ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಸೋಮವಾರ, ನವೆಂಬರ್ 15, 2010

ಪರಾಕು ಮಾಡದೆ..

ಕೃತಿ:ಪುರಂದರದಾಸರು

ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಂಗಳ ಕ್ಷಮಿಸೋ II ಪ II

ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ

ನರರೊಳಗೇ ಪಾಮರನೋ ನಾನೂ
ನರರೊಳಗೇ ಪಾಮರನೋ ನಾನಿಹ
ಪರಕೆ ಸಾಧನ ವರಿಯೇ..
ಶರಣು ಹೊಕ್ಕೆನು ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆಯ ಎನಗಿತ್ತು
ಪರಾಕು ಮಾಡದೇ..

ಜಪವನರಿಯೆನು ತಪವನರಿಯೆನು
ಉಪವಾಸ ವೃತಗಳ ನಾನರಿಯೆ ಶ್ರೀಹರಿಯೆ
ಕೃಪಾವಲೋಕನದಿಂದ ಆ ಪಾಪಗಳನೆಲ್ಲ
ಅಪಾಹತವ ಮಾಡೋ ಅಪಾರಮಹಿಮನೆ
ಪರಾಕು ಮಾಡದೇ..

ಕರಿಯ ರಕ್ಷಿಸಿ ದ್ರೌಪದಿ ಮೊರೆ ಆಲಿಸಿ
ತರಳಗೊಲಿದು ನೀ ಪೊರೆದೆ ದಯದಿ
ಸಿರಿಯರಸನೇ ನಿನ್ನ ಸರಿಯಾರೊ ಕಾಣೆನು
ಕರುಣಿಸಯ್ಯ ಶ್ರೀ ಪುರಂದರ ವಿಠಲ

ಪರಾಕು ಮಾಡದೆ ಪರಾಂಬರಿಸಿ ಎನ್ನಪರಾಧಂಗಳ ಕ್ಷಮಿಸೋ
ಧರಾರಮಣ ಫಣಿ ಧರಾ ಧರಾರ್ಚಿತ
ಸುರಾಧಿಪತಿ ವಿಜಿ ಹೆರಾಧಿ ವಂದಿತ

ಕಾಮೆಂಟ್‌ಗಳಿಲ್ಲ: