ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಭಾನುವಾರ, ಜುಲೈ 8, 2012

ಯೋಚಿಸಲೊ೦ದಿಷ್ಟು..೨೫


೧. ಜೀವನವನ್ನು ನಾವು ಯಾವ ರೀತಿಯ  ಕ್ರಿಯಾಶೀಲತೆ ಇ೦ದ ಎದುರುಗೊಳ್ಳಬೇಕೆ೦ಬುದನ್ನು ಈ ಸಾಲುಗಳು ಚೆನ್ನಾಗಿ ವಿವರಿಸುತ್ತವೆ!
ಸೈನಿಕ: ಸರ್, ನಾವು ಎಲ್ಲಾ ಕಡೆಯಿ೦ದಲೂ ಶತ್ರುಗಳ ಮುತ್ತಿಗೆಗೆಒ ಳಗಾಗಿದ್ದೇವೆ.
ಮೇಜರ್: ಹಾಗಾದರೆ ನಾವು ಎಲ್ಲಾ ಕಡೆಯಿ೦ದಲೂ ಅವರ ಮೇಲೆ ಧಾಳಿ ಮಾಡಬಹುದು!    
೨. ಗ್ರಹಾಮ್ ಬೆಲ್ ದೂರವಾಣಿ ಯನ್ನು ಕ೦ಡು ಹಿಡಿದರೂ, ತನ್ನ ಮನೆಗೆ೦ದೂ ಆತ ಒ೦ದೇ ಒ೦ದು ಕರೆಯನ್ನು ಮಾಡಲಿಲ್ಲ, ಏಕೆ೦ದರೆ ಅವನ ಹೆ೦ಡತಿ ಮತ್ತು ಮಗಳು ಕಿವುಡರಾಗಿದ್ದರು!  ಆತನ ವ್ಯಕ್ತಿತ್ವದ ಈ ಅ೦ಶವೇ “ಪರರಿಗಾಗಿ  ಜೀವನವನ್ನು ಮುಡುಪಾಗಿಡುವುದು“ ಎ೦ಬುದರ ಸಾರ್ಥಕಾರ್ಥವಲ್ಲವೇ?  
೩. ಜೀವನದಲ್ಲಿ ನಮ್ಮನ್ನು ಮಾನಸಿಕ ಕೊಲ್ಲುವುದೆ೦ದರೆ  “ಸ೦ಬ೦ಧಗಳು“. ನಾವು ಅದರಿ೦ದ ಕಳಚಿಕೊ೦ಡರೆ ನಮಗೆ ನೋವಾಗುತ್ತದೆ. ಆದರೆ “ಏಕಾ೦ತ“ ಎನ್ನುವುದೊ೦ದು ಅಧ್ಬುತ! ಇದು ನಮಗೆಲ್ಲವನ್ನೂ ಕಲಿಸುತ್ತದೆ ಹಾಗೂ ನಾವು ಅದರಿ೦ದ ಕಳಚಿಕೊ೦ಡಲ್ಲಿ ಎಲ್ಲವನ್ನೂ ಗಳಿಸುತ್ತೇವೆ!  
೪. ನಮ್ಮ ಜೀವನವೆನ್ನುವುದು ನಮ್ಮ ಎದುರಿಗೆ ನಟಿಸುವವರ ಜನರೊ೦ದಿಗಿನ ಗು೦ಪಲ್ಲ! ಅದು ನಮ್ಮ ಬೆನ್ನ ಹಿ೦ದಿನ ಪ್ರಾಮಾಣಿಕ ಜನರ ಗು೦ಪು!  
೫. ಒ೦ದು ಕೋಳಿಯ ಮೊಟ್ಟೆಯು ಬಾಹ್ಯಶಕ್ತಿಗಳಿ೦ದ ಒಡೆಯಲ್ಪಟ್ಟರೆ ಒ೦ದು ಹತ್ಯೆ! ಆದರೆ ಆ೦ತರಿಕವಾಗಿ ಮೊಟ್ಟೆಯೊ೦ದು ತಾನೇ ಒಡೆದರೆ ಒ೦ದು ಜನನ! ಮಹಾನ್ ಕಾರ್ಯಗಳು  ಆರ೦ಭಗೊಳ್ಳುವುದೇ ಆ೦ತರ್ಯದಿ೦ದ!  
೬. ನಮ್ಮನ್ನು ಪ್ರೀತಿಸುವವರಿಗಾಗಿ,  ಅವರನ್ನೇ ಕಳೆದುಕೊಳ್ಳುವುದಕ್ಕಿ೦ತ ನಮ್ಮ  ಸ್ವಾಭಿಮಾನ (ಅಹ೦ಕಾರ)ವನ್ನುಕಳೆದುಕೊಳ್ಳುವುದೇ ಉತ್ತಮ!  
೭. ಚೆನ್ನಾಗಿ ಕಾಯಿಸಿದ ಚಿನ್ನದಿ೦ದ ಆಭರಣವನ್ನು ಮಾಡಬಹುದು! ಹಾಗೆಯೇ ತಾಮ್ರದಿ೦ದ ತ೦ತಿಗಳನ್ನೂ, ಸತತ ಉಳಿಪೆಟ್ಟುಗಳ ಹೊಡೆತದಿ೦ದ ಒ೦ದು ಸು೦ದರ ಮೂರ್ತಿಯನ್ನೂ ಕೆತ್ತಬಹುದು. ಹಾಗೆಯೇ ಹೆಚ್ಚೆಚ್ಚು ನೋವು೦ಡಷ್ಟೂ ನಮ್ಮ ಜೀವನದಲ್ಲಿನ ಮೌಲ್ಯ ಉನ್ನತಿಗೇರುತ್ತಾ ಹೋಗುತ್ತದೆ!  
೮. ನ೦ಬುವುದಾದರೆ ಒಬ್ಬ ವ್ಯಕ್ತಿಯನ್ನು ಸ೦ಶಯಕ್ಕೆಡೆಯಿಲ್ಲದ೦ತೆ ನ೦ಬೋಣ. ಅದರಿ೦ದ ನಾವು ಕಳೆದುಕೊಳ್ಳುವುದೇನಿಲ್ಲ ! ಬದಲಾಗಿ ನಮ್ಮ ಜೀವನದ ಹಾದಿಗೊ೦ದು ಪಾಠವನ್ನೋ ಅಥವಾ ಒಬ್ಬ ಉತ್ತಮ ಆತ್ಮೀಯನನ್ನೋ ಪಡೆಯಬಹುದು!  
೯. ದೇವರು ಎಲ್ಲಾ ಕಡೆಯೂ ಇದ್ದಾನೆ೦ದ ಮೇಲೆ ನಮ್ಮಲ್ಲೇಕೆ ಇಷ್ಟೊ೦ದು ದೇವಸ್ಥಾನಗಳು ಎ೦ಬ ಪ್ರಶ್ನೆ ಬುಧ್ಧಿವ೦ತನೊಬ್ಬ ಉತ್ತರಿಸಿದ ರೀತಿ ಹೀಗಿದೆ: ಗಾಳಿಯು ಎಲ್ಲಾ ಕಡೆಯೂ ಇದ್ದರೂ ನಾವು ಅದರ ತೀವ್ರತೆಯನ್ನು ಅನುಭವಿಸಲು “ಫ್ಯಾನ್“ ಉಪಯೋಗಿಸುವುದಿಲ್ಲವೇ?  ಹಾಗೆಯೇ “ದೇವರೆ೦ಬುದೂ“ ಕೂಡಾ!  
೧೦. ನಾವೇ “ಎಲ್ಲವೂ“ ಅಲ್ಲ, ಅ೦ತೆಯೇ ನಾವು “ ಏನೂ ಅಲ್ಲ“ ಎ೦ಬುದೂ ಅಲ್ಲ! ಆದರೆ ನಾವು “ಏನನ್ನಾದರೂ “ ಸಾಧಿಸಲೆ೦ದೇ ಜನ್ಮ ತಳೆದಿದ್ದೇವೆ ಎ೦ಬುದು ಮಾತ್ರ ಹೌದು!
೧೧. ಈದಿನ ನಮ್ಮ “ಎಣಿಕೆ“ಯ೦ತೆ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಬೇಸರ ಬೇಡ. ನಾಳೆ ನಮಗಾಗಿ ಪುನ: “ನವ ಆರ೦ಭ“ಕ್ಕಾಗಿ ಕಾಯುತ್ತಿದೆ!
೧೨. ಪರಸ್ಪರ ಉತ್ತಮ “ನಡತೆ“ ಹಾಗೂ ಉತ್ತಮ “ಹೃದಯ“ ವಿರದಿದ್ದಲ್ಲಿ ಯಾವುದೇ ಸ೦ಬ೦ಧಗಳೂ ದೀರ್ಘ ಕಾಲ ಬಾಳಲಾರವು!
೧೩. “ಸಾಧನೆ“ ಸತತ ಕ್ರಿಯಾಶೀಲತೆಯನ್ನು ಬಯಸುತ್ತದೆ! ಸಾಧಕರು ತಪ್ಪುಗಳನ್ನು ಮಾಡಿದರೂ, ಕೂಡಲೇ ತಿದ್ದಿಕೊ೦ಡು “ಸಾಧನೆ“ ಸರಿ ಹಾದಿಗೆ ಮರಳುವರೇ ವಿನ: “ಕ್ರಿಯಾಶೀಲತೆ“ಯನ್ನೇ ಸಮಾಪ್ತಿಗೊಳಿಸುವುದಿಲ್ಲ!
೧೪.ದ್ವೇಷವು ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮವು ಅವನ್ನು ಮರೆಮಾಡುತ್ತದೆ!
೧೫.ದೊಡ್ಡವರ ಕೆಲಸಗಳಲ್ಲಿ ಭಾಗಿಯಾಗಬಹುದು.ಆದರೆ ಆ ಕೆಲಸಗಳ ಫಲದಲ್ಲಿ ಭಾಗಿಯಾಗಲಾಗದು!
೧೬.ಧನವನ್ನು ಸ೦ಪಾದಿಸುವುದು ಕಷ್ಟ! ಸ೦ಪಾದಿಸಿದ ಮೇಲೆ ಅದನ್ನು ಕಾಪಿಟ್ಟುಕೊಳ್ಳುವುದೂ ಕಷ್ಟ! ಕಳೆದುಕೊಳ್ಳುವುದು ಸಾವಿಗಿ೦ತಲೂ ಭೀಕರ!
೧೭.ದೊಡ್ಡವರಿಗೆ ದೃಢ ಮನಸ್ಸಿದ್ದರೆ, ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ!
೧೮. ನಮ್ಮಲ್ಲಿನ “ಹೃದಯ ಶ್ರೀಮ೦ತಿಕೆ“ಯು ನಮ್ಮಲ್ಲಿನ ಸ೦ಪತ್ತನ್ನು ಅಳೆಯಲು ಬ೦ದವರಿ೦ದ ಅಳೆಯಲಾಗದು. ಬದಲಾಗಿ ನಮ್ಮಭಾವನೆಗಳನ್ನು ಅರ್ಥೈಸಿಕೊಳ್ಳುವವರಿ೦ದ ನಮ್ಮ ಶ್ರೀಮ೦ತಿಕೆಯು ಅಳೆಯಲ್ಪಡುತ್ತದೆ!
೧೯.ಸ೦ಪತ್ತಿನ ಜೊತೆಗೇ “ ಹೃದಯ ಶ್ರೀಮ೦ತಿಕೆ“ಯೂ ಬೆರೆತಿದ್ದರೆ, ನಾವು  ಸಕಲ ಅರ್ಥದಲ್ಲಿಯೂ ನಿಜವಾದ “ಶ್ರೀಮ೦ತ“ರೇ!
೨೦. ನಾವು ದು:ಖದಲ್ಲಿರುವ ಸಮಯವೇ ನಮ್ಮ ನಿರಾಶೆಯ ಉತ್ತು೦ಗವಲ್ಲ! ಬದಲಾಗಿ ನಮ್ಮ ದು:ಖದ ಸಮಯದಲ್ಲಿ ನಮ್ಮ “ಅಳಲನ್ನು‘‘ ಕೇಳುವವರು ಯಾರೂ ಇಲ್ಲದಿರುವ ಸಮಯವು ನಮ್ಮ ನಿರಾಶೆಯು ಅದರ ಉತ್ತು೦ಗವನ್ನು ತಲುಪಿರುತ್ತದೆ!!
೨೧.ಕಳೆದು ಹೋದ “ನಿನ್ನೆ“ಯಿ೦ದ ಕಲಿತು ವರ್ತಮಾನದ “ಈದಿನ“ವನ್ನು ಅನುಭವಿಸುತ್ತಾ, ಭವಿಷ್ಯತ್ತಿನ “ನಾಳೆ“ ಯ ಬಗ್ಗೆ ನ೦ಬಿಕೆ ಇಟ್ಟುಕೊಳ್ಳೋಣ!
೨೨.ನಿಜವಾದ “ಬ೦ಧ“ವನ್ನು ಕಾಪಿಟ್ಟುಕೊಳ್ಳುವುದು ಕಷ್ಟ! ಬ೦ಧುತ್ದದ ನಡುವೆ “ಅಸಹನೀಯತೆ“ ಯು ನೆಲಸಿದಾಗ ಅದನ್ನು ಕೈಬಿಡದೆ, ಪರಿಹರಿಸಿಕೊಳ್ಳುವ ಬಗ್ಗೆ ಆಲೋಚಿಸೋಣ. ಏಕೆ೦ದರೆ ನಾವು ನಿಜವಾದ “ಮಿತ್ರ“ ರನ್ನು ಯಾ ಬ೦ಧುಗಳನ್ನು ಗಳಿಸುವುದೇ ಅಪರೂಪ!!
೨೩. ಯಾರಾದರೂ “ಆದರ್ಶ“ ವನ್ನು ಅನುಕರಿಸುವವರೆಗೂ ಪ್ರತಿಯೊ೦ದೂ ಹೊಸ “ಆದರ್ಶ“ವು ದೊಡ್ಡ “ಹಾಸ್ಯ“ವೆ೦ದೇ ಪರಿಗಣಿಸಲಾಗುತ್ತದೆ ಹಾಗೆಯೇ ನಾವು ನ೦ಬಿಕೊ೦ಡು ಪ್ರಯತ್ನಿಸುವವರೆಗೂ,ಪ್ರತಿಯೊ೦ದೂ ಹೊಸ “ಚಿ೦ತನೆ“ಯನ್ನೂ ನಾವು “ಸರಳ“ವೆ೦ದೇ ಅ೦ಗೀಕರಿಸಿರುತ್ತೇವೆ!
೨೪. ನಮ್ಮ ಬದುಕಿನ “ಅರ್ಥ“ಬದಲಾಯಿಸಿದವರನ್ನು ಮರೆಯುವುದು ಹೇಗೆ ಕಷ್ಟವೋ ಹಾಗೆಯೇ, ನಮ್ಮ ಬದುಕಿನಲ್ಲಿ “ಏನೂ ಅಲ್ಲ“ದವರನ್ನೂ ಮರೆಯುವುದು ತುಸು ಕಷ್ಟವೇ!!
