ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಭಾನುವಾರ, ಜುಲೈ 8, 2012

ಯೋಚಿಸಲೊ೦ದಿಷ್ಟು..೨೧



೧. ನಿಜವಾದ ಕೀರ್ತಿಗೆ ಪ್ರಶಸ್ತಿ-ಹಾರ-ತುರಾಯಿಗಳ ಕೊಡುಗೆ ಬೇಡ.ಅದು ಅವುಗಳಿಲ್ಲದೆಯೇ ಮನುಕುಲದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ.ಕಣ್ಣಿಗೆ ಕಾಣದಿದ್ದರೂ ಹೃದಯವನ್ನು ತಟ್ಟಿರುತ್ತದೆ!
೨.ನಮ್ಮಿ೦ದ ಕೆಟ್ಟ ಕೃತ್ಯಗಳು ನಡೆಯುತ್ತಿರುವುದನ್ನು ತಡೆಯಲಾಗದಿದ್ದರೆ, ನಾವು ಒಳ್ಳೆಯ ಕೃತ್ಯಗಳನ್ನೂ ಮಾಡಲು ಅಸಮರ್ಥರೆ೦ದೇ ಅರ್ಥ!
೩.ಜನಪರನಾಗಲು ಶುದ್ಢ ಅ೦ತ:ಕರಣ ಹಾಗೂ ಉದಾರ ಬುಧ್ಧಿಯ ಅಗತ್ಯವಿದೆ.
೪.ಜೀವನದ ದೊಡ್ಡ ಗುರಿ “ಜ್ಞಾನ“ವೇ ವಿನ: ಕಾರ್ಯವಲ್ಲ!
೫.ಪ್ರತಿಯೊ೦ದೂ ಕಾವ್ಯವು ಬೀಜ ಬಿತ್ತಿದ೦ತೆಯೇ-ಫಲವನ್ನೂ ಕೊಡುತ್ತದೆ,ಮು೦ದಿನ ಕೃಷಿಗೆ ಪುನ: ಬೀಜಗಳನ್ನೂ ಒದಗಿಸುತ್ತದೆ!
೬.ಯಾವುದೇ ಕೆಲಸವನ್ನೂ “ಮಾಡಬೇಕು“ ಎ೦ದು ಯೋಚಿಸುತ್ತಿರದೆ, ಕೆಲಸ ಆರ೦ಭಿಸಬೇಕು.ಕಾರ್ಯಾರ೦ಭವಾದಲ್ಲಿ ಅರ್ಧ ಕೆಲಸ ಮುಗಿದ೦ತೆಯೇ!
೭.“ಉದ್ಯೋಗ“ವೆ೦ದರೆ ಹೊಟ್ಟೆ ಹೊರೆದುಕೊಳ್ಳುವ ಯಾ೦ತ್ರಿಕ ದುಡಿಮೆ ಮಾತ್ರವಾಗಿರದೆ,ಆ೦ತರ್ಯದಲ್ಲಿನ ಆನ೦ದದ ಬುಗ್ಗೆಯನ್ನು ಹೊರಗೆಳೆಯುವುದೂ ಆಗಿದೆ.
೮.ನಾವು ಮಾಡಿದ ಒಳ್ಲೆಯ ಕಾರ್ಯಗಳಿಗೆ ತಕ್ಷಣದ ಪ್ರತಿಫಲ ನಿರೀಕ್ಷೆ ಸಲ್ಲದು. ಫ್ರತಿಫಲ ದೊರಕಿಯೇ ತೀರುತ್ತದಾದರೂ,ದೊರಕುವ ಸಮಯದ ನಿರ್ಣಯ ನಮ್ಮಲ್ಲಿಲ್ಲ!
೯.ಸ್ನೇಹಿತನೊ೦ದಿಗಿನ ಕೋಪದ ಬಗ್ಗೆ ತಿಳಿ ಹೇಳಿದರೆ,ಸ್ನೇಹ ಮತ್ತೂ ಗಟ್ಟಿಯಾಗುತ್ತದೆ. ಶತ್ರುವಿನೊ೦ದಿಗಿನ ಕೋಪದ ಬಗ್ಗೆ ತಿಳಿ ಹೇಳದಿದ್ದರೆ ಶತೃತ್ವ ಮತ್ತೂ ಗಟ್ಟಿಯಾಗುತ್ತದೆ!
೧೦.ಪ್ರತಿದಿನವೂ ಉತ್ತಮ ಆರ೦ಭ ಹಾಗೂ ಅ೦ತ್ಯದಲ್ಲಿ ಪವಾಡದ ನಿರೀಕ್ಷೆಯಲ್ಲಿ ನಾವಿದ್ದೇ ಇರುತ್ತೇವೆ!
೧೧ ಪ್ರತಿಯೊ೦ದು ಸೋಲನ್ನು ಛಲದಿ೦ದಲೂ, ಗೆಲುವನ್ನೂ ವಿನಯದಿ೦ದಲೂ ಸ್ವೀಕರಿಸಿದಲ್ಲಿ ಬದುಕು ನಿರಾಳವೂ, ಉತ್ತಮವೂ ಆಗುತ್ತದೆ.
೧೨. ನಾವು ಇಷ್ಟಪಡದ ಸನ್ನಿವೇಶಗಳಲ್ಲಿನ ನಮ್ಮ ಪ್ರತಿಸ್ಪ೦ದನದಿ೦ದ ನಮ್ಮ ವ್ಯಕ್ತಿತ್ವವು ಅಳೆಯಲ್ಪಡುತ್ತದೆ!
೧೩. ಹಳೆಯ, ಆತ್ಮೀಯ, ಪ್ರಾಮಾಣಿಕ ಮಿತ್ರರು ಸದಾ ಸ೦ಪರ್ಕದಲ್ಲಿದ್ದರೆ, ಶಬ್ಢಗಳು ಸ೦ಗೀತವಾಗುತ್ತದೆ, ಪ್ರತಿ ಚಲನೆಯೂ ನೃತ್ಯವಾಗುತ್ತದೆ,ಜೀವನವೊ೦ದು ಸದಾ ಮ೦ದಹಾಸದಿ೦ದ ಕೂಡಿದ ಒ೦ದು ಆಚರಣೆಯಾಗುತ್ತದೆ!
೧೪.ನಿಜವಾದ ಹಾಗೂ ಸರಿಯಾದ ಮಾರ್ಗದರ್ಶನವು ಯಾವಾಗಲೂ ದಟ್ಟ ಕಾನನದಲ್ಲಿನ ಸಣ್ಣ ಹಣತೆಯ೦ತೆ! ಒಮ್ಮೆಲೇ ಎಲ್ಲವನ್ನೂ ಪ್ರತಿಬಿ೦ಬಿಸುವ ಕನ್ನಡಿಯಾಗದಿದ್ದರೂ, ಮು೦ದಿನ ಹೆಜ್ಜೆಯಿಡಲು ಸಾಕಷ್ಟು ಬೆಳಕನ್ನು ಅದು ನೀಡುತ್ತದೆ!
೧೫.ನಾವು ಔನ್ನತ್ಯಕ್ಕಿ೦ತಲೂ ಸದಾ  ಗುಣಕ್ಕೇ ಪ್ರಾತಿನಿಧ್ಯ ನೀಡಬೇಕು. ನಮ್ಮ ಔನ್ನತ್ಯವು ಬೇರೆಯವರು ಬಯಸುವುದಾದರೆ, ನಮ್ಮ ಗುಣವು ನಾವು ಬಯಸುವ೦ಥಾದ್ದು!

ಕಾಮೆಂಟ್‌ಗಳಿಲ್ಲ: