ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಮಂಗಳವಾರ, ಸೆಪ್ಟೆಂಬರ್ 13, 2011

ಮಾಯೆ-೩

ಬ್ರಹ್ಮನನು ಅರಿತಿಲ್ಲ.. ನಾ ಬ್ರಾಹ್ಮಣನಲ್ಲಾ..
ಜನಿವಾರವಿಹುದಲ್ಲಾ.. ಅದ ನಾ ಕಿತ್ತೊಗೆದಿಲ್ಲ..
ಸ೦ಸ್ಕಾರವಿದಯ್ಯಾ.. ನಾಮದಲಿ ನಾ ದ್ವಿಜ..
ಸ೦ಸ್ಕಾರದೊಳೂ ಕಾಣುವರು ಬ್ರ್ತಹ್ಮನನು 
ಎನ್ನ೦ತರ೦ಗದೇವಾ.. ನಾನಾವ ಬ್ರಾಹ್ಮಣನಯ್ಯ..
ನಿನ್ನರಿಯಲಾಗದವನು...

ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...
ಬಾಯಿದ್ದವರೆಲ್ಲಾ ಮಾತಾಡರಯ್ಯಾ..
ಆ೦ತರ್ಯದಾ ಚಕ್ಷುಗಳಿ೦ದ ಕಾಣಲು
ನೀನಾರೆ೦ಬುದನು ಅರಿವೆವಯ್ಯಾ..
ಕಣ್ಣಿದ್ದರೂ ಎನಗೆ ಎನ್ನ ರೂಪವು ಕಾಣಿಸದಯ್ಯಾ..
ಎನ್ನ೦ತರ೦ಗದೇವಾ..ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..

2 ಕಾಮೆಂಟ್‌ಗಳು:

kavinagaraj ಹೇಳಿದರು...

ಸುಂದರ ಭಾವ, ನಾವಡರೇ.

KALADAKANNADI ಹೇಳಿದರು...

ಧನ್ಯವಾದಗಳು ಕವಿನಾಗರಾಜರೇ..ಆಗಾಗ ಬರುತ್ತಿರಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.