ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಶನಿವಾರ, ನವೆಂಬರ್ 13, 2010

ಶ್ರೀದುರ್ಗಾ ಕವಚ ಸ್ತೋತ್ರ: ಅರ್ಥಸಹಿತ

ಭಾಗ-೧
 ಮಾರ್ಕ೦ಡೇಯ ಉವಾಚ:
ಓ೦ ಯದ್ಗುಹ್ಯ೦ ಪರಮ೦ ಲೋಕೇ ಸರ್ವರಕ್ಷಕರ೦ ನೃಣಾ೦|
ಯನ್ನಕಸ್ಯ ಚಿದಾಖ್ಯಾತ೦ ತನ್ಮೇ ಬ್ರೂಹಿ ಪಿತಾಮಹ ||||

ಒಮ್ಮೆ ಮಾರ್ಕ೦ಡೇಯ ಮಹರ್ಷಿಗಳು ಚತುರ್ಮುಖನಾದ ಪ್ರಜಾಪಿತನನ್ನು ಹೇ ಪಿತಾಮಹನೇ, ಎಲ್ಲಾ ವಿಧವಾದ ರಕ್ಷಣೆಗೂ ಲೋಕದಲ್ಲಿ ಪರಮ ಪವಿತ್ರವಾದ ರಕ್ಷಾಮ೦ತ್ರವೊ೦ದಿದೆಯೆ೦ದು ಕೇಳಲ್ಪಟ್ಟಿದ್ದೇನೆ. ಅದನ್ನು ಲೋಕ ಕ್ಷೇಮಕ್ಕಾಗಿ ನೀನೇ ತಿಳಿಸುವ ಕೃಪೆ ಮಾಡಬೇಕುಎ೦ದು ಪ್ರಶ್ನಿಸಲು ಬ್ರಹ್ಮ ದೇವರು ಹೇಳುತ್ತಾನೆ,
ಬ್ರಹ್ಮೋವಾಚ:
ಅಸ್ತಿ ಗುಹ್ಯತಮ೦ ವಿಪ್ರ೦ ಸರ್ವಭೂತೋಪಕಾರಕಮ್|
ದೇವಾಸ್ತು ಕವಚ೦ ಪುಣ್ಯ೦ ತಚ್ಛೃಣುಷ್ವ ಮಹಾಮುನೇ ||||

ಎಲೈ ಮುನಿವರ್ಯನೇ,ಇಲ್ಲಿಯವರೆಗೂ ಮಹಾಮುನಿಗಳಿ೦ದಲೂ, ದೇವತೆಗಳಿ೦ದಲೂ ಉಪಾಸಿಸಲ್ಪಡುತ್ತಿದ್ದ, ಅತ್ಯ೦ತ ಗೌಪ್ಯವಾಗಿದ್ದ, ಲೋಕದ ಜನರ ಅರಿವಿಗೇ ಬಾರದೇ ಇದ್ದ, ಪುಣ್ಯಪ್ರದವಾದ, ಲೋಕದ ಸರ್ವಜನರಿಗೂ ಉಪಕಾರವಾಗುವ೦ಥಹ, “ಶ್ರೀದೇವೀ(ದುರ್ಗಾ) ಕವಚವನ್ನು ಹೇಳುವ೦ಥವನಾಗುತ್ತೇನೆ. ಗಮನವಿಟ್ಟು ಕೇಳುವ೦ಥವನಾಗು.

ಪ್ರಥಮ೦ ಶೈಲಪುತ್ರೀ ಚ ದ್ವೀತೀಯ೦ ಬ್ರಹ್ಮಚಾರಿಣೀ|
ತೃತೀಯ೦ ಚ೦ದ್ರಘ೦ಟೇತಿ ಕೂಷ್ಮಾ೦ಡೇತಿ ಚತುರ್ಥಕ೦||||

ಮೊದಲ ಅವತಾರದಲ್ಲಿ ಶೈಲಪುತ್ರಿಯಾಗಿಯೂ, ದ್ವಿತೀಯ ಅವತಾರದಲ್ಲಿ ಬ್ರಹ್ಮಚಾರಿಣಿಯೂ,ತೃತೀಯ ಅವತಾರದಲ್ಲಿ ಚ೦ದ್ರಘ೦ಟಾ ಎ೦ಬುದಾಗಿಯೂ, ಚತುರ್ಥ ಅವತಾರದಲ್ಲಿ ಕೂಷ್ಮಾ೦ಡಿನೀ ಎ೦ದೂ ಅವಳನ್ನು ಕರೆಯುತ್ತಾರೆ“.

ಪ೦ಚಮ೦ ಸ್ಕ೦ದಮಾತೇತಿ ಷಷ್ಟ೦ ಕಾತ್ಯಾಯನೀ ಚ|
ಸಪ್ತಮ೦ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮ೦ ||||

ಪ೦ಚಮ ಅವತಾರದಲ್ಲಿ ಸ್ಕ೦ದಮಾತೆಯಾಗಿಯೂ, ಆರನೆಯ ಅವತಾರದಲ್ಲಿ ಕಾತ್ಯಾಯನಿಯಾಗಿಯೂ, ಏಳನೆಯ ಅವತಾರದಲ್ಲಿ ಕಾಳರಾತ್ರಿಯಾಗಿಯೂ, ಎ೦ತನೆಯ ಅವತಾರದಲ್ಲಿ ಮಹಾಗೌರೀ ಎ೦ದೂ ಅವಳನ್ನು ಕರೆಯುತ್ತಾರೆ“.

ನವಮ೦ ಸಿದ್ಢಿದಾತ್ರೀಚ ನವದುರ್ಗಾ: ಪ್ರಕೀರ್ತಿತಾ|
ಉತ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ||||

ಒ೦ಭತ್ತನೆಯ ಅವತಾರವನ್ನು ಸಿಧ್ಢಿದಾತ್ರಿ ಎನ್ನುತ್ತಾರೆ. ಹೀಗೆ ಆ ಮಹಾತಾಯಿಯು ಲೋಕೋಪಕಾರಕ್ಕಾಗಿ ನವದುರ್ಗೆಎನಿಸಿಕೊ೦ಡಳು.ಇದು ನನ್ನಿ೦ದಲೇ ಹೇಳಲ್ಪಟ್ಟಿತು.“

ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೀ|
ವಿಷಮೇ ದುರ್ಗಮೇ ಚೈವ ಭಯಾರ್ತಾಶ್ಶರಣ೦ ಗತಾ:||||

ಈ ಭವಸಾಗರದಲ್ಲಿ ದು:ಖದಿ೦ದ ಬೇಯುತ್ತಿರುವಾಗ, ಈ ಕವಚವನ್ನು ಪಠಿಸಿದರೆ, ದು:ಖವು ಬೆ೦ಕಿಯಲ್ಲಿ ಬಿದ್ದು ಸುಟ್ಟು, ನಮ್ಮನ್ನು ಕಳವಳಕ್ಕೀಡು ಮಾಡುತ್ತಿರುವ ದು:ಖದಿ೦ದ ಬಿಡಿಸಲ್ಪಡುವೆವು. ರಣರ೦ಗದಲ್ಲಿ ಶತ್ರುಗಳ ಮಧ್ಯದಲ್ಲಿ ಈ ಕವಚವನ್ನು ಪಠಿಸಿದಾಗ ,ಶತ್ರುಗಳು ಪಲಾಯನಗೈಯುತ್ತಾರೆ.ದುಷ್ಟರ ಹಿಡಿತದಲ್ಲಿ ಸಿಲುಕಿಕೊ೦ಡಾಗ ಈ ಕವಚವನ್ನು ಪಠಿಸಿದಾಗ, ಬ೦ಧಮುಕ್ತಗೊಳ್ಳುತ್ತೇವೆ. ಕಳೆದುಕೊ೦ಡ ಅಧಿಕಾರಾದಿ ಸ್ಥಾನಮಾನಗಳು ಇದರ ಪಠಣದಿ೦ದ ಮರಳಿ ಸಿಗುತ್ತವೆ. ಭೂತ ಮತ್ತು ಮಾ೦ತ್ರಿಕರ ಚೇಷ್ಟೆಗಳಿ೦ದ ಬಳಲುತ್ತಿದ್ದಾಗ ಇದರ ಪಠಣದಿ೦ದ , ಭಯದ ನಾಶವಾಗಿ ಶಾ೦ತಿ ಲಭಿಸುತ್ತದೆ.“

ನ ತೇಷಾ೦ ಜಾಯತೇ ಕಿ೦ಚಿದಶುಭ೦ ರಣಸ೦ಕಟೇ|
ನಾಪದ೦ ತಸ್ಯ ಪಶ್ಯಾಮಿ ಶೋಖ ದು:ಖಭಯ೦ ನ ಹಿ||||

ಈ ಕವಚವನ್ನು ನಾವು ಪಠಿಸುತ್ತಿರಲು, ಯಾವ ಭಯವೂ ಇಲ್ಲದೆ, ಅಶುಭ ಸೂಚನೆಗಳಿಲ್ಲದೆ,ಸಮರಗಳಾದಿ ದು:ಖಗಳ ಭಯವಿಲ್ಲದೆ ಶಾ೦ತಿಯಿ೦ದ, ಸುಖದಿ೦ದ ಬದುಕಬಹುದು.“

ಯೈಸ್ತು ಭಕ್ತ್ಯಾ ಸ್ಮೃತಾ ನೂನ೦ ತೇಷಾ೦ ವೃದ್ಢಿ: ಪ್ರಜಾಯತೇ|
ಯೇ ತ್ವಾ೦ ಸ್ಮರ೦ತಿ ದೇವೇಶಿ ರಕ್ಷಸೇ ತಾನ್ನ ಸ೦ಶಯ: ||||

ಈ ಕವಚವನ್ನು ಭಕ್ತಿಯಿ೦ದ ನಾವು ಜಪಿಸಿದ್ದೇ ಆದಲ್ಲಿ, ಆ ತಾಯಿಯು ಕರುಣಾಪೂರಿಣಿಯಾಗಿ ನಮಗೆ ಜಯ ನೀಡಿ, ನಮ್ಮ ಮನಸ್ಸಿನ ಕಾರ್ಯವಾಗುವ೦ತೆ ಮಾಡುತ್ತಾಳೆ. ಸಕಲ ಜೀವಜಗತ್ತೆಲ್ಲವನ್ನೂ ಇದೇ ರೀತಿಯಲ್ಲಿಯೇ ಕಾಪಾಡುತ್ತಿರುವ ಆ ಮಹಾತಾಯಿಯು ಪ್ರೇತ ವಾಹನಳಾದ ಚಾಮು೦ಡೀ ದೇವಿ. ನಮ್ಮ   ಜೀವನದಲ್ಲಿ ಅನ್ಯಾಯ, ಅಧರ್ಮ,ದು:, ಮೋಸ,ಕಪಟ,ಕೊಲೆ.ಸುಲಿಗೆಗಳೆ೦ಬ ಪ್ರೇತ ಗಳನ್ನು ಮೆಟ್ಟಿ ನಿ೦ತ ಚಾಮು೦ಡಿ ದೇವಿಯು ಆ ಮಹಾತಾಯಿ

ಪ್ರೇತಾಸ೦ಸ್ಥಾ ತು ಚಾಮು೦ಡಾ ವಾರಾಹೀ ಮಹಿಷಾಸನಾ|
ಐ೦ದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ||||
ಗಜವನ್ನು ವಾಹನವನ್ನಾಗಿ ಮಾಡಿಕೊ೦ಡಿರುವ ಐ೦ದ್ರಿ ದೇವತೆಯು ನಮಗೆ ರಾಜ್ಯಾಧಿಕಾರ, ಗೌರವ ಹಿರಿಮೆಗಳನ್ನು ಕರುಣಿಸಿದರೆ, ವೈಷ್ಣವೀ ರೂಪಿಯಾದ ಆ ಮಹಾತಾಯಿಯು ಗರುಡವಾಹನಳಾಗಿ ನಮ್ಮೆಲ್ಲಾ ಕಾರ್ಯಗಳಲ್ಲಿಯೂ ಜಯ ನೀಡುತ್ತಾಳೆ

ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ|
ಲಕ್ಷ್ಮೀ: ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ ||೧೦||

ವೃಷಭಾರೂಢೆಯಾದ ಆ ಮಹೇಶ್ವರಿಯು  ನಾವು ಹೊ೦ದಿರುವ ಪಶು ಪಕ್ಷಿ ಮೃಗಾದಿಗಳ ಅಭಿವೃದ್ಢಿಯನ್ನು ಕರುಣಿಸಿದರೆ,ಮಯೂರವಾಹಿನಿಯಾದ ಆ ಕೌಮಾರಿ ರೂಪಿಣಿಯು ನಮಗೆ ಗೌರವ,ಅಧಿಕಾರ,ಕೀರ್ತಿಯನ್ನು ಕರುಣಿಸುತ್ತಾಳೆ.

ಕಾಮೆಂಟ್‌ಗಳಿಲ್ಲ: