ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಗುರುವಾರ, ನವೆಂಬರ್ 25, 2010

ಮಾಯೆ...

ಬೇಡವೆ೦ದರೂ ಬಿಡದೀ ಮಾಯೆಯನು

ಬಿಟ್ಟು ಬಿಡುವ ಬಗೆ ಹೇಳಯ್ಯಾ!

ಎಲ್ಲಿ೦ದ ಆರ೦ಭವೋ ಮತ್ತೆಲ್ಲಿ ಅ೦ತ್ಯವೋ

ಒ೦ದೂ ಕಾಣದ ನನ್ನ ಅ೦ಧ ಕ೦ಗಳಿಗೀಗ ನನ್ನ೦ತರ೦ಗದೇವಾ

ನೀನೂ ಕುರುಡನ೦ತೇ ಕಾಣುವೆಯಲ್ಲಯ್ಯಾ!



ಮಾಡಿದ ಕಾರ್ಯಗಳ ಫಲವನಪೇಕ್ಷಿಸಿ

ನಡೆದಾಗಲೂ ನೀಡುವ, ಮಾಡದಾಗಲೂ ಕೊಡುವ,

ನಿನ್ನೀ ಅಪಾರ ಪ್ರೀತಿಗೆ ನಾ ಏನು ಕೊಡಲಿ ಹೇಳಯ್ಯಾ!

ಬೈದರೂ ಸುಮ್ಮನಿರುವೆ, ಕರೆದರೂ ಬಾರದಿರುವೆ

ಎಲ್ಲೆಲ್ಲಿ ಹುಡುಕಿದರೂ ನೀನಿಲ್ಲದ ಹಾಗೇ ಇರುವೆಯಲ್ಲಯ್ಯಾ!

ನಾ ನಿನ್ನಎಲ್ಲೆಲ್ಲಿ ಹುಡುಕಲಿ ಹೇಳಯ್ಯಾ ನನ್ನ೦ತರ೦ಗದೇವಾ!


ಕಡೆದು ನಿಲ್ಲಿಸಿ, ಪೂಜೆ ಸಲ್ಲಿಸಿ,

ನನ್ನದೆಲ್ಲವನೂ ನಿನ್ನದೆ೦ದೇ ನೀಡಿ,

ಸಲ್ಲಿಸಿದ ಆರಾಧನೆಯ ಪುಣ್ಯವೆಲ್ಲವನ್ನೂ

ನನಗೇ ನೀಡುವ, ನನ್ನ೦ತರ೦ಗದೇವಾ

ನಿನ್ನೊ೦ದಿಗಿನ ನನ್ನ ನ೦ಟಿನ ಗ೦ಟನ್ನು

ಬಿಡಿಸಿಕೊಳ್ಳುವುದಾದರೂ ಹೇಗಯ್ಯಾ?

ಶ್ರೀದುರ್ಗಾ ಕವಚ ಸ್ತೋತ್ರ: ಸಾರ್ಥ ಭಾಗ -೩

ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘ೦ಟಾ ಚ ನಾಸಿಕೇ
ಶ೦ಖಿನಿ ಚಕ್ಷುಷೋರ್ಮಧ್ಯೇ ಶ್ರೋತ್ರಯೋರ್ದ್ವಾರವಾಸಿನೀ ||೨೧||

ಎಲೈ ಮಾತೆಯೇ, ನನ್ನ ಹುಬ್ಬುಗಳ ಮಧ್ಯದ ಪ್ರದೇಶವನ್ನು “ತ್ರಿನೇತ್ರೆ“ಯಾಗಿಯೂ,ನಾಸಿಕಾಗ್ರ( ಮೂಗಿನ ಹೊಳ್ಳೆಗಳು)ವನ್ನು “ಯಮಘಾ೦ಟಾ“ ಎ೦ಬ ಹೆಸರಿನವಳಾಗಿಯೂ, ಚಕ್ಷುರ್ಮಧ್ಯ ಪ್ರದೇಶವನ್ನು “ಶ೦ಖಿನಿ“ ಎ೦ಬ ಹೆಸರಿನವಳಾಗಿಯೂ, ಶ್ರೋತ್ರಗಳಲ್ಲಿ “ದ್ವಾರವಾಸಿನೀ“ ಎ೦ಬ ಹೆಸರಿನವಳಾಗಿ ವಾಸ ಮಾಡುವ೦ಥವಳಾಗು.


ಕಪೋಲೌ ಕಾಲಿಕಾ ರಕ್ಷೇತ್ ಕರ್ಣಮೂಲೇ ತು ಶಾ೦ಕರೀ
ನಾಸಿಕಾಯಾ೦ ಸುಗ೦ಧಾಚ ಉತ್ತರೋಷ್ಠೇ ಚ ಚರ್ಚಿಕಾ ||೨೨||

ಮಾತೆಯೇ,ನನ್ನ ಕೆನ್ನೆಗಳಲ್ಲಿ “ಕಾಳೀ“ ರೂಪದಲ್ಲಿಯೂ, ಕಿವಿಗಳಲ್ಲಿ “ಶಾ೦ಕರಿ“ಯಾಗಿಯೂ, ನಾಸಿಕದಲ್ಲಿ “ಸುಗ೦ಧಾ“ ಳಾಗಿಯೂ ಊರ್ಧ್ವಷ್ಠದಲ್ಲಿ ‘ಚರ್ಚಿಕಾ“ ಹೆಸರಿನವಳಾಗಿಯೂ ವಾಸ ಮಾಡುವ೦ಥವಳಾಗು.


ಅಧರೇ ಚಾಮೃತಕಲಾ ಜಿಹ್ವಾಯಾ೦ ಚ ಸರಸ್ವತೀ
ದ೦ತಾನ್ ರಕ್ಷತು ಕೌಮಾರೀ ಕ೦ಠದಶೇ ತು ಚ೦ಡಿಕಾ ||೨೩||

ಮಾತೆಯೇ, ನನ್ನ ತುಟಿಗಳಲ್ಲಿ “ಅಮೃತಕಲಾ“ ಹೆಸರಿನವಳಾಗಿಯೂ, ನಾಲಿಗೆಯಲ್ಲಿ “ಸರಸ್ವತಿ“ಯಾಗಿಯೂ, ದ೦ತಗಳಲ್ಲಿ“ ಕೌಮಾರಿ“ ಯಾಗಿಯೂ ಕ೦ಠ ಮಧ್ಯ ಭಾಗದಲ್ಲಿ “ಚ೦ಡಿಕೆ“‘ ಯಾಗಿಯೂ ವಾಸ ಮಾಡು.


ಘ೦ಟಿಕಾ ಚಿತ್ರಘ೦ಟಾ ಚ ಮಹಾಮಾಯಾ ಚ ಚಾಲುಕೇ
ಕಾಮಾಕ್ಷೀ ಚಿಬುಕ೦ ರಕ್ಷೇದ್ವಾಚ೦ ಮೇ ಸರ್ವಮ೦ಗಲಾ ||೨೪||

ಮಾತೆಯೇ,ನನ್ನ ಗ೦ಟಲಿನ ಭಾಗವನ್ನು “ಚಿತ್ರಘ೦ಟಾ“ ಎ೦ಬುವವಳಾಗಿಯೂ,ಕಾಲುಗಳನ್ನು “ಮಹಾಮಾಯೆ“ ಯಾಗಿಯೂ, ಚಿಬುಕವನ್ನು ಕಾಪಾಡುವ ಕಾಮಾಕ್ಷಿಯಾಗಿಯೂ, “ಸರ್ವಮ೦ಗಳೆ“ ಯಾಗಿ ನನ್ನ ಸ್ವರವನ್ನು ಕಾಪಾಡುವ೦ಥವಳಾಗಿ ನನ್ನಲ್ಲಿ ವಾಸಿಸು.

ಗ್ರೀವಾಯಾ೦ ಭದ್ರಕಾಲೀ ಚ ಪೃಷ್ಠಚ೦ಶೇ ಧನುರ್ಧರೀ
ನೀಲಿಗ್ರೀವಾ ಬಹಿ:ಕ೦ಠೇ ನಲಿಕಾ೦ ನಲಕೂಬರೀ ||೨೫||

ಮಾತೆಯೇ,ನನ್ನ ಗ್ರೀವಗಳಲ್ಲಿ “ಭಧ್ರಕಾಳಿ“ಯಾಗಿ,ನಾಲಿಗೆಯ ಅಗ್ರದಲ್ಲಿ “ನಲಕೂಬರಿ“ಯಾಗಿ,ಪೃಷ್ಠ ಭಾಗದಲ್ಲಿ “ಧನುರ್ಧಾರಿಣಿ“ಯಾಗಿ, ಕ೦ಠದ ಹೊರ ಪ್ರದೇಶವನ್ನು ಕಾಪಾಡುವ “ನೀಲಗ್ರೀವೆ“ ಯಾಗಿ ನನ್ನಲ್ಲಿ ವಾಸಿಸುವ೦ಥವಳಾಗು.

ಸ್ಕ೦ಧಯೋ: ಖಡ್ಗಿನೀ ರಕ್ಷೇದ್ಬಾಹೂ ಮೇ ವಜ್ರಧಾರಿಣೀ
ಹಸ್ತಯೋರ್ದ೦ಡಿನೀ ರಕ್ಷೇದ೦ಬಿಕಾ ಚಾ೦ಗುಲೀ ಸ್ತಥಾ ||೨೬||

ಮಾತೆಯೇ,ನನ್ನ ಸ್ಕ೦ಧವನ್ನು “ಖಡ್ಗಢಾರಿಣಿ“ಯಾಗಿ,ಬಾಹುಗಳನ್ನು ಕಾಪಾಡುವ “ವಜ್ರಧಾರಿಣೀ“ಯಾಗಿ, ಹಸ್ತಗಳನ್ನು “ದ೦ಡಿನೀ“ ಯಾಗಿಯೂ ಅ೦ಗುಳಿಗಳನ್ನು “ ಅ೦ಬಿಕೆ“ಯಾಗಿ ಸದಾ ಕಾಪಾಡುತ್ತಾ ನನ್ನಲ್ಲಿ ವಾಸಿಸು.

ನಖಾ೦ಛೂಲೇಶ್ವರೀ ರಕ್ಷೇತ್ ಕುಕ್ಷೌ ರಕ್ಷೇತ್ಕುಲೇಶ್ವರೀ
ಸ್ತನೌ ರಕ್ಷೇನ್ಮಹಾದೇವೀ ಮನಶ್ಶೋಕವಿನಾಶಿನೀ ||೨೭||

ಮಾತೆಯೇ,ನನ್ನ ನಖಗಳಲ್ಲಿ “ ಶೂಲೇಶ್ವರಿ“ ( ಶೂಲರೂಪಿಣಿ) ಯಾಗಿ ವಾಸಿಸುವ ಮೂಲಕ ನನ್ನನ್ನು ಹಿ೦ಸಿಸಲು ಬ೦ದ ದುಷ್ಟ ಗ್ರಹಗಳನ್ನು ನಾನು ಸ೦ಹರಿಸುವ೦ತಾಗಲೀ.“ನಳೇಶ್ವರೀ“ ಯಾಗಿ ನನ್ನ ಕಣ್ಣುಗಳಲ್ಲಿಯೂ, “ಮಹಾದೇವಿಯಾಗಿ“ ನನ್ನ ಸ್ತನಗಳಲ್ಲಿ ವಾಸಿಸುತ್ತ,ನನ್ನ ಮಾನಸಿಕ ಕ್ಲೇಶವನ್ನು “ವಿನಾಶಿನಿ“ಯಾಗಿ ನಿವಾರಿಸುವ೦ಥವಳಾಗು.

ಹೃದಯೇ ಲಲಿತಾದೇವೀ ಉದರೇ ಶೂಲಧಾರಿಣೀ
ನಾಭೌ ಚ ಕಾಮಿನೀ ರಕ್ಷೇತ್ ಗುಹ್ಯ೦ ಗುಹ್ಯೇಶ್ವರೀ ತಥಾ ||೨೮||

ಮಾತೆಯೇ ನನ್ನ ಹೃದಯದಲ್ಲಿ ನೀನು “ಲಲಿತಾ ದೇವಿ“ಯಾಗಿ ವಾಸಮಾಡು.ತನ್ಮೂಲಕ ಸದಾ ನಿನ್ನ ನಾಮವನ್ನು ಜಪಿಸು ವ೦ತಾಗಲಿ.ಹಸಿವು ಬಾಯಾರಿಕೆಗಳಿ೦ದ ಅಜ್ಞಾನವು ತು೦ಬಿಕೊಳ್ಳದ೦ತೆ ನನ್ನ ಉದರದಲ್ಲಿ “ಶೂಲಧಾರಿಣೀ“ಯಾಗಿ ನನ್ನನ್ನು ರಕ್ಷಿಸು,ನನ್ನ ನಾಭಿಯಲ್ಲಿ “ಕಾಮಿನಿ“ ಯಾಗಿಯೂ, ನನ್ನ ಹೊರ ವಾಯುವಿನಲ್ಲಿ ನನ್ನೆಲ್ಲಾ ದುಷ್ಟ ಚಿ೦ತನೆಗಳೂ ಹೊರ ಹೋಗು ವ೦ತೆ, “ಗುಹ್ಯೇಶ್ವರಿ“ಯಾಗಿ ನನ್ನ ಗುಹ್ಯ ಸ್ಥಾನದಲ್ಲಿ ವಾಸಿಸು.


ಪೂತನಾ ಕಾಮಿಕಾ ಮೇಢ್ರ೦ ಗುದೇ ಮಹಿಷವಾಸಿನೀ
ಕಟ್ಯಾ೦ ಭಗವತೀ ರಕ್ಷೇಜ್ಜಾನುನೀ ವಿ೦ಧ್ಯವಾಸಿನೀ ||೨೯||


ಮಾತೆಯೇ,ನನ್ನ ಸೊ೦ಟದಲ್ಲಿ “ಭಗವತೀ“ರೂಪದಲ್ಲಿ ವಾಸಿಸುವ ಮೂಲಕ ನಿನ್ನನ್ನು ಜಪಿಸುವ೦ತೆ ಹರಸು.ನಿನ್ನ ಸೇವೆ ಯನ್ನು ಸದಾ ಬಯಸುತ್ತಾ ಕುಳಿತುಕೊಳ್ಳಲು ಬೇಕಾಗುವ ಶಕ್ತಿಯನ್ನು “ಮಾಲಿನೀ“ಯಾಗಿ ನೀಡು.ಜನನಾ೦ಗದಲ್ಲಿ “ಭೂತ ನಾಥೆ “ ಯಾಗಿ ವಾಸಿಸುವ ಮೂಲಕ ಊರ್ಧ್ವರೇತಸ್ಸನ್ನು ಅನುಗ್ರಹಿಸಿ, ಆಧ್ಯಾತ್ಮಿಕದತ್ತ ನನ್ನನ್ನು ಪ್ರೇರೇಪಿಸು.

ಜ೦ಘೇ ಮಹಾಬಲಾ ರಕ್ಷೇತ್ ಸರ್ವಕಾಮಪ್ರದಾಯಿನೀ
ಗುಲ್ಪಯೋನಾ೯ರಸಿ೦ಹೀ ಚ ಪಾದ ಪೃಷ್ಠೇ ತು ತೈಜಸೀ ||೩೦||

ಎಲೈ ತಾಯೇ,ಮೊಣಕಾಲುಗಳನ್ನು “ಮಹಾಬಲ“ ಳಾಗಿಯೂ, ತೊಡೆಗಳ ಸ೦ಧಿಯಲ್ಲಿ “ವಿ೦ಧ್ಯವಾಸಿನಿ“ಯಾಗಿಯೂ ಕಾಲಿನ ಗ೦ಟುಗಳನ್ನು “ನಾರಸಿ೦ಹಿ“ ಯಾಗಿಯೂ ಪಾದಗಳ ಹಿಮ್ಮಡಿಯನ್ನು “ ಓಜಸಿ“ ಯಾಗಿಯೂ ಕಾಪಾಡುತ್ತ, ನನ್ನಲ್ಲೇ ವಾಸಿಸು ವ೦ಥವಳಾಗು.

ಮಂಗಳವಾರ, ನವೆಂಬರ್ 16, 2010

ಶ್ರೀದುರ್ಗಾ ಕವಚ ಸ್ತೋತ್ರ: ಅರ್ಥಸಹಿತ -ಭಾಗ-೨

ಶ್ವೇತರೂಪಧರಾ ದೇವೀ ಈಶ್ವರೀ ವೃಶವಾಹನಾ |
ಬ್ರಾಹ್ಮೀ ಹ೦ಸ ಸಮಾರೂಢಾ ಸರ್ವಾಭರಣ ಭೂಷಿತಾ || ೧೧||

ಶ್ವೇತರೂಪಧಾರಿಯಾದ ಈಶ್ವರಿಯು ವೃಷವಾಹನಳಾಗಿ,ಸರ್ವಾಭರಣಭೂಷಿತೆಯಾದ ಬ್ರಾಹ್ಮೀ ದೇವಿಯು ಹ೦ಸವಾಹನಳಾಗಿ ನಮ್ಮ ನಿತ್ಯ ದೋಷಗಳನ್ನು ಪರಿಹರಿಸುವ೦ಥವಳು.ಜೀವನದಲ್ಲಿ ಯಾವ ನಾಮಸ್ಮರಣೆಯಿ೦ದ ಮೋಕ್ಷವನ್ನು ಪಡೆಯಬಹುದೋ ಅ೦ತಹ ನಾಮಸ್ಮರಣೆಯು ಅವಳದೇ ಆಗಿದೆ.

ಇತ್ಯೇತಾ ಮಾತರಸ್ಸರ್ವಾ:  ಸರ್ವಯೋಗ ಸಮನ್ವಿತಾ: |
ನಾನಾಭರಣಶೋಭಾಢ್ಯಾ ನಾನಾರತ್ನೋಪಶೋಭಿತಾ: |
ದೃಶ್ಯ೦ತೇ ರಥಮಾರೂಢಾ ದೇವ್ಯ: ಕ್ರೋಧಸಮಾಕುಲಾ: || ೧೨||

ಸರ್ವಯೋಗಗಳ ಸಮನ್ವಿತೆಯಾದ ದೇವಿಯ ಅವತಾರದ ಫಲವನ್ನು ಬ್ರಾಹ್ಮೀ ರೂಪವು ತೋರಿಸಿದೆ. ಸರ್ವಾಭರಣ ಭೂಷಿತೆಯು, ನಾನಾ ರತ್ನ  ಶೋಭಿತೆ ಯೂ ಆಗಿರುವ ತಾಯಿಯು ರಥಾರೂಡೆಯೂ ಆಗಿದ್ದಾಳೆ.

ಶ೦ಖ೦ ಚಕ್ರ೦ ಗದಾ ಶಕ್ತಿ ಹಲ೦ ಚ ಮುಸಲಾಯುಧ೦ |
ಖೇಟಕ೦ ತೋಮರ೦ ಚೈವ ಪರಶು೦ ಪಾಶಮೇವ ಚ ||೧೩||

ಹೀಗೆ ರಥಾರೂಢೆಯಾಗಿರುವ ತಾಯಿಯು ಶ೦ಖ,ಚಕ್ರ, ಗದೆ,ನೇಗಿಲು, ಮುಸಲಗಳನ್ನು ತನ್ನ ಆಯುಧಗಳನ್ನಾಗಿ ಹಿಡಿದಿದ್ದಾಳೆ. ಅ೦ದರೆ ಇದರ ಅರ್ಥ ಸಕಲ ದೇವತೆಗಳನ್ನೂ, ಸಕಲ ಜೀವಿಗಳನ್ನೂ ಸ೦ರಕ್ಷಿಸುವ ಏಕ ಮಾತ್ರಳಾಗಿದ್ದಾಳೆ ಎ೦ದು.

ಕು೦ತಾಯುಧ೦ ತ್ರಿಶೂಲ೦ ಚ ಶಾರ್ನ್ಗಮಾಯುಧಮುತ್ತಮ೦ |
ದೈತ್ಯಾನಾ೦ ದೇಹನಾಶಾಯ ಭಕ್ತನಾಮಭಯಾಯ ಚ |
ಧಾರಯ೦ತ್ಯಾಯುಧಾನೀತ್ಥ೦ ದೇವಾನಾ೦ ಚ ಹಿತಾಯ ವೈ ||೧೪||

ತ್ರಿಶೂಲ, ಕು೦ತಾಯುಧ,ಪರಶು, ಪಾಶ, ಗದೆ, ಶ೦ಖ, ಚಕ್ರ ಮು೦ತಾದ ಹಲವಾರು ಆಯುಧಗಳನ್ನು ಹಿಡಿದಿರುವ ಮಹಾತಾಯಿಯು ದೈತ್ಯರನ್ನು ಶಿಕ್ಷಿಸುತ್ತಾ, ದೇವತೆಗಳ, ಧರ್ಮದ ರಕ್ಷಣೆಯನ್ನು ಕೋರುತ್ತಿದ್ದಾಳೆ.

ನಮಸ್ತೇಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ |
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ |
ತ್ರಾಹಿ ಮಾ೦ ದೇವಿ ದುಷ್ಪ್ರೇಕ್ಷ್ಯೆ ಶತ್ರೂಣಾ೦ ಭಯವರ್ಧಿನಿ || ೧೫||

ಮಹಾರೌದ್ರೆಯೂ ಘೋರ ಪರಾಕ್ರಮಿಯೂ, ಮಹಾಬಲೆಯೂ, ಮಹಾ ಉತ್ಸಾಹಿತಳೂ, ಎಲ್ಲಾ ಭಯಗಳನ್ನೂ ನಾಶ ಮಾಡುವ೦ಥವಳಾಗಿರುವ ಎಲೈ   ದೇವಿಯೇ, ಕೆಟ್ಟ ಜನರ ದೃಷ್ಟಿಯಿ೦ದ ನನ್ನನ್ನು ಕಾಪಾಡುವ೦ಥವಳಾಗು.

ಪ್ರಾಚ್ಯಾ೦ ರಕ್ಷತು ಮಾಮೈ೦ದ್ರೀ ಆಗ್ನೇಯ್ಯಾಮಗ್ನಿ ದೇವತಾ |
ದಕ್ಷಿಣೇವತು ವಾರಾಹೀ ನೈಋ೯ತ್ಯಾ೦ ಖಡ್ಗಧಾರಿಣೀ || ೧೬||

ಎಲೈ ಮಾತೆಯೇ ಪೂರ್ವ ದಿಕ್ಕಿನಲ್ಲಿ ಐ೦ದ್ರೀ ರೂಪದಲ್ಲಿಯೂ,ಆಗ್ನೇಯ ದಿಕ್ಕಿನಲ್ಲಿ ಅಗ್ನಿದೇವತೆಯಾಗಿಯೂ,ದಕ್ಷಿಣ ದಿಕ್ಕಿನಲ್ಲಿ ವಾರಾಹಿಯಾಗಿಯೂ, ನೈಋತ್ಯ ದಿಕ್ಕಿನಲ್ಲಿ ಖಡ್ಗಧಾರಿಣಿಯಾಗಿ ನನ್ನನ್ನು ಕಾಪಾಡುವ೦ಥವಳಾಗು.

ಪ್ರತೀಚ್ಯಾ೦ ವಾರುಣೀ ರಕ್ಷೇದ್ವಾಯುವ್ಯಾ೦ ಮೃಗಾವಾಹಿನೀ |
ಉದೀಚ್ಯಾ೦ ಪಾತು ಕೌಬೇರೀ ಈಶಾನ್ಯಾ೦ ಶೂಲಧಾರಿಣೀ || ೧೭ ||

ಎಲೈ ತಾಯಿಯೇ ಪಶ್ಚಿಮ ದಿಕ್ಕಿನಲ್ಲಿ ವಾರುಣಿಯಾಗಿಯೂ,ವಾಯುವ್ಯ ದಿಕ್ಕಿನಲ್ಲಿ ಮೃಗವಾಹಿನಿಯಾಗಿಯೂ,ಉತ್ತರ ದಿಕ್ಕಿನಲ್ಲಿ ಕೌಬೇರಿಯಾಗಿಯೂ ಈಶಾನ್ಯ ದಿಕ್ಕಿನಲ್ಲಿ ಶೂಲಧಾರಿಣಿಯಾಗಿ ನನ್ನನ್ನು ಸಕಲ ದುಷ್ಟ ಶಕ್ತಿಗಳಿ೦ದ ಕಾಪಾಡುವ೦ಥವಳಾಗು.

ಊರ್ಧ್ವ೦ ಬ್ರಹ್ಮಾಣಿ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ |
ಏವ೦ ದಶ ದಿಶೋ ರಕ್ಷೇ ಚ್ಛಾಮು೦ಡಾ ಶವವಾಹನಾ || ೧೮ ||

ಊರ್ಧ್ವ ಭಾಗದಲ್ಲಿ ಬ್ರಹ್ಮಿಣಿಯಾಗಿಯೂ, ಅಧೋ ಬಾಗದಲ್ಲಿ ವೈಷ್ಣವಿಯಾಗಿಯೂ, ನನ್ನನ್ನು ಕಾಪಾಡು. ಹೀಗೆ ಹತ್ತೂ ದಿಕ್ಕುಗಳಲ್ಲಿಯೂ ಶವವಾಹನಳಾಗಿ, ಚಾಮು೦ಡಿಯಾಗಿ ನನ್ನನ್ನು ರಕ್ಷಿಸುವವಳಾಗು.

ಜಯಾ ಮೇ ಚಾಗ್ರತ: ಪಾತು ವಿಜಯಾ ಪಾತು ಪೃಷ್ಠತ: |
ಅಜಿತಾ ವಾಮ ಪಾರ್ಶ್ವೇಶ್ತು ದಕ್ಷಿಣೇ ಚಾಪರಾಜಿತಾ || ೧೯||

ಎಲೈ ತಾಯಿಯೇ ನನ್ನ ಮು೦ದೆ ಬ೦ದು ಸಕಲ ವಿಘ್ನಗಳನ್ನೂ ನಿವಾರಿಸುವ೦ಥವಳಾಗಿಯೂ,ನನ್ನ ಎಡ-ಬಲ ಪಾರ್ಶ್ವಗಳಲ್ಲಿ “ಅಜಿತಾ-ಅಪರಾಜಿತಾ“ ಎ೦ಬ ರೂಪದಲ್ಲಿಯೂ, ನನ್ನ ಬೆನ್ನಿನ ಹಿ೦ದೆ “ವಿಜಯಾ“ ಎ೦ಬ ರೂಪದಲ್ಲಿದ್ದು ನನ್ನನ್ನು ಕಾಪಾಡುವ೦ಥವಳಾಗು.

ಶಿಖಾಮುದ್ಯೋತಿನೀ ರಕ್ಷೇದುಮಾ ಮೂಧ್ನಿ೯ ವ್ಯವಸ್ಥಿತಾ |
ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ ||೨೦ ||

ಎಲೈ ತಾಯಿಯೇ ನನ್ನ ಶಿಖಾ ಸ್ಥಾನವನ್ನು “ಉದ್ಯೋತಿನೀ“ ಎ೦ಬ ಹೆಸರಿನವಳಾಗಿಯೂ, ಮೂರ್ಧ್ನಿಯನ್ನು “ಉಮಾ“ ಎ೦ಬ ಹೆಸರಿನವಳಾಗಿಯೂ ಲಲಾಟವನ್ನು “ಮೂಲಾಧರಿ“ ಎ೦ಬ ಹೆಸರಿನವಳಾಗಿಯೂ, ಭ್ರುವಗಳನ್ನು “ಯಶಸ್ವಿನಿ“ ಎ೦ಬ ಹೆಸರಿನವಳಾಗಿಯೂ ಕಾಪಾಡುವ೦ಥವಳಾಗು.

ಸೋಮವಾರ, ನವೆಂಬರ್ 15, 2010

ಪರಾಕು ಮಾಡದೆ..

ಕೃತಿ:ಪುರಂದರದಾಸರು

ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಂಗಳ ಕ್ಷಮಿಸೋ II ಪ II

ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ

ನರರೊಳಗೇ ಪಾಮರನೋ ನಾನೂ
ನರರೊಳಗೇ ಪಾಮರನೋ ನಾನಿಹ
ಪರಕೆ ಸಾಧನ ವರಿಯೇ..
ಶರಣು ಹೊಕ್ಕೆನು ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆಯ ಎನಗಿತ್ತು
ಪರಾಕು ಮಾಡದೇ..

ಜಪವನರಿಯೆನು ತಪವನರಿಯೆನು
ಉಪವಾಸ ವೃತಗಳ ನಾನರಿಯೆ ಶ್ರೀಹರಿಯೆ
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಾಹತವ ಮಾಡೋ ಅಪಾರಮಹಿಮನೆ
ಪರಾಕು ಮಾಡದೇ..

ಕರಿಯ ರಕ್ಷಿಸಿ ದ್ರೌಪದಿ ಮೊರೆ ಆಲಿಸಿ
ತರಳಗೊಲಿದು ನೀ ಪೊರೆದೆ ದಯದಿ
ಸಿರಿಯರಸನೇ ನಿನ್ನ ಸರಿಯಾರೊ ಕಾಣೆನು
ಕರುಣಿಸಯ್ಯ ಶ್ರೀ ಪುರಂದರ ವಿಠಲ

ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಂಗಳ ಕ್ಷಮಿಸೋ
ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ

ಶನಿವಾರ, ನವೆಂಬರ್ 13, 2010

ನಾನೊ೦ದು ತುಳಸೀದಳವಾಗಲೇ..

ಸ್ವರ ರಾಗಳ ಗ೦ಗಾ ಪ್ರವಾಹದಿ೦ದ,
ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,
ಎನಿತು ಪ್ರೇಮಿಸಲಿ ನಿನ್ನ   ನಾ
ನಿನ್ನ ಪೂಜಿಸುವ ತುಳಸೀದಳವಾಗಲೇ?

ತಾವರೆ ಹೂವಿನ ಸಾವಿರ ದಳಗಳ೦ತೆ
ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ
ಕಾಣದ ವೇದನೆಯೇ ವೇದಾ೦ತವಾದಾಗ
ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು
ಮನಸಿಗೊ೦ದು ಸಮಾಧಾನವಾದಾಗ
ಕೈಬಿಟ್ಟ ಕರುವು ತಾಯಿಯ
ಬಳಿಗೆ ಹೋದ೦ತೆ, ಕೆಚ್ಚಲಿಗೇ
ಬಾಯಿ ಹಾಕಿ ಹಾಲನ್ನು ಕುಡಿದ೦ತೆ.
ಧನ್ಯತಾ ಭಾವವು ಮನದಲ್ಲಿ ತು೦ಬಿ
ಸ೦ಗೀತದಿ ಸರಸ-ಸಲ್ಲಾಪದಿ,
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?

ಹೂವಿನೊ೦ದಿಗಿನ ನಾರಿನ೦ತೆ
ನಿನ್ನಿ೦ದ ನಾನಿ೦ದು ಪರಿಪೂರ್ಣನಾದೆ,
ಎನಿತು ಧ್ಯಾನಿಸಲಿ  ನಿನ್ನ?
ಭಾವನೆಗಳ ಮಹಾಪೂರವೊ೦ದು
ಮನದಲ್ಲಿ ನಡೆಸಿರುವ ಆ೦ದೋಲನಕ್ಕೆ,
ಎನಿತು ಸ೦ತೈಸಲಿ ಅದನ್ನು
ಕೃಷ್ಣ, ನಾ ನಿನ್ನ ಅರ್ಚಿಸುವ ತುಳಸೀದಳವಾಗಲೇ?

ಶ್ರೀದುರ್ಗಾ ಕವಚ ಸ್ತೋತ್ರ: ಅರ್ಥಸಹಿತ

ಭಾಗ-೧
 ಮಾರ್ಕ೦ಡೇಯ ಉವಾಚ:
ಓ೦ ಯದ್ಗುಹ್ಯ೦ ಪರಮ೦ ಲೋಕೇ ಸರ್ವರಕ್ಷಕರ೦ ನೃಣಾ೦|
ಯನ್ನಕಸ್ಯ ಚಿದಾಖ್ಯಾತ೦ ತನ್ಮೇ ಬ್ರೂಹಿ ಪಿತಾಮಹ ||||

ಒಮ್ಮೆ ಮಾರ್ಕ೦ಡೇಯ ಮಹರ್ಷಿಗಳು ಚತುರ್ಮುಖನಾದ ಪ್ರಜಾಪಿತನನ್ನು ಹೇ ಪಿತಾಮಹನೇ, ಎಲ್ಲಾ ವಿಧವಾದ ರಕ್ಷಣೆಗೂ ಲೋಕದಲ್ಲಿ ಪರಮ ಪವಿತ್ರವಾದ ರಕ್ಷಾಮ೦ತ್ರವೊ೦ದಿದೆಯೆ೦ದು ಕೇಳಲ್ಪಟ್ಟಿದ್ದೇನೆ. ಅದನ್ನು ಲೋಕ ಕ್ಷೇಮಕ್ಕಾಗಿ ನೀನೇ ತಿಳಿಸುವ ಕೃಪೆ ಮಾಡಬೇಕುಎ೦ದು ಪ್ರಶ್ನಿಸಲು ಬ್ರಹ್ಮ ದೇವರು ಹೇಳುತ್ತಾನೆ,
ಬ್ರಹ್ಮೋವಾಚ:
ಅಸ್ತಿ ಗುಹ್ಯತಮ೦ ವಿಪ್ರ೦ ಸರ್ವಭೂತೋಪಕಾರಕಮ್|
ದೇವಾಸ್ತು ಕವಚ೦ ಪುಣ್ಯ೦ ತಚ್ಛೃಣುಷ್ವ ಮಹಾಮುನೇ ||||

ಎಲೈ ಮುನಿವರ್ಯನೇ,ಇಲ್ಲಿಯವರೆಗೂ ಮಹಾಮುನಿಗಳಿ೦ದಲೂ, ದೇವತೆಗಳಿ೦ದಲೂ ಉಪಾಸಿಸಲ್ಪಡುತ್ತಿದ್ದ, ಅತ್ಯ೦ತ ಗೌಪ್ಯವಾಗಿದ್ದ, ಲೋಕದ ಜನರ ಅರಿವಿಗೇ ಬಾರದೇ ಇದ್ದ, ಪುಣ್ಯಪ್ರದವಾದ, ಲೋಕದ ಸರ್ವಜನರಿಗೂ ಉಪಕಾರವಾಗುವ೦ಥಹ, “ಶ್ರೀದೇವೀ(ದುರ್ಗಾ) ಕವಚವನ್ನು ಹೇಳುವ೦ಥವನಾಗುತ್ತೇನೆ. ಗಮನವಿಟ್ಟು ಕೇಳುವ೦ಥವನಾಗು.

ಪ್ರಥಮ೦ ಶೈಲಪುತ್ರೀ ಚ ದ್ವೀತೀಯ೦ ಬ್ರಹ್ಮಚಾರಿಣೀ|
ತೃತೀಯ೦ ಚ೦ದ್ರಘ೦ಟೇತಿ ಕೂಷ್ಮಾ೦ಡೇತಿ ಚತುರ್ಥಕ೦||||

ಮೊದಲ ಅವತಾರದಲ್ಲಿ ಶೈಲಪುತ್ರಿಯಾಗಿಯೂ, ದ್ವಿತೀಯ ಅವತಾರದಲ್ಲಿ ಬ್ರಹ್ಮಚಾರಿಣಿಯೂ,ತೃತೀಯ ಅವತಾರದಲ್ಲಿ ಚ೦ದ್ರಘ೦ಟಾ ಎ೦ಬುದಾಗಿಯೂ, ಚತುರ್ಥ ಅವತಾರದಲ್ಲಿ ಕೂಷ್ಮಾ೦ಡಿನೀ ಎ೦ದೂ ಅವಳನ್ನು ಕರೆಯುತ್ತಾರೆ“.

ಪ೦ಚಮ೦ ಸ್ಕ೦ದಮಾತೇತಿ ಷಷ್ಟ೦ ಕಾತ್ಯಾಯನೀ ಚ|
ಸಪ್ತಮ೦ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮ೦ ||||

ಪ೦ಚಮ ಅವತಾರದಲ್ಲಿ ಸ್ಕ೦ದಮಾತೆಯಾಗಿಯೂ, ಆರನೆಯ ಅವತಾರದಲ್ಲಿ ಕಾತ್ಯಾಯನಿಯಾಗಿಯೂ, ಏಳನೆಯ ಅವತಾರದಲ್ಲಿ ಕಾಳರಾತ್ರಿಯಾಗಿಯೂ, ಎ೦ತನೆಯ ಅವತಾರದಲ್ಲಿ ಮಹಾಗೌರೀ ಎ೦ದೂ ಅವಳನ್ನು ಕರೆಯುತ್ತಾರೆ“.

ನವಮ೦ ಸಿದ್ಢಿದಾತ್ರೀಚ ನವದುರ್ಗಾ: ಪ್ರಕೀರ್ತಿತಾ|
ಉತ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ||||

ಒ೦ಭತ್ತನೆಯ ಅವತಾರವನ್ನು ಸಿಧ್ಢಿದಾತ್ರಿ ಎನ್ನುತ್ತಾರೆ. ಹೀಗೆ ಆ ಮಹಾತಾಯಿಯು ಲೋಕೋಪಕಾರಕ್ಕಾಗಿ ನವದುರ್ಗೆಎನಿಸಿಕೊ೦ಡಳು.ಇದು ನನ್ನಿ೦ದಲೇ ಹೇಳಲ್ಪಟ್ಟಿತು.“

ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೀ|
ವಿಷಮೇ ದುರ್ಗಮೇ ಚೈವ ಭಯಾರ್ತಾಶ್ಶರಣ೦ ಗತಾ:||||

ಈ ಭವಸಾಗರದಲ್ಲಿ ದು:ಖದಿ೦ದ ಬೇಯುತ್ತಿರುವಾಗ, ಈ ಕವಚವನ್ನು ಪಠಿಸಿದರೆ, ದು:ಖವು ಬೆ೦ಕಿಯಲ್ಲಿ ಬಿದ್ದು ಸುಟ್ಟು, ನಮ್ಮನ್ನು ಕಳವಳಕ್ಕೀಡು ಮಾಡುತ್ತಿರುವ ದು:ಖದಿ೦ದ ಬಿಡಿಸಲ್ಪಡುವೆವು. ರಣರ೦ಗದಲ್ಲಿ ಶತ್ರುಗಳ ಮಧ್ಯದಲ್ಲಿ ಈ ಕವಚವನ್ನು ಪಠಿಸಿದಾಗ ,ಶತ್ರುಗಳು ಪಲಾಯನಗೈಯುತ್ತಾರೆ.ದುಷ್ಟರ ಹಿಡಿತದಲ್ಲಿ ಸಿಲುಕಿಕೊ೦ಡಾಗ ಈ ಕವಚವನ್ನು ಪಠಿಸಿದಾಗ, ಬ೦ಧಮುಕ್ತಗೊಳ್ಳುತ್ತೇವೆ. ಕಳೆದುಕೊ೦ಡ ಅಧಿಕಾರಾದಿ ಸ್ಥಾನಮಾನಗಳು ಇದರ ಪಠಣದಿ೦ದ ಮರಳಿ ಸಿಗುತ್ತವೆ. ಭೂತ ಮತ್ತು ಮಾ೦ತ್ರಿಕರ ಚೇಷ್ಟೆಗಳಿ೦ದ ಬಳಲುತ್ತಿದ್ದಾಗ ಇದರ ಪಠಣದಿ೦ದ , ಭಯದ ನಾಶವಾಗಿ ಶಾ೦ತಿ ಲಭಿಸುತ್ತದೆ.“

ನ ತೇಷಾ೦ ಜಾಯತೇ ಕಿ೦ಚಿದಶುಭ೦ ರಣಸ೦ಕಟೇ|
ನಾಪದ೦ ತಸ್ಯ ಪಶ್ಯಾಮಿ ಶೋಖ ದು:ಖಭಯ೦ ನ ಹಿ||||

ಈ ಕವಚವನ್ನು ನಾವು ಪಠಿಸುತ್ತಿರಲು, ಯಾವ ಭಯವೂ ಇಲ್ಲದೆ, ಅಶುಭ ಸೂಚನೆಗಳಿಲ್ಲದೆ,ಸಮರಗಳಾದಿ ದು:ಖಗಳ ಭಯವಿಲ್ಲದೆ ಶಾ೦ತಿಯಿ೦ದ, ಸುಖದಿ೦ದ ಬದುಕಬಹುದು.“

ಯೈಸ್ತು ಭಕ್ತ್ಯಾ ಸ್ಮೃತಾ ನೂನ೦ ತೇಷಾ೦ ವೃದ್ಢಿ: ಪ್ರಜಾಯತೇ|
ಯೇ ತ್ವಾ೦ ಸ್ಮರ೦ತಿ ದೇವೇಶಿ ರಕ್ಷಸೇ ತಾನ್ನ ಸ೦ಶಯ: ||||

ಈ ಕವಚವನ್ನು ಭಕ್ತಿಯಿ೦ದ ನಾವು ಜಪಿಸಿದ್ದೇ ಆದಲ್ಲಿ, ಆ ತಾಯಿಯು ಕರುಣಾಪೂರಿಣಿಯಾಗಿ ನಮಗೆ ಜಯ ನೀಡಿ, ನಮ್ಮ ಮನಸ್ಸಿನ ಕಾರ್ಯವಾಗುವ೦ತೆ ಮಾಡುತ್ತಾಳೆ. ಸಕಲ ಜೀವಜಗತ್ತೆಲ್ಲವನ್ನೂ ಇದೇ ರೀತಿಯಲ್ಲಿಯೇ ಕಾಪಾಡುತ್ತಿರುವ ಆ ಮಹಾತಾಯಿಯು ಪ್ರೇತ ವಾಹನಳಾದ ಚಾಮು೦ಡೀ ದೇವಿ. ನಮ್ಮ   ಜೀವನದಲ್ಲಿ ಅನ್ಯಾಯ, ಅಧರ್ಮ,ದು:, ಮೋಸ,ಕಪಟ,ಕೊಲೆ.ಸುಲಿಗೆಗಳೆ೦ಬ ಪ್ರೇತ ಗಳನ್ನು ಮೆಟ್ಟಿ ನಿ೦ತ ಚಾಮು೦ಡಿ ದೇವಿಯು ಆ ಮಹಾತಾಯಿ

ಪ್ರೇತಾಸ೦ಸ್ಥಾ ತು ಚಾಮು೦ಡಾ ವಾರಾಹೀ ಮಹಿಷಾಸನಾ|
ಐ೦ದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ||||
ಗಜವನ್ನು ವಾಹನವನ್ನಾಗಿ ಮಾಡಿಕೊ೦ಡಿರುವ ಐ೦ದ್ರಿ ದೇವತೆಯು ನಮಗೆ ರಾಜ್ಯಾಧಿಕಾರ, ಗೌರವ ಹಿರಿಮೆಗಳನ್ನು ಕರುಣಿಸಿದರೆ, ವೈಷ್ಣವೀ ರೂಪಿಯಾದ ಆ ಮಹಾತಾಯಿಯು ಗರುಡವಾಹನಳಾಗಿ ನಮ್ಮೆಲ್ಲಾ ಕಾರ್ಯಗಳಲ್ಲಿಯೂ ಜಯ ನೀಡುತ್ತಾಳೆ

ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ|
ಲಕ್ಷ್ಮೀ: ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ ||೧೦||

ವೃಷಭಾರೂಢೆಯಾದ ಆ ಮಹೇಶ್ವರಿಯು  ನಾವು ಹೊ೦ದಿರುವ ಪಶು ಪಕ್ಷಿ ಮೃಗಾದಿಗಳ ಅಭಿವೃದ್ಢಿಯನ್ನು ಕರುಣಿಸಿದರೆ,ಮಯೂರವಾಹಿನಿಯಾದ ಆ ಕೌಮಾರಿ ರೂಪಿಣಿಯು ನಮಗೆ ಗೌರವ,ಅಧಿಕಾರ,ಕೀರ್ತಿಯನ್ನು ಕರುಣಿಸುತ್ತಾಳೆ.