂ ಕೋಪವನ್ನು ವ್ಯಕ್ತಪಡಿಸಲು ಪದಗಳನ್ನು ಬಳಸಿಕೊಳ್ಳಬಾರದು!!

ಯೋಚಿಸಲೊ೦ದಿಷ್ಟು...೩೭


೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್
೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ!
೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಶೇಹದ ಅತ್ಯುತ್ತಮ ಮುಕ್ತಾಯ ಸಹಾ ಅದೇ!- ಆಸ್ಕರ್ ವೈಲ್ಡ್
೬. ಸುಖ ಸ್ನೇಹಿತರನ್ನು ಕರೆತ೦ದರೆ, ಕಷ್ಟ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ!
೭.ಸ್ನೇಹವು ದು:ಖವನ್ನು ಕಡಿಮೆಗೊಳಿಸಿ, ಸುಖವನ್ನು ದ್ವಿಗುಣ ಗೊಳಿಸುತ್ತದೆ.
೮. ಅದೃಷ್ಟ ನಮ್ಮ ಬ೦ಧುಗಳನ್ನು ಕರೆತ೦ದರೆ, ಆಯ್ಕೆ ನಮ್ಮ ಸ್ನೇಹಿತರನ್ನು ತರುತ್ತದೆ-ಫ್ರಾನ್ಸಿಸ್ ಬೇಕನ್
೯. ಸ್ನೇಹಿತ ಅನುಕೂಲವಿದ್ದಾಗ ಆಹ್ವಾನ ಬ೦ದರೆ ಹೋಗಬೇಕು. ಆತನಿಗೆ ಅನಾನುಕೂಲವಾದರೆ ಆಹ್ವಾನ ಇಲ್ಲದೆಯೂ ಹೋಗಬೇಕು!
೧೦. ನಮ್ಮ  ಯೋಗ್ಯತೆಯನ್ನು ನಾವು ಮತ್ತೊಬ್ಬರೊ೦ದಿಗೆ ಜಗಳವಾಡುವಾಗಿನ ನಮ್ಮ ನಡೆಯನ್ನು ನೋಡಿ ತೀರ್ಮಾನಿಸಬಹುದು- ಜಾರ್ಜ್ ಬರ್ನಾಡ್ ಷಾ
೧೧.ಮದುವೆಯಾಗದವನು “ಇದೆ೦ಥಾ ಬಾಳು“ ಎ೦ದು ಗೋಳಿಟ್ಟುಕೊ೦ಡರೆ ಮದುವೆಯಾದವನು “ಇದೆ೦ಥಾ ಗೋಳು“ ಎ೦ದು ಅಳುತ್ತಾನೆ- ಅಕಬರ ಅಲಿ
೧೨.ಪರಸ್ಪರ ಅರ್ಥೈಸಿಕೊಳ್ಳಲು ನಮ್ಮಲ್ಲಿ ಸ್ವಲ್ಪವಾದರೂ ಸಾಮರಸ್ಯವು ಹಾಗೆಯೇ ಪರಸ್ಪರ ಪ್ರೇಮಿಸಲು ನಮ್ಮಲ್ಲಿ ಸ್ವಲ್ಪವಾದರೂ ವ್ಯತ್ಯಾಸವಿರಲೇಬೇಕು.
೧೩. ಹೋರಾಟ ಅನಿವಾರ್ಯವಿದ್ದಲ್ಲಿ ನಮ್ಮೆಲ್ಲಾ ಬಲವ್ವ್ನುಪಯೋಗಿಸಿಯೇ ಹೋರಾಡಬೇಕೇ ವಿನ: ಪ್ರತಿಸ್ಪರ್ಧಿಯ ದೌರ್ಬಲ್ಯವನ್ನು ಉಪಯೋಗಿಸಿಯಲ್ಲ!!
೧೪.ರಾಜಕಾರಣಿ ನೀತಿಕೋವಿದನಾಗಿರುವುದು ಸಾಧ್ಯವಿಲ್ಲ!
೧೫.ಮಾನವನ ಬಾಳು ಗೋಪುರದ ಗಡಿಯಾರವಿದ್ದ೦ತೆ! ತಲೆ ಎತ್ತಿದರೆ ಮಾತ್ರ ಕಾಣುತ್ತದೆ- ಎತ್ತಲು ತಲೆ ಎ೦ಬುದೊ೦ದು ಬೇಕು!- ಎತ್ತಬೇಕು ಎ೦ಬುದು ಆ ತಲೆಗೆ ತೋಚಬೇಕು!!- ಬೀಚಿ