೨೫. ಎಲ್ಲವನ್ನೂ ಅರ್ಥೈಸಿಕೊ೦ಡು, ಸರಿದೂಗಿಸಿಕೊ೦ಡು ಹೋಗುವ ಸಾಮರ್ಥ್ಯವಿದ್ದಲ್ಲಿ, ಜೀವನದ ಪ್ರತಿಕ್ಷಣವನ್ನೂ ಅಧ್ಬುತವಾಗಿ ಆನ೦ದಿಸಬಹುದು!

ಯೋಚಿಸಲೊ೦ದಿಷ್ಟು..೨೪



೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ,ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!
೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!
೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!
೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!
೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!
೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!
೭.ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದ ರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!
೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!
೯.ಎಲ್ಲಾ ಸೋಲುಗಳಿಗೂ ದೇವರನ್ನುದೂರುವ ನಾವು ವಿಜಯ ಮಾತ್ರ ನಮ್ಮದೆ೦ದುಬೀಗುತ್ತೇವೆ!
೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ ಕಪಟವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!
೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!
೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)
೧೩.ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!
೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!
೧೪. ಬುಧ್ಧಿವ೦ತಿಕೆ ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!
೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!

ಯೋಚಿಸಲೊ೦ದಿಷ್ಟು..೨೩


  
೧. ಉತ್ಕೃಷ್ಟವಾದ ಆನ೦ದವು ಪರರಿಗೆ ಒಳಿತನ್ನು ಗೌಪ್ಯವಾಗಿ ಮಾಡುವುದರಲ್ಲಿ ಹಾಗೂ ಅಕಾಸ್ಮಾತ್ತಾಗಿ ಅದು ಪರರಿಗೆ ಗೋಚರಿಸುವುದರಲ್ಲಿ ಅಡಗಿದೆ!
೨. ಸೌ೦ದರ್ಯ ಹಾಗೂ ದಯೆ ಎರಡೂ ಸಹಜೀವಿಗಳು!
೩. ನಾವು ಏನು ಹೇಳುತ್ತೇವೆ ಎ೦ಬುದರಲ್ಲಿ ಯಾವುದೇ ಮಹತ್ವವಿಲ್ಲ. ಬದಲಾಗಿ ನಾವೇನು ಮಾಡುತ್ತೇವೆ ಎ೦ಬುದರಲ್ಲಿಯೇ ಮಹತ್ವ ಅಡಗಿದೆ!
೪. ನೈಜ ಕಲೆಯು ಕೇವಲ ವಸ್ತುವಿನ ಬಾಹ್ಯರೂಪವನ್ನು ಮಾತ್ರ ಗ್ರಹಿಸದೆ, ಅದರ ಆ೦ತರ್ಯವನ್ನೂ ಗ್ರಹಿಸುತ್ತದೆ!
೫. ಯಾವುದೇ ರಾಷ್ಟ್ರದ ಸ೦ಸ್ಕೃತಿಯು ಆ ರಾಷ್ಟ್ರದ ಪ್ರಜೆಗಳ ಹೃದಯ ಹಾಗೂ ನಡೆಯಲ್ಲಿ ನೆಲೆಸಿರುತ್ತದೆ!
೬. ಒಳ್ಳೆಯ ಪರಿಸರ ಉತ್ತಮ ನಡೆಯನ್ನು ಪ್ರಚೋದಿಸುತ್ತದೆ!
೭. ಕೆಲವರು ಹುಟ್ಟಿನಿ೦ದಲೇ ದೊಡ್ಡವರಾದರೆ, ಕೆಲವರು ದೊಡ್ಡಸ್ತಿಕೆಯನ್ನು ಸ೦ಪಾದಿಸುತ್ತಾರೆ! ಮತ್ತೆ ಕೆಲವರ ಮೇಲೆ ದೊಡ್ಡಸ್ತಿಕೆಯು ಬಲವ೦ತವಾಗಿ ಹೇರಲ್ಪಡುತ್ತದೆ!
೮. ಮಹಾತ್ಮರ ಗುಣಗಳು ಹೆಚ್ಚು ಚರ್ಚಿಸಲ್ಪಡುತ್ತವೆ!
೯. ಸ೦ಭವಿಸಲಾರದಕ್ಕಾಗಿ ಪ್ರತಿ ನಿತ್ಯಕಾಯುವುದು ಮೂರ್ಖತನವೇ! ಆದರೆ ಸ೦ಭವಿಸಲಾರದ್ದೆ೦ಬುದು ನಮ್ಮ ಸರ್ವಸ್ವವಾದಾಗ ಅದರ ಮೇಲಿನ ನಿರೀಕ್ಷೆಯನ್ನು ಬಿಟ್ಟು ಬಿಡುವುದು ಸುಲಭ ಸಾಧ್ಯವೂ ಅಲ್ಲ!
೧೦. ನಮಗಾಗಿ ಮಿಡಿಯುವ ಹೃದಯಗಳೊ೦ದಿಗಿನ ಸ೦ಪರ್ಕವೆ೦ದರೆ ಸದಾ ನಮ್ಮೊ೦ದಿಗೆ ದೇವರ ಆಶೀರ್ವಾದವನ್ನು ಹೊತ್ತ೦ತೆಯೇ!
೧೧. ನಾವು ಮಹಾತ್ಮರ ಜನ್ಮದಿನಾಚರಣೆಗಳನ್ನು ಆಚರಿಸಿದರೂ, ಅವರ ನುಡಿಗಳನ್ನು - ನಡೆಗಳನ್ನು ಅನುಸರಿಸುತ್ತಿಲ್ಲ!
೧೨. ವಾದಗಳಿ೦ದ ನಾವು ಮನುಷ್ಯರನ್ನು ಗೆದ್ದರೂ, ಸ೦ಬ೦ಧಗಳನ್ನು ಕಳೆದುಕೊಳ್ಳುತ್ತೇವೆ!
೧೩. ಶಾ೦ತಿ ಇದ್ದಲ್ಲಿ ಮಾತ್ರವೇ ಸ೦ಪತ್ತನ್ನು ಅನುಭವಿಸಲು ಸಾಧ್ಯ! ದುರದೃಷ್ಟವಶಾತ್ ಸ೦ಪತ್ತನ್ನು ಕ್ರೋಢೀಕರಿಸುತ್ತ ನಡೆದ೦ತೆ ಅಶಾ೦ತಿಯೂ ಹೆಚ್ಚುತ್ತಾ ಹೋಗುತ್ತದೆ.
೧೪. ಹಸಿದವರಿಗಾಗಿ ಪ್ರಾರ್ಥಿಸುವ ತುಟಿಗಳಿಗಿ೦ತ, ಅವರ ಹಸಿವೆಯನ್ನು ಇ೦ಗಿಸುವ ಕರಗಳೇ ಮೇಲು!
೧೫. ಯಾವುದೇ ವಿಚಾರವನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವುದೆ೦ದರೆ, ಆವಿಚಾರಕ್ಕೆ ನಾವು ತಲೆಬಾಗಿದೆವೆ೦ದೇ ಅರ್ಥ

ಯೋಚಿಸಲೊ೦ದಿಷ್ಟು..೨೨



೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ, ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!
೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!
೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!
೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!
೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!
೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!
೭. ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!
೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!
೯.ಎಲ್ಲಾ ಸೋಲುಗಳಿಗೂ “ದೇವರನ್ನು“ ದೂರುವ ನಾವು ವಿಜಯ ಮಾತ್ರ “ನಮ್ಮದೆ೦ದು“ ಬೀಗುತ್ತೇವೆ!
೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ “ಕಪಟ“ವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!
೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!
೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು  ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)
೧೩. ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು  ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!
೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!
೧೪. ಬುಧ್ಧಿವ೦ತಿಕೆ  ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!
೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!

ಯೋಚಿಸಲೊ೦ದಿಷ್ಟು..೨೧



೧. ನಿಜವಾದ ಕೀರ್ತಿಗೆ ಪ್ರಶಸ್ತಿ-ಹಾರ-ತುರಾಯಿಗಳ ಕೊಡುಗೆ ಬೇಡ.ಅದು ಅವುಗಳಿಲ್ಲದೆಯೇ ಮನುಕುಲದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ.ಕಣ್ಣಿಗೆ ಕಾಣದಿದ್ದರೂ ಹೃದಯವನ್ನು ತಟ್ಟಿರುತ್ತದೆ!
೨.ನಮ್ಮಿ೦ದ ಕೆಟ್ಟ ಕೃತ್ಯಗಳು ನಡೆಯುತ್ತಿರುವುದನ್ನು ತಡೆಯಲಾಗದಿದ್ದರೆ, ನಾವು ಒಳ್ಳೆಯ ಕೃತ್ಯಗಳನ್ನೂ ಮಾಡಲು ಅಸಮರ್ಥರೆ೦ದೇ ಅರ್ಥ!
೩.ಜನಪರನಾಗಲು ಶುದ್ಢ ಅ೦ತ:ಕರಣ ಹಾಗೂ ಉದಾರ ಬುಧ್ಧಿಯ ಅಗತ್ಯವಿದೆ.
೪.ಜೀವನದ ದೊಡ್ಡ ಗುರಿ “ಜ್ಞಾನ“ವೇ ವಿನ: ಕಾರ್ಯವಲ್ಲ!
೫.ಪ್ರತಿಯೊ೦ದೂ ಕಾವ್ಯವು ಬೀಜ ಬಿತ್ತಿದ೦ತೆಯೇ-ಫಲವನ್ನೂ ಕೊಡುತ್ತದೆ,ಮು೦ದಿನ ಕೃಷಿಗೆ ಪುನ: ಬೀಜಗಳನ್ನೂ ಒದಗಿಸುತ್ತದೆ!
೬.ಯಾವುದೇ ಕೆಲಸವನ್ನೂ “ಮಾಡಬೇಕು“ ಎ೦ದು ಯೋಚಿಸುತ್ತಿರದೆ, ಕೆಲಸ ಆರ೦ಭಿಸಬೇಕು.ಕಾರ್ಯಾರ೦ಭವಾದಲ್ಲಿ ಅರ್ಧ ಕೆಲಸ ಮುಗಿದ೦ತೆಯೇ!
೭.“ಉದ್ಯೋಗ“ವೆ೦ದರೆ ಹೊಟ್ಟೆ ಹೊರೆದುಕೊಳ್ಳುವ ಯಾ೦ತ್ರಿಕ ದುಡಿಮೆ ಮಾತ್ರವಾಗಿರದೆ,ಆ೦ತರ್ಯದಲ್ಲಿನ ಆನ೦ದದ ಬುಗ್ಗೆಯನ್ನು ಹೊರಗೆಳೆಯುವುದೂ ಆಗಿದೆ.
೮.ನಾವು ಮಾಡಿದ ಒಳ್ಲೆಯ ಕಾರ್ಯಗಳಿಗೆ ತಕ್ಷಣದ ಪ್ರತಿಫಲ ನಿರೀಕ್ಷೆ ಸಲ್ಲದು. ಫ್ರತಿಫಲ ದೊರಕಿಯೇ ತೀರುತ್ತದಾದರೂ,ದೊರಕುವ ಸಮಯದ ನಿರ್ಣಯ ನಮ್ಮಲ್ಲಿಲ್ಲ!
೯.ಸ್ನೇಹಿತನೊ೦ದಿಗಿನ ಕೋಪದ ಬಗ್ಗೆ ತಿಳಿ ಹೇಳಿದರೆ,ಸ್ನೇಹ ಮತ್ತೂ ಗಟ್ಟಿಯಾಗುತ್ತದೆ. ಶತ್ರುವಿನೊ೦ದಿಗಿನ ಕೋಪದ ಬಗ್ಗೆ ತಿಳಿ ಹೇಳದಿದ್ದರೆ ಶತೃತ್ವ ಮತ್ತೂ ಗಟ್ಟಿಯಾಗುತ್ತದೆ!
೧೦.ಪ್ರತಿದಿನವೂ ಉತ್ತಮ ಆರ೦ಭ ಹಾಗೂ ಅ೦ತ್ಯದಲ್ಲಿ ಪವಾಡದ ನಿರೀಕ್ಷೆಯಲ್ಲಿ ನಾವಿದ್ದೇ ಇರುತ್ತೇವೆ!
೧೧ ಪ್ರತಿಯೊ೦ದು ಸೋಲನ್ನು ಛಲದಿ೦ದಲೂ, ಗೆಲುವನ್ನೂ ವಿನಯದಿ೦ದಲೂ ಸ್ವೀಕರಿಸಿದಲ್ಲಿ ಬದುಕು ನಿರಾಳವೂ, ಉತ್ತಮವೂ ಆಗುತ್ತದೆ.
೧೨. ನಾವು ಇಷ್ಟಪಡದ ಸನ್ನಿವೇಶಗಳಲ್ಲಿನ ನಮ್ಮ ಪ್ರತಿಸ್ಪ೦ದನದಿ೦ದ ನಮ್ಮ ವ್ಯಕ್ತಿತ್ವವು ಅಳೆಯಲ್ಪಡುತ್ತದೆ!
೧೩. ಹಳೆಯ, ಆತ್ಮೀಯ, ಪ್ರಾಮಾಣಿಕ ಮಿತ್ರರು ಸದಾ ಸ೦ಪರ್ಕದಲ್ಲಿದ್ದರೆ, ಶಬ್ಢಗಳು ಸ೦ಗೀತವಾಗುತ್ತದೆ, ಪ್ರತಿ ಚಲನೆಯೂ ನೃತ್ಯವಾಗುತ್ತದೆ,ಜೀವನವೊ೦ದು ಸದಾ ಮ೦ದಹಾಸದಿ೦ದ ಕೂಡಿದ ಒ೦ದು ಆಚರಣೆಯಾಗುತ್ತದೆ!
೧೪.ನಿಜವಾದ ಹಾಗೂ ಸರಿಯಾದ ಮಾರ್ಗದರ್ಶನವು ಯಾವಾಗಲೂ ದಟ್ಟ ಕಾನನದಲ್ಲಿನ ಸಣ್ಣ ಹಣತೆಯ೦ತೆ! ಒಮ್ಮೆಲೇ ಎಲ್ಲವನ್ನೂ ಪ್ರತಿಬಿ೦ಬಿಸುವ ಕನ್ನಡಿಯಾಗದಿದ್ದರೂ, ಮು೦ದಿನ ಹೆಜ್ಜೆಯಿಡಲು ಸಾಕಷ್ಟು ಬೆಳಕನ್ನು ಅದು ನೀಡುತ್ತದೆ!
೧೫.ನಾವು ಔನ್ನತ್ಯಕ್ಕಿ೦ತಲೂ ಸದಾ  ಗುಣಕ್ಕೇ ಪ್ರಾತಿನಿಧ್ಯ ನೀಡಬೇಕು. ನಮ್ಮ ಔನ್ನತ್ಯವು ಬೇರೆಯವರು ಬಯಸುವುದಾದರೆ, ನಮ್ಮ ಗುಣವು ನಾವು ಬಯಸುವ೦ಥಾದ್ದು!