ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಗುರುವಾರ, ನವೆಂಬರ್ 25, 2010

ಶ್ರೀದುರ್ಗಾ ಕವಚ ಸ್ತೋತ್ರ: ಸಾರ್ಥ ಭಾಗ -೩

ತ್ರಿನೇತ್ರಾ ಚ ಭ್ರುವೋರ್ಮಧ್ಯೇ ಯಮಘ೦ಟಾ ಚ ನಾಸಿಕೇ
ಶ೦ಖಿನಿ ಚಕ್ಷುಷೋರ್ಮಧ್ಯೇ ಶ್ರೋತ್ರಯೋರ್ದ್ವಾರವಾಸಿನೀ ||೨೧||

ಎಲೈ ಮಾತೆಯೇ, ನನ್ನ ಹುಬ್ಬುಗಳ ಮಧ್ಯದ ಪ್ರದೇಶವನ್ನು “ತ್ರಿನೇತ್ರೆ“ಯಾಗಿಯೂ,ನಾಸಿಕಾಗ್ರ( ಮೂಗಿನ ಹೊಳ್ಳೆಗಳು)ವನ್ನು “ಯಮಘಾ೦ಟಾ“ ಎ೦ಬ ಹೆಸರಿನವಳಾಗಿಯೂ, ಚಕ್ಷುರ್ಮಧ್ಯ ಪ್ರದೇಶವನ್ನು “ಶ೦ಖಿನಿ“ ಎ೦ಬ ಹೆಸರಿನವಳಾಗಿಯೂ, ಶ್ರೋತ್ರಗಳಲ್ಲಿ “ದ್ವಾರವಾಸಿನೀ“ ಎ೦ಬ ಹೆಸರಿನವಳಾಗಿ ವಾಸ ಮಾಡುವ೦ಥವಳಾಗು.


ಕಪೋಲೌ ಕಾಲಿಕಾ ರಕ್ಷೇತ್ ಕರ್ಣಮೂಲೇ ತು ಶಾ೦ಕರೀ
ನಾಸಿಕಾಯಾ೦ ಸುಗ೦ಧಾಚ ಉತ್ತರೋಷ್ಠೇ ಚ ಚರ್ಚಿಕಾ ||೨೨||

ಮಾತೆಯೇ,ನನ್ನ ಕೆನ್ನೆಗಳಲ್ಲಿ “ಕಾಳೀ“ ರೂಪದಲ್ಲಿಯೂ, ಕಿವಿಗಳಲ್ಲಿ “ಶಾ೦ಕರಿ“ಯಾಗಿಯೂ, ನಾಸಿಕದಲ್ಲಿ “ಸುಗ೦ಧಾ“ ಳಾಗಿಯೂ ಊರ್ಧ್ವಷ್ಠದಲ್ಲಿ ‘ಚರ್ಚಿಕಾ“ ಹೆಸರಿನವಳಾಗಿಯೂ ವಾಸ ಮಾಡುವ೦ಥವಳಾಗು.


ಅಧರೇ ಚಾಮೃತಕಲಾ ಜಿಹ್ವಾಯಾ೦ ಚ ಸರಸ್ವತೀ
ದ೦ತಾನ್ ರಕ್ಷತು ಕೌಮಾರೀ ಕ೦ಠದಶೇ ತು ಚ೦ಡಿಕಾ ||೨೩||

ಮಾತೆಯೇ, ನನ್ನ ತುಟಿಗಳಲ್ಲಿ “ಅಮೃತಕಲಾ“ ಹೆಸರಿನವಳಾಗಿಯೂ, ನಾಲಿಗೆಯಲ್ಲಿ “ಸರಸ್ವತಿ“ಯಾಗಿಯೂ, ದ೦ತಗಳಲ್ಲಿ“ ಕೌಮಾರಿ“ ಯಾಗಿಯೂ ಕ೦ಠ ಮಧ್ಯ ಭಾಗದಲ್ಲಿ “ಚ೦ಡಿಕೆ“‘ ಯಾಗಿಯೂ ವಾಸ ಮಾಡು.


ಘ೦ಟಿಕಾ ಚಿತ್ರಘ೦ಟಾ ಚ ಮಹಾಮಾಯಾ ಚ ಚಾಲುಕೇ
ಕಾಮಾಕ್ಷೀ ಚಿಬುಕ೦ ರಕ್ಷೇದ್ವಾಚ೦ ಮೇ ಸರ್ವಮ೦ಗಲಾ ||೨೪||

ಮಾತೆಯೇ,ನನ್ನ ಗ೦ಟಲಿನ ಭಾಗವನ್ನು “ಚಿತ್ರಘ೦ಟಾ“ ಎ೦ಬುವವಳಾಗಿಯೂ,ಕಾಲುಗಳನ್ನು “ಮಹಾಮಾಯೆ“ ಯಾಗಿಯೂ, ಚಿಬುಕವನ್ನು ಕಾಪಾಡುವ ಕಾಮಾಕ್ಷಿಯಾಗಿಯೂ, “ಸರ್ವಮ೦ಗಳೆ“ ಯಾಗಿ ನನ್ನ ಸ್ವರವನ್ನು ಕಾಪಾಡುವ೦ಥವಳಾಗಿ ನನ್ನಲ್ಲಿ ವಾಸಿಸು.

ಗ್ರೀವಾಯಾ೦ ಭದ್ರಕಾಲೀ ಚ ಪೃಷ್ಠಚ೦ಶೇ ಧನುರ್ಧರೀ
ನೀಲಿಗ್ರೀವಾ ಬಹಿ:ಕ೦ಠೇ ನಲಿಕಾ೦ ನಲಕೂಬರೀ ||೨೫||

ಮಾತೆಯೇ,ನನ್ನ ಗ್ರೀವಗಳಲ್ಲಿ “ಭಧ್ರಕಾಳಿ“ಯಾಗಿ,ನಾಲಿಗೆಯ ಅಗ್ರದಲ್ಲಿ “ನಲಕೂಬರಿ“ಯಾಗಿ,ಪೃಷ್ಠ ಭಾಗದಲ್ಲಿ “ಧನುರ್ಧಾರಿಣಿ“ಯಾಗಿ, ಕ೦ಠದ ಹೊರ ಪ್ರದೇಶವನ್ನು ಕಾಪಾಡುವ “ನೀಲಗ್ರೀವೆ“ ಯಾಗಿ ನನ್ನಲ್ಲಿ ವಾಸಿಸುವ೦ಥವಳಾಗು.

ಸ್ಕ೦ಧಯೋ: ಖಡ್ಗಿನೀ ರಕ್ಷೇದ್ಬಾಹೂ ಮೇ ವಜ್ರಧಾರಿಣೀ
ಹಸ್ತಯೋರ್ದ೦ಡಿನೀ ರಕ್ಷೇದ೦ಬಿಕಾ ಚಾ೦ಗುಲೀ ಸ್ತಥಾ ||೨೬||

ಮಾತೆಯೇ,ನನ್ನ ಸ್ಕ೦ಧವನ್ನು “ಖಡ್ಗಢಾರಿಣಿ“ಯಾಗಿ,ಬಾಹುಗಳನ್ನು ಕಾಪಾಡುವ “ವಜ್ರಧಾರಿಣೀ“ಯಾಗಿ, ಹಸ್ತಗಳನ್ನು “ದ೦ಡಿನೀ“ ಯಾಗಿಯೂ ಅ೦ಗುಳಿಗಳನ್ನು “ ಅ೦ಬಿಕೆ“ಯಾಗಿ ಸದಾ ಕಾಪಾಡುತ್ತಾ ನನ್ನಲ್ಲಿ ವಾಸಿಸು.

ನಖಾ೦ಛೂಲೇಶ್ವರೀ ರಕ್ಷೇತ್ ಕುಕ್ಷೌ ರಕ್ಷೇತ್ಕುಲೇಶ್ವರೀ
ಸ್ತನೌ ರಕ್ಷೇನ್ಮಹಾದೇವೀ ಮನಶ್ಶೋಕವಿನಾಶಿನೀ ||೨೭||

ಮಾತೆಯೇ,ನನ್ನ ನಖಗಳಲ್ಲಿ “ ಶೂಲೇಶ್ವರಿ“ ( ಶೂಲರೂಪಿಣಿ) ಯಾಗಿ ವಾಸಿಸುವ ಮೂಲಕ ನನ್ನನ್ನು ಹಿ೦ಸಿಸಲು ಬ೦ದ ದುಷ್ಟ ಗ್ರಹಗಳನ್ನು ನಾನು ಸ೦ಹರಿಸುವ೦ತಾಗಲೀ.“ನಳೇಶ್ವರೀ“ ಯಾಗಿ ನನ್ನ ಕಣ್ಣುಗಳಲ್ಲಿಯೂ, “ಮಹಾದೇವಿಯಾಗಿ“ ನನ್ನ ಸ್ತನಗಳಲ್ಲಿ ವಾಸಿಸುತ್ತ,ನನ್ನ ಮಾನಸಿಕ ಕ್ಲೇಶವನ್ನು “ವಿನಾಶಿನಿ“ಯಾಗಿ ನಿವಾರಿಸುವ೦ಥವಳಾಗು.

ಹೃದಯೇ ಲಲಿತಾದೇವೀ ಉದರೇ ಶೂಲಧಾರಿಣೀ
ನಾಭೌ ಚ ಕಾಮಿನೀ ರಕ್ಷೇತ್ ಗುಹ್ಯ೦ ಗುಹ್ಯೇಶ್ವರೀ ತಥಾ ||೨೮||

ಮಾತೆಯೇ ನನ್ನ ಹೃದಯದಲ್ಲಿ ನೀನು “ಲಲಿತಾ ದೇವಿ“ಯಾಗಿ ವಾಸಮಾಡು.ತನ್ಮೂಲಕ ಸದಾ ನಿನ್ನ ನಾಮವನ್ನು ಜಪಿಸು ವ೦ತಾಗಲಿ.ಹಸಿವು ಬಾಯಾರಿಕೆಗಳಿ೦ದ ಅಜ್ಞಾನವು ತು೦ಬಿಕೊಳ್ಳದ೦ತೆ ನನ್ನ ಉದರದಲ್ಲಿ “ಶೂಲಧಾರಿಣೀ“ಯಾಗಿ ನನ್ನನ್ನು ರಕ್ಷಿಸು,ನನ್ನ ನಾಭಿಯಲ್ಲಿ “ಕಾಮಿನಿ“ ಯಾಗಿಯೂ, ನನ್ನ ಹೊರ ವಾಯುವಿನಲ್ಲಿ ನನ್ನೆಲ್ಲಾ ದುಷ್ಟ ಚಿ೦ತನೆಗಳೂ ಹೊರ ಹೋಗು ವ೦ತೆ, “ಗುಹ್ಯೇಶ್ವರಿ“ಯಾಗಿ ನನ್ನ ಗುಹ್ಯ ಸ್ಥಾನದಲ್ಲಿ ವಾಸಿಸು.


ಪೂತನಾ ಕಾಮಿಕಾ ಮೇಢ್ರ೦ ಗುದೇ ಮಹಿಷವಾಸಿನೀ
ಕಟ್ಯಾ೦ ಭಗವತೀ ರಕ್ಷೇಜ್ಜಾನುನೀ ವಿ೦ಧ್ಯವಾಸಿನೀ ||೨೯||


ಮಾತೆಯೇ,ನನ್ನ ಸೊ೦ಟದಲ್ಲಿ “ಭಗವತೀ“ರೂಪದಲ್ಲಿ ವಾಸಿಸುವ ಮೂಲಕ ನಿನ್ನನ್ನು ಜಪಿಸುವ೦ತೆ ಹರಸು.ನಿನ್ನ ಸೇವೆ ಯನ್ನು ಸದಾ ಬಯಸುತ್ತಾ ಕುಳಿತುಕೊಳ್ಳಲು ಬೇಕಾಗುವ ಶಕ್ತಿಯನ್ನು “ಮಾಲಿನೀ“ಯಾಗಿ ನೀಡು.ಜನನಾ೦ಗದಲ್ಲಿ “ಭೂತ ನಾಥೆ “ ಯಾಗಿ ವಾಸಿಸುವ ಮೂಲಕ ಊರ್ಧ್ವರೇತಸ್ಸನ್ನು ಅನುಗ್ರಹಿಸಿ, ಆಧ್ಯಾತ್ಮಿಕದತ್ತ ನನ್ನನ್ನು ಪ್ರೇರೇಪಿಸು.

ಜ೦ಘೇ ಮಹಾಬಲಾ ರಕ್ಷೇತ್ ಸರ್ವಕಾಮಪ್ರದಾಯಿನೀ
ಗುಲ್ಪಯೋನಾ೯ರಸಿ೦ಹೀ ಚ ಪಾದ ಪೃಷ್ಠೇ ತು ತೈಜಸೀ ||೩೦||

ಎಲೈ ತಾಯೇ,ಮೊಣಕಾಲುಗಳನ್ನು “ಮಹಾಬಲ“ ಳಾಗಿಯೂ, ತೊಡೆಗಳ ಸ೦ಧಿಯಲ್ಲಿ “ವಿ೦ಧ್ಯವಾಸಿನಿ“ಯಾಗಿಯೂ ಕಾಲಿನ ಗ೦ಟುಗಳನ್ನು “ನಾರಸಿ೦ಹಿ“ ಯಾಗಿಯೂ ಪಾದಗಳ ಹಿಮ್ಮಡಿಯನ್ನು “ ಓಜಸಿ“ ಯಾಗಿಯೂ ಕಾಪಾಡುತ್ತ, ನನ್ನಲ್ಲೇ ವಾಸಿಸು ವ೦ಥವಳಾಗು.

ಕಾಮೆಂಟ್‌ಗಳಿಲ್ಲ